Saval TV on YouTube
ರಾಯಚೂರು(Raichuru): ಕರ್ತವ್ಯ ಲೋಪದ ಆರೋಪದ ಮೇಲೆ ಸಿರವಾರ ಪೊಲೀಸ್ ಠಾಣೆಯ ಪಿಎಸ್’ಐ ಗೀತಾಂಜಲಿ ಶಿಂಧೆ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಓರ್ವ ಯುವಕ ಡೆತ್’ನೋಟ್ ನಲ್ಲಿ ಪಿಎಸ್’ಐ ಹೆಸರು ಬರೆದಿಟ್ಟು ನಾಪತ್ತೆಯಾಗಿದ್ದ. ಜಮೀನು ವಿಚಾರಕ್ಕೆ ಅನಾವಶ್ಯಕವಾಗಿ ತಲೆದೂರಿಸಿ ಮೂರು ತಿಂಗಳಿಂದ ಸತತ ಕಿರುಕುಳ ನೀಡಿದ್ದರು ಎಂಬುದಾಗಿ ಡೆತ್’ನೋಟ್‌ನಲ್ಲಿ ಯುವಕ ಆರೋಪಿಸಿದ್ದ
ಈ ಕುರಿತು ಸಿರವಾರ ಠಾಣೆಯಲ್ಲಿ ಪಿಎಸ್’ಐ ವಿರುದ್ಧ ಕೇಸ್ ಸಹ ದಾಖಲಾಗಿತ್ತು. ಮೂರು ದಿನಗಳ ಬಳಿಕ ಯುವಕನನ್ನು ಪತ್ತೆಹಚ್ಚಿ ಮರಳಿ ಕರೆದುಕೊಂಡು ಬಂದಿದ್ದರು.