ಮನೆ ರಾಜ್ಯ ಪಿಎಸ್‌ ಐ ಅಕ್ರಮ ನೇಮಕಾತಿ: ದಿವ್ಯ ಹಾಗರಗಿ ಗೌರವಯುತವಾಗಿ ಶರಣಾಗಲಿ; ಆರಗ ಜ್ಞಾನೇಂದ್ರ

ಪಿಎಸ್‌ ಐ ಅಕ್ರಮ ನೇಮಕಾತಿ: ದಿವ್ಯ ಹಾಗರಗಿ ಗೌರವಯುತವಾಗಿ ಶರಣಾಗಲಿ; ಆರಗ ಜ್ಞಾನೇಂದ್ರ

0

ಬೆಂಗಳೂರು (Bengaluru)-ಪಿಎಸ್‌ ಐ ಅಕ್ರಮ ನೇಮಕಾತಿ (PSI Recruitment scam) ಪ್ರಕರಣ ಆರೋಪಿಯಾಗಿರುವ ದಿವ್ಯ ಹಾಗರಗಿ (Divya Hagaragi )ಅವರು ಗೌರವಯುತವಾಗಿ ಬಂದು ಶರಣಾಗಬೇಕು ಎಂದು ಗೃಹ ಸಚಿವ (Home Minister) ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಇದುವರೆಗೂ ದಿವ್ಯ ಹಾಗರಗಿ ಬಂಧನ ಮಾಡದಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಿವ್ಯ ಹಾಗರಗಿ ಸ್ಟ್ರಾಂಗ್ ಏನಿಲ್ಲ. ಅವ್ರು ಊರು ಬಿಟ್ಟಿದ್ದಾರೆ. ಈಗಾಗಲೇ ಅವರಿಗೆ ಅರೆಸ್ಟ್ ವಾರೆಂಟ್ ಕೊಟ್ಟಿದ್ದಾರೆ. ಶೀಘ್ರವೇ ಅವ್ರ ಆಸ್ತಿ ಮುಟ್ಟುಗೋಲು ಹಾಕಲಿದ್ದಾರೆ. ಗೌರವಯುತವಾಗಿ ಬಂದು ಶರಣಾಗಬೇಕು ಎಂದರು.

ಪ್ರಕರಣದ ತನಿಖೆ ಮಾಡಲು ಸಿಐಡಿಗೆ ಕೊಟ್ಟಿದ್ದೇವೆ. ನಾನೇ ಸ್ವತಃ ಈ ಬಗ್ಗೆ ತೀರ್ಮಾನ ಮಾಡಿ, ಸಿಎಂ ಗಮನಕ್ಕೆ ತಂದು ಮಾಡಿದ್ದೇವೆ. ಹಣಕ್ಕೆ ಸರ್ಕಾರಿ ಜಾಬ್ ಗಳನ್ನು ಮಾರಾಟ ಮಾಡುವ ಗ್ಯಾಂಗ್‌ನ್ನು ಹೊರಗೆ ತರುತ್ತೇವೆ ಎಂದು ಹೇಳಿದರು.

ವಿಚಾರಣೆಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಹಾಜರಾಗದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕಾ ಖರ್ಗೆ ಅನೇಕ ಆರೋಪ ಮಾಡಿದ್ದಾರೆ. ಸಿಐಡಿಯವರು ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ಇವ್ರು ತನಿಖೆಗೆ ಸಹಕಾರ ಕೊಡದೆ ಪಲಾಯನ ಮಾಡಿದ್ದಾರೆ. ಅವರಿಗೆ ಕಾನೂನು ಗೊತ್ತಿಲ್ಲ. ಅವ್ರು ದಾಖಲೆ ಕೊಡಬಹುದು ಅಲ್ವಾ? ಅವ್ರ ತಂದೆ ಎಷ್ಟು ದೊಡ್ಡವರು? ಅವರಿಗೆ ತನಿಖೆ ಬಗ್ಗೆ ಗೊತ್ತಿಲ್ವಾ? ಅವರನ್ನು ಏನು ಅರೆಸ್ಟ್ ಮಾಡ್ತಾರಾ? ವಿಚಾರಣೆ ತಾನೇ ಮಾಡೋದು, ಅವರ ಬಳಿ ಇರೋದ ದಾಖಲೆ ಕೊಡಲಿ. ಬುಟ್ಟಿಯಲ್ಲಿ ಹಾವು ಇಟ್ಟುಕೊಂಡು ಬಿಡ್ತೀನಿ ಅನ್ನೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಮೃತ್ ಪೌಲ್ ವರ್ಗಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವರ್ಗಾವಣೆ ಸಹಜ ಪ್ರಕ್ರಿಯೆ. ಹಾಗಂತ ಅವರನ್ನು ಅಪರಾಧಿ ಅನ್ನೋದು ಸರಿಯಲ್ಲ. ತನಿಖೆಯಲ್ಲಿ ಯಾರ ಹೆಸರು ಬರುತ್ತೋ ಅವರೇ ತಪ್ಪಿತಸ್ಥರು ಆಗುತ್ತಾರೆ ಎಂದು ತಿಳಿಸಿದರು.