ಮಂಡ್ಯ: ಮಹಿಳೆ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಅಯ್ಯನ ಗೌಡರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.
ಮಂಡ್ಯದ ಅಶೋಕ್ ನಗರದ ರೂಪ ಮೇಲೆ ದೌರ್ಜನ್ಯ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಯ್ಯನಗೌಡ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಸೇವೆಯಿಂದ ಅಮಾನತು ಮಾಡಲಾಗಿದೆ.
ವಿವೇಕಾನಂದ ರಸ್ತೆಯ ರವಿ ನರ್ಸಿಂಗ್ ಹೋಮ್ ಬಳಿ ಪೊಲೀಸ್ ಪೇದೆ ವನಜಾಕ್ಷಿ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಹಸು ಅಡ್ಡ ಬಂದಿದ್ದು,ಇದರಿಂದ ಮಹಿಳಾ ಪೇದೆ ಹಸು ಸಾಕಾಣಿಕೆದಾರರಿಗೆ ನಿಂದನೆ ಮಾಡಿದ್ದು,ಇದೇ ವಿಚಾರವಾಗಿ ಪೂರ್ವ ಠಾಣೆಯ ಸಬ್ ಇನ್ ಸ್ಪೆಕ್ಟರ್ ಅಯ್ಯನಗೌಡ ಸ್ಥಳಕ್ಕೆ ತೆರಳಿ ಜೀಪ್ ಚಾಲಕನ ಜೊತೆ ಸೇರಿ ಮಹಿಳೆ ರೂಪರನ್ನು ಬಲವಂತವಾಗಿ ಜೀಪ್ ಗೆ ಹತ್ತಿಸಿಕೊಂಡು ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಅನಂತರ ಠಾಣೆಯ ಕೊಠಡಿಯಲ್ಲಿ ಕೂಡಿ ಹಾಕಿ ಅಯ್ಯನಗೌಡ ಮತ್ತು ಇತರೆ ಪೊಲೀಸರು ಮಹಿಳೆಯ ಮೇಲೆ ಮನಸೋ ಇಚ್ಚೆ ಥಳಿಸಿದ್ದಾರೆ.
ರೂಪಳ ತಾಯಿ ಗೌರಮ್ಮ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಎಸ್ಐ ಅಯ್ಯನಗೌಡನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.