ಮನೆ ಸ್ಥಳೀಯ ಹೋಲ್ಡ್‌ಸ್‌ ವರ್ತ್‌ ಮೆಮೋರಿಯಲ್‌ ಆಸ್ಪತ್ರೆ ನೌಕರರ ಪ್ರತಿಭಟನೆ: ಸಮಸ್ಯೆ ಆಲಿಸಿದ ಶಾಸಕ ಹರೀಶ್ ಗೌಡ

ಹೋಲ್ಡ್‌ಸ್‌ ವರ್ತ್‌ ಮೆಮೋರಿಯಲ್‌ ಆಸ್ಪತ್ರೆ ನೌಕರರ ಪ್ರತಿಭಟನೆ: ಸಮಸ್ಯೆ ಆಲಿಸಿದ ಶಾಸಕ ಹರೀಶ್ ಗೌಡ

2 ನೌಕರರು ಆತ್ಮಹತ್ಯೆ ಯತ್ನ:  ಮಂಡಿ ಪೊಲೀಸರಿಂದ ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಪತ್ರ

0

ಮೈಸೂರು: ಮಿಷನ್ ಆಸ್ಪತ್ರೆ ಎಂದೇ ಖ್ಯಾತವಾಗಿರುವ ಹೋಲ್ಡ್‌ಸ್‌ ವರ್ತ್‌ ಮೆಮೋರಿಯಲ್‌ ಆಸ್ಪತ್ರೆ ನೌಕರರು ಬಾಕಿ ಉಳಿದಿರುವ ವೇತನ ಪಾವತಿ ಬಗ್ಗೆ 18 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಇಂದು ಚಾಮರಾಜ ಕ್ಷೇತ್ರದ ಶಾಸಕರಾದ ಹರೀಶ್ ಗೌಡ ಅವರು ಭೇಟಿ ನೀಡಿ ಸಮಸ್ಯೆ ಆಲಿಸಿದರು.

Join Our Whatsapp Group

ಹೋಲ್ಡ್ಸ್‌ ವರ್ತ್ ಮೆಮೋರಿಯಲ್ ಹಾಸ್ಪಿಟಲ್ (ಮಿಷನ್ ಆಸ್ಪತ್ರೆ) ಎಂಪ್ಲಾಯಿಸ್ ಯೂನಿಯನ್, ‘ಡಿ’ ಗ್ರೂಪ್ ಕಾರ್ಯಕರ್ತರು, ಮಹಿಳಾ ಮತ್ತು ಪುರುಷ ನರ್ಸಿಂಗ್ ಸಿಬ್ಬಂದಿ ಮತ್ತು ವಾರ್ಡನ್‌ಗಳನ್ನು ಒಳಗೊಂಡಿದ್ದು,ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕಳೆದ 18ದಿನದಿಂದ ಪ್ರತಿಭಟನೆ ಮಾಡುತ್ತಿದ್ದು, ಅಧಿಕಾರಿಗಳು ಸಂಬಳ, ಇಎಸ್‌ಐ, ಪಿಎಫ್ ಮತ್ತು ಇತರ ಶಾಸನಬದ್ಧ ಸವಲತ್ತುಗಳನ್ನು ಪಾವತಿಸಿಲ್ಲ ಎಂದು ಆರೋಪಿಸಿದರು.

ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ವತಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಸಿದ್ದಾರೆ. ಸಿಎಸ್‌ಐ ಹೋಲ್ಡ್ಸ್‌ವರ್ತ್ ಸ್ಮಾರಕ (ಮಿಷನ್) ಆಸ್ಪತ್ರೆ ನೌಕರರ ಸಂಘದ ನೇತೃತ್ವದಲ್ಲಿ ಕಳೆದ 18 ದಿನದಿಂದ ಪ್ರತಿಭಟನೆ ನಡೆಯುತ್ತಿದೆ.

ಇಬ್ಬರು ನೌಕರರು ಸೋಮವಾರ ಪ್ರತಿಭಟನೆ ವೇಳೆ ಫಿನೈಲ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಏತನ್ಮಧ್ಯೆ, ಮಂಡಿ ಪೊಲೀಸರು ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.