ಮನೆ ರಾಜ್ಯ ಪಿಎಸ್‌ ಐ ನೇಮಕಾತಿ ಹಗರಣ: ಬಂಧಿತ ನಾಲ್ವರ ಜಾಮೀನು ಅರ್ಜಿ ತಿರಸ್ಕಾರ

ಪಿಎಸ್‌ ಐ ನೇಮಕಾತಿ ಹಗರಣ: ಬಂಧಿತ ನಾಲ್ವರ ಜಾಮೀನು ಅರ್ಜಿ ತಿರಸ್ಕಾರ

0

ಕಲಬುರಗಿ (kalaburagi)- ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದಲ್ಲಿ ಬಂಧಿತರಾದ ನಾಲ್ವರ ಜಾಮೀನು ಅರ್ಜಿಯನ್ನು ಇಲ್ಲಿನ ಮೂರನೇ ಜೆಎಂಎಫ್‌ ನ್ಯಾಯಾಲಯ ತಿರಸ್ಕರಿಸಿದೆ.

ನಗರದ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ, ಮುಖ್ಯಶಿಕ್ಷಕ ಕಾಶಿನಾಥ ಹಣಮಂತರಾಯ ಚಿಲ್, ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ ಮತ್ತು ಅಭ್ಯರ್ಥಿ ಎನ್‌.ವಿ. ಸುನೀಲಕುಮಾರ ಅರ್ಜಿಗಳನ್ನು, ಮೂರನೇ ಜೆಎಂಎಫ್‌ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ನೇಸರಗಿ ತಿರಸ್ಕರಿಸಿದರು.

ಸಿಐಡಿ ಪರ ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ವಾದ ಮಂಡಿಸಿದರು. 2021ರ ಅಕ್ಟೋಬರ್‌ 3ರಂದು 545 ಪಿಎಸ್ಐ ನೇಮಕಾತಿಗಾಗಿ ಪರೀಕ್ಷೆ ನಡೆದಿತ್ತು. ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆ ಬರೆದ 11 ಅಭ್ಯರ್ಥಿಗಳು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಇದ್ದರು. 7 ಅಭ್ಯರ್ಥಿಗಳೂ ಸೇರಿ ಒಟ್ಟು 32 ಮಂದಿಯನ್ನು ಸಿಐಡಿ ತಂಡ ಬಂಧಿಸಿದೆ.

ಹಿಂದಿನ ಲೇಖನಬಾಂಗ್ಲಾ ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗಳಿ ಜೀವಾವಧಿ ಶಿಕ್ಷೆ
ಮುಂದಿನ ಲೇಖನಜ್ಞಾನವಾಪಿ ಮಸೀದಿ ಪ್ರಕರಣವನ್ನು ಜಿಲ್ಲಾ ಕೋರ್ಟ್ ನ್ಯಾಯಾಧೀಶರಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್‌