ಮನೆ ರಾಜ್ಯ ಪಿಎಸ್​ಐ ನೇಮಕಾತಿ ಹಗರಣ: ಸಿಐಡಿಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

ಪಿಎಸ್​ಐ ನೇಮಕಾತಿ ಹಗರಣ: ಸಿಐಡಿಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

0

ಬೆಂಗಳೂರು(Bengaluru): ಪಿಎಎಸ್ ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಇಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.

ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದೆ‌.

3,065 ಪುಟಗಳ ಚಾರ್ಜ್ ಶೀಟ್​ನಲ್ಲಿ 202 ವಿಟ್ನೆಸ್​ಗಳು, 330 ದಾಖಲಾತಿಗಳನ್ನು 30 ಆರೋಪಿಗಳ ವಿರುದ್ಧ ಸೇರಿಸಲಾಗಿದೆ. ಅಮಾನತುಗೊಂಡಿರುವ ಎಡಿಜಿಪಿ ಅಮೃತ್ ಪಾಲ್ ಸೇರಿದಂತೆ ಕೆಲ ಅರೋಪಿಗಳನ್ನು ಬಿಟ್ಟು ಉಳಿದ ಅರೋಪಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಅಮೃತ್ ಪಾಲ್ ವಿರುದ್ಧದ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಲು ಸಾಕಷ್ಟು ಕಾಲಾವಕಾಶ ಇದ್ದು, ಹೆಚ್ಚಿನ ಮಾಹಿತಿಯನ್ನು ಸಿಐಡಿ ಕಲೆ ಹಾಕುತ್ತಿದೆ‌.

ಸದ್ಯ ಸಂಪೂರ್ಣ ತನಿಖೆ ಮುಗಿದವರ ವಿರುದ್ಧ ಮಾತ್ರ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಎಫ್ಐಆರ್ ನಲ್ಲಿ ಹೆಸರಿದ್ದು, ಅರೆಸ್ಟ್ ಆಗದೇ ಇರುವ ಅರೋಪಿಗಳು ಹಾಗೂ ಕೊನೆ ಹಂತದಲ್ಲಿ ಬಂಧಿತರಾಗಿರುವ ಅರೋಪಿಗಳ ವಿರುದ್ಧ ಚಾರ್ಜ್ ಶೀಟ್​ನಲ್ಲಿ ಸೇರಿಸಲಾಗಿಲ್ಲ ಎಂದು ತಿಳಿದುಬಂದಿದೆ‌.