ಪೂರ್ವ ಘಟ್ಟಗಳ ಭಾರಿ ಮರ ರಕ್ತಚಂದನ. ಉತ್ತರ ಅರ್ಕಾಟ್, ಕರ್ನೂಲು, ಚೆಂಗಲ್ ಪ್ಲೇಟ್ ನಿಂದ ವಿಶಾಖಪಟ್ಟಣ ಪರಿಯಂತ ಈ ಮರಗಳು ಬೆಳೆಯಲಾಗುತ್ತಿತ್ತು. ಕಾಡಿನ ಮರಗಳೆಲ್ಲ ಈಗ ಖಾಲಿಯಾಗಿದೆ.
ಅಲ್ಲಲ್ಲಿ ಕೆಲವರು ಮರ ಕೃಷಿ ಆರಂಭಿಸಿದ್ದಾರೆ. ಬಿರುಕು ಬಿಡುವ ಸ್ವಭಾವ ಕಾಂಡದ ಹೊರತೊಗಟೆಗಳಿರುತ್ತದೆ. ಮೂರು ಉಪ ಎಲೆಗಳ ಮುಖವಾಗಿ ವಕ್ರ ದಪ್ಪಎಲೆ, ಹಳದಿ ಬಿಳಿ ಹೂಗಂಚಲು ಹೊರಬಾಗದಲ್ಲಿ ವ್ಯಕ್ತಿ ಅಂತ ರಚನೆಯುಳ್ಳ ಚಪ್ಪಟೆ ಒರಟು ಕಾಯಿ. ನಡು ಭಾಗ ಕೊಂಚ ಉಬ್ಬಿರುತ್ತದೆ. ಉದುರಿದ ಬೀಜ ದೂರ ಹಾರಲು ಬೀಜದ ಹೊರ ಭಾಗದ ರೆಕ್ಕೆ ಅಂತ ರಚನೆ ಸಹಾಯಕವಾಗಿದೆ. ಈ ಮರವು ಬಹಳ ನಿಧಾನವಾಗಿ ಬೆಳೆಯುತ್ತದೆ. ಬಲಿತ ಕಾಂಡದ ಒಳಭಾಗ ದಟ್ಟ, ಕಂದು ಕೆಂಪು ಬಣ್ಣದಾಗಿರುತ್ತದೆ. ರಕ್ತ ಚಂದನವೆಂದು ಅದನ್ನೇ ಬಳಸುತ್ತಾರೆ.
ಔಷಧೀಯ ಗುಣಗಳು :-
* ಕುರ, ಬಾವು, ತಲೆನೋವಿಗೆ ಚಂದನ ಅರೆದು ಲೇಪ ಹಚ್ಚುವುದರಿಂದ ತಲೆನೋವು ಮಾಯವಾಗುತ್ತದೆ. ಕಣ್ಣಿನ ಉರಿಯುತಕ್ಕೆ ಇದು ಗುಣಕಾರಿಯಾಗಿದೆ.
* ರಕ್ತ ಬೇದಿಯ ಪರಿಹಾರಕ್ಕೆ ರಕ್ತ ಚಂದನವನ್ನ ಅರೆದು ಸೇವಿಸುವುದರಿಂದ ಲಾಭವಿದೆ.
* ಮೂಲವ್ಯಾಧಿಯ ರಕ್ತಸ್ರಾವ, ಉರಿಯುವುದಕ್ಕೆ ಅರೆದು ಲೇಪಿಸುವುದರಿಂದ ಮೂಲವ್ಯಾಧಿಯ ರಕ್ತಸ್ರಾವ ಕಡಿಮೆಯಾಗುತ್ತದೆ.
* ಚರ್ಮದ ಕಾಯಿಲೆ, ಮೊಡವೆ, ಚರ್ಮದ ಗುಳ್ಳೆ, ಗಾದರಿಗೆ ಲೇಪಿಸಬಹುದು. ಸೇವಿಸಲು ಸಹ ಉಪಯುಕ್ತವಾಗಿದೆ.