ಮನೆ ರಾಜ್ಯ ಪಿಎಸ್‌ ಐ ನೇಮಕಾತಿ: 50 ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಬಂಧನ; ಸಚಿವ ಅರಗ ಜ್ಞಾನೇಂದ್ರ

ಪಿಎಸ್‌ ಐ ನೇಮಕಾತಿ: 50 ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಬಂಧನ; ಸಚಿವ ಅರಗ ಜ್ಞಾನೇಂದ್ರ

0

ಬೆಂಗಳೂರು (Bengaluru): ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಂಧನ ಆಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, ಸಾಕ್ಷಿ ಸಿಕ್ಕ ಬಳಿಕ ಸಿಐಡಿ ತನಿಖೆಗೆ ಸೂಚಿಸಿ ಸರ್ಕಾರ ಹಸ್ತಕ್ಷೇಪ ಮಾಡದೇ ಪಾರದರ್ಶಕ ತನಿಖೆ ನಡೆಸಿದೆ. ಎಡಿಜಿಪಿ ಅರೆಸ್ಟ್ ಆಗಿದೆ. ಐವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಂಧನ ಆಗಿದೆ ಎಂದರು.

ಕಾಂಗ್ರೆಸ್ ಮುಖಂಡರ ಪತ್ರಿಕಾಗೋಷ್ಠಿ ನೋಡಿದ್ದೇನೆ. ಕಾಂಗ್ರೆಸ್ ಏನನ್ನು ಬಯಸುತ್ತಾರೆ ಎಂದು ಗೊತ್ತಾಗುತ್ತಿಲ್ಲ. ಈ ಹಿಂದೆ ಪರೀಕ್ಷೆಯಲ್ಲಿ ಅವ್ಯಾಹತವಾಗಿ ಇಂತ ಪ್ರಕರಣ ನಡೆದಿದೆ. ಇವರೆ ಕೆಂಪಣ್ಣ ಆಯೋಗ ಸೃಷ್ಟಿ ಮಾಡಿದ್ರು ಸಿದ್ದರಾಮಯ್ಯ. ರಿಡು ಕೇಸ್ ನಲ್ಲಿ ಅದು ಏನಾಯ್ತು? ಆರ್ ಡಿ ಪಾಟೀಲ್ ಹಾಗೂ ಪ್ರಮುಖರು ಈ ಹಗರಣದಲ್ಲಿ ಸಿಲುಕಿದ್ದಾರೆ. ಈ ಪ್ರಕರಣ ಮುಚ್ಚಿ ಹಾಕಿದ್ವಾ? ಹಗರಣ ಬಯಲಿಗೆ ಎಳೆದಿದ್ದು ತಪ್ಪಾ? ಅದಕ್ಕೆ ರಾಜೀನಾಮೆ ಕೊಡಬೇಕಾ ಎಂದು ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದರು.

ಈ ಹಿಂದೆ ಇವರ ಕಾಲದಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಆಗ ಯಾಕೆ ಇವರಿಗೆ ಬಂಧನ ಮಾಡೋಕೆ ಆಗಿಲ್ಲ ಎಂದು ಪ್ರಶ್ನಿಸಿದ ಗೃಹ ಸಚಿವರು, ಶ್ರೀಧರ್ ಎನ್ನೋರು ಲೀಕ್ ಮಾಡಿದ್ರು. ಆಗ ಯಾಕೆ ನಿಮಗೆ ಅಧಿಕಾರಿ ಬಂಧನ ಮಾಡೋಕೆ ಆಗಿಲ್ವಾ? ನಾವು ಈಗ ಎಡಿಜಿಪಿ ಬಂಧನ ಮಾಡಿದ್ವಿ. ಅಲ್ಲದೇ ಕಾನ್ಸ್‌ಟೇಬಲ್ ಕೆಲಸ ಕೊಡಿಸೋದಾಗಿ 18 ಕೋಟಿ ಪಡೆದಿದ್ರು. ಆಗ ಅವರನ್ನು ಯಾಕೆ ಬಂಧನ ಮಾಡಿಲ್ಲ ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದರು.