ಮನೆ ಸ್ಥಳೀಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಂಗನವಾಡಿ ಹಾಗೂ  ಶಾಲಾ ಮಕ್ಕಳಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸಿ : ಎಸ್ . ಯುಕೇಶ್ ಕುಮಾರ್

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಂಗನವಾಡಿ ಹಾಗೂ  ಶಾಲಾ ಮಕ್ಕಳಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸಿ : ಎಸ್ . ಯುಕೇಶ್ ಕುಮಾರ್

0

ಮೈಸೂರು : ಆರ್ .ಬಿ .ಎಸ್ . ಕೆ . ಕಾರ್ಯಕ್ರಮದ ಪ್ರಗತಿಯನ್ನು ಉತ್ತಮಗೊಳಿಸಲು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಹಲವು ಕ್ರಮಗಳನ್ನು ಕೈಗೊಳ್ಳಬೇಕು , ಹೆಚ್ಚಿನ ಚಿಕಿತ್ಸೆಗೆ ರೆಫರ್ ಮಾಡಲಾದವರಿಗೆ ಸೂಕ್ತ ಫಾಲೋ ಅಪ್ ಮಾಡುವುದು ಮತ್ತು ಕಡ್ಡಾಯವಾಗಿ ಪೂರೈಸಲು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಎಸ್ . ಯುಕೇಶ್ ಕುಮಾರ್ ಅವರು ಹೇಳಿದರು .

ಜುಲೈ 10 ರಂದು ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಅನುಭವ ಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದೆ .

ಹೃದಯ ಸಂಬ ಒ ಧ ಖಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ಮತ್ತು ಶಸ್ತ ç ಚಿಕಿತ್ಸೆ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು . ಶಾಲಾ ಮತ್ತು ಅಂಗನವಾಡಿ ಕೇಂದ್ರಕ್ಕೆ ಸೂಕ್ತ ಆರೋಗ್ಯ ತಪಾಸಣೆ ನಡೆಸಿ ಶೀಘ್ರ ಪತ್ತೆ ಚಿಕಿತ್ಸೆ ನೀಡುವ ಮೂಲಕ ಮಕ್ಕಳಲ್ಲಿ ಕಂಡು ಬರುವ​ ನ್ಯೂನತೆ ಮತ್ತು ಖಾಯಿಲೆಗಳನ್ನು ( 4D ಗಳ ಆರಂಭಿಕ ಪತ್ತೆ ಮತ್ತು ನಿರ್ವಹಣೆ ) ಹಾಗೂ  ಶಸ್ತ ç ವೈದ್ಯಕೀಯ  ಚಿಕಿತ್ಸೆ ನೀಡುವುದು  ಈ ಮೂಲಕ ಶಿಶು  ಮರಣ ಆಸ್ಪತ್ರೆ ಕಡಿಮೆಗೊಳಿಸುವ ಕ್ರಮವಹಿಸಬೇಕು ಎಂದು .​

ಶಿಶು ಮರಣ ಪ್ರಕರಣಗಳಲ್ಲಿ ತಡೆಗಟ್ಟಬಹುದಾದ ( ತಡೆಗಟ್ಟಬಹುದಾದ ಇ ) ಪ್ರಕರಣಗಳು ಕಡಿಮೆ ಪ್ರಮಾಣಕ್ಕೆ ಇಳಿಸಲು ಅಗತ್ಯವಿರುವ ತುರ್ತು ಕ್ರಮ ತೆಗೆದುಕೊಳ್ಳಬೇಕಾಗಿದೆ . ಶಿಶು ಮರಣ ಪ್ರಕರಣಗಳ ತಾಲ್ಲೂಕುವಾರು ಸಂಪೂರ್ಣ ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ಸೌಲಭ್ಯ ಮತ್ತು ಸಮುದಾಯ ಮಟ್ಟDrmï ನಡೆಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ವರದಿಯನ್ನು ಸಲ್ಲಿಸಲು ಸೂಚಿಸಿದರು .

ತಾಯಿ ಮರಣ ಪ್ರಕರಣಗಳಲ್ಲಿ ಜಿಲ್ಲಾ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯು ಸ್ಪಷ್ಟ ಅಭಿಪ್ರಾಯದ  ವರದಿಯನ್ನು ಪಡೆದು ಆ ವರದಿಯ  ಆಧಾರದ ಮೇಲೆ ತಪ್ಪಿತಸ್ಥರ  ವಿರುದ್ಧ ಕ್ರಮಕೈಗೊಳ್ಳಲು ಇಲಾಖಾ ಅಧಿಕಾರಿಗಳು . ಕಾಯಕಲ್ಪ ಕಾರ್ಯಕ್ರಮದ ಪ್ರಗತಿಯಲ್ಲಿ 2025-26 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶೇ 100 ರಷ್ಟು ಗುರಿ  ಸಾಧಿಸಲು ಸೂಚಿಸಿದರು . ಎಲ್ಲಾ ಆರೋಗ್ಯ ಕೇಂದ್ರಗಳು ಯಾವ ತಾಲ್ಲೂಕು ಮತ್ತು ಯಾವ ಸಂಸ್ಥೆಗಳಲ್ಲಿ ಬಾಕಿ ಇದೆ ಎಂದು ಮುಂದಿನ ಮೂರು ತಿಂಗಳ ಅಂತರಿಕ ,​ ರಾಜ್ಯ ಮತ್ತು ರಾಷ್ಟ್ರೀಯ ಮೌಲ್ಯಮಾಪನದಲ್ಲಿ ಶೇ .100 ರಷ್ಟು ಪ್ರಗತಿ ಸಾಧಿಸಲು ಕ್ರಮವಹಿಸುವಂತೆ ಎಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಸಂಬ ಒ ಧಪಟ್ಟ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಸೂಚಿಸುವಂತೆ ನಿರ್ದೇಶನ .

ಗ್ರಾಮ ಪಂಚಾಯತ್ ನಲ್ಲಿ ನಡೆಯುವ ಪಿ . ಡಿ . ಓಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚಿಸಿ ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಅಧಿಕಾರಿಗಳ ಮಾಸಿಕ​ಸಭೆಯಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿಗಳು /  ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಸಂಬ   ಧಪಟ್ಟ ವೈದ್ಯಾಧಿಕಾರಿಗಳು  ಭಾಗವಹಿಸಲು ಸೂಚಿಸಿದರು .  ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ವೈದ್ಯಕೀಯ ಘನ ಬಯೋ ಮೆಡಿಕಲ್  ತ್ಯಾಜ್ಯ ವಸ್ತುಗಳ ವಿಲೇವಾರಿ  ನಿರ್ವಹಣೆ ಸರ್ಕಾರ ನಿಗಧಿಪಡಿಸಿರುವ ಮಾರ್ಗಸೂಚಿ ಅನುಸಾರ ಕ್ರಮವಹಿಸಲು ಸೂಚಿಸಿದರು .

ಸಮಗ್ರ ರೋಗಗಳ ಸರ್ವೇಕ್ಷಣಾ ಕಾರ್ಯಕ್ರಮ (IDSP ) ದಡಿ ಕೋವಿಡ್ , ಇನ್ಫ್ಲುಯೆನ್ಸ H1N1 , , ನಾಯಿ ಕಡಿತ ಮತ್ತು ಹಾವು ಕಡಿತ ಪ್ರಕರಣಗಳು ವದರಿಯಾದ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಕೊಳ್ಳಲು ಸೂಚಿಸಿದರು .

ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ( NTEP ):- NTEP ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಟಿ . ಬಿಗಳ 2025 ರ ಜನವರಿ ಮಾಹೆಯಿಂದ ಜೂನ್ ಅಂತ್ಯದವರೆಗೆ ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲೆಯಲ್ಲಿ ಈವರೆಗೂ 75 , ಮರಣ ಹೊಂದಿದ್ದು ಶೇ .7 ಪ್ರಮಾಣದಲ್ಲಿದ್ದು ಇದು ಹೆಚ್ಚಾಗುತ್ತದೆ . ಶೇ . 5 ರೊಳಗಿರಬೇಕು . 75 ಟಿಬಿ ಸಾವಿನ ಪ್ರಕರಣಗಳ ಡೆತ್ ಆಡಿಟ್ ವರದಿಯನ್ನು ವೈದ್ಯಾಧಿಕಾರಿಗಳ ದೃಢೀಕರಣದೊಂದಿಗೆ ಎಸ್ . ಟಿ , ಎಸ್ ಸಿಬ್ಬಂದಿಗಳು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಪ್ರಕಟಿಸಿದರು .

ರಾಷ್ಟ್ರೀಯ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮದ ಸರ್ವೇಕ್ಷಣಾ ಕಾರ್ಯ ಚಟುವಟಿಕೆಯು ಪ್ರತಿ ಬುಧವಾರದಂದು ಕ್ಷೇತ್ರ ಮಟ್ಟದಲ್ಲಿ ಕಾರ್ಯ ಪ್ರಸ್ತುತ ಅದರಂತೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 78 ಪ್ರಕರಣಗಳು ದೃಢಪಟ್ಟಿವೆ . ಈ ಮೇಲಿನ ತಿ . ನರಸೀಪುರ ಹಾಗೂ ನಂಜನಗೂಡು ಮತ್ತು ಮೈಸೂರಿನ ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿವೆ ಈ ಸಂಬ ಒ ಧಪಟ್ಟ ವೈದ್ಯಾಧಿಕಾರಿಗಳು ಆದ್ಯತೆಯ ಸರ್ವೇಕ್ಷಣ ಕಾರ್ಯ ಚಟುವಟಿಕೆಯನ್ನು ತ್ವರಿತಗೊಳಿಸಿ ಸಂಶಯಾತ್ಮಕ ಪ್ರಕರಣಗಳನ್ನು ಜಿಲ್ಲಾ ಮಟ್ಟಕ್ಕೆ​ ತುರ್ತಾಗಿ ವರದಿ ಮಾಡಿದೆ ಎಂದು ಹೇಳಿದರು .

ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಅನುಷ್ಠಾನವಾಗುತ್ತಿರುವ ಮನೋಚೈತನ್ಯ ಸಲಹಾ ಕೇಂದ್ರವನ್ನು ಪ್ರತಿ ಮಂಗಳವಾರದಂದು ಕಡ್ಡಾಯವಾಗಿ​ ನಿರ್ವಹಿಸುವುದು ಹಾಗೂ ಸಂಬ ಒ ಧಪಟ್ಟ ಪೋಟೊ ಪ್ರತಿಗಳನ್ನು ವಾಟ್ಸ್ ಆಪ್ ಮೂಲಕ ಹಂಚಿಕೊಳ್ಳಬೇಕು . ಎಲ್ಲಾ ವೃಂದದ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ KAMS ಮೂಲಕ ಶೇ .100 ಹಾಜರಾತಿಯನ್ನು ಸೂಚಿಸಲಾಗಿದೆ .

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು , ಜಿಲ್ಲಾ ಆರ್ . ಸಿ . ಹೆಚ್ . ಅಧಿಕಾರಿಗಳು , ಮೈಸೂರು . ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿಗಳು , ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು , ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು , ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು , ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳು , ಜಿಲ್ಲಾ ಕಾಲರ ನಿಯಂತ್ರಣಾಧಿಕಾರಿಗಳು , ತಾಲ್ಲೂಕು ಆರೋಗ್ಯಾಧಿಕಾರಿಗಳು , ಸೇರಿದಂತೆ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿಗಳು , ಜಿಲ್ಲಾ ಶುಶ್ರೂಷಣಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಸೇರಿದ್ದಾರೆ .