ಮನೆ ರಾಷ್ಟ್ರೀಯ ಪಬ್ ಜಿ ಲವ್ ಸ್ಟೋರಿ: ಪ್ರೇಮಿಯನ್ನು ಹುಡುಕಿಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಾಲ್ವರು ಮಕ್ಕಳ ತಾಯಿ

ಪಬ್ ಜಿ ಲವ್ ಸ್ಟೋರಿ: ಪ್ರೇಮಿಯನ್ನು ಹುಡುಕಿಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಾಲ್ವರು ಮಕ್ಕಳ ತಾಯಿ

0

ಲಖನೌ: ಆನ್ ಲೈನ್ ಗೇಮ್ ಪಬ್-ಜಿ ಪರಿಚಿತನಾದವನನ್ನು ಹುಡುಕಿಕೊಂಡು ಯುವತಿ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಘಟನೆ ಉತ್ತರ ಪ್ರದೇಶದ ನೊಯ್ದದಲ್ಲಿ ನಡೆದಿದೆ.

Join Our Whatsapp Group

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವತಿ ಹಾಗೂ ಆಕೆಯ ಆಶ್ರಯ ನೀಡಿರುವಾತನನ್ನು ಬಂಧಿಸಿದ್ದು, ನಾಲ್ವರು ಮಕ್ಕಳನ್ನು ಸಿಡಬ್ಲ್ಯೂಎಸ್  ಸದಸ್ಯರ ಸುಪರ್ದಿಗೆ ಒಪ್ಪಿಸಿದ್ದಾರೆ.                 

ಸೀಮ ಗುಲಾಂ ಹೈದರ್ (20) ಎಂಬಾಕೆಗೆ ಪಬ್-ಜಿ ಆಡುವ ವೇಳೆ ನೊಯ್ದ ಮೂಲಾದ ಸಚಿನ್ ಎಂಬುವನೊಂದಿಗೆ ಪರಿಚಯವಾಗಿದೆ. ದಿನ ಕಳೆದಂತೆ ಇಬ್ಬರು ನಡುವೆ ಆತ್ಮೀಯ ಬೆಳೆದಿದ್ದು ಪರಿಚಯ ಪ್ರೀತಿಯಾಗಿ ಮಾರ್ಪಟ್ಟಿದೆ. ಕೆಲದಿನಗಳ ಬಳಿಕ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನ ತೊರೆದಿದ್ದು, ನೇಪಾಳದ ಮೂಲದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾಳೆ. ಬಳಿಕ ಲಿವ್ -ಇನ್- ರಿಲೇಶನ್ ಶಿಪ್’ನಲ್ಲಿದ್ದ ಸಚಿನ್ ಹಾಗೂ ಸೀಮಾ ನೋಯ್ಡಾದ ರಬುಪುರ ಪ್ರದೇಶದಲ್ಲಿರುವ  ಅಪಾರ್ಟ್ಮೆಂಟ್ ನಲ್ಲಿ ಜೊತೆಯಾಗಿ ವಾಸಿಸುತ್ತಿದ್ದರು.              

ಆದರೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಪಾಕಿಸ್ತಾನದ ಮೂಲದ ಮಹಿಳೆಯನ್ನು ನೊಯ್ದದ್ಲಲಿ ಅಕ್ರಮವಾಗಿ ವಾಸಿಸುತ್ತಿರುವ ವಿಚಾರದ ತಿಳಿದಿವೆ. ಈ ಬಗ್ಗೆ ಅಪಾರ್ಟ್ಮೆಂಟ್ ಮಾಲಕ ಪ್ರಶ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸಚಿನ್ ಹಾಗೂ ಸೀಮಾ ಬಾಡಿಗೆ ಮನೆಯನ್ನು ತೊರೆದು ಪರಾರಿಯಾಗಿದ್ದರು. ಮನೆಮಾಲೀಕರು ಹೇಳುವ ಪ್ರಕಾರ ಆಕೆ ಪಾಕಿಸ್ತಾನದವರಂತೆ ಕಾಣುವುದಿಲ್ಲ ಎಂದು ಹೇಳಿದ್ದಾರೆ.                      

ಇವರಿಬ್ಬರನ್ನು ಪತ್ತೆಹಚ್ಚಲು ವಿಶೇಷತಂಡ ರಚಿಸಲಾಗಿತ್ತು. ಆರೋಪಿಗಳಿಬ್ಬರೂ ನೊಯ್ದದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಬೆನ್ನಲ್ಲೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಸೀಮಾಗೆ ಈಗಾಗಲೇ ಮದುವೆಯಾಗಿ ನಾಲ್ವರು ಮಕ್ಕಳಿದ್ದರು.ಆದರೂ ಸಚಿನ್ ನನ್ನು ಲವ್ ಮಾಡಲು ಶುರು ಮಾಡಿದ ಬಳಿಕ ಕುಟುಂಬಸ್ಥರನ್ನು ತೊರೆದು ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದಳು. ಸದ್ಯ ವಿಚಾರಣೆ ನಡೆಯುತ್ತಿದ್ದು, ಮಹಿಳೆ ಪಾಕಿಸ್ತಾನದಲ್ಲಿ ಯಾವ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ.      

ವಿಚಾರಣೆ ಮುಗಿದ ಬಳಿಕ ಸತ್ಯಾಂಶ ಹೊರ ಬಿಡಲಿದೆ ಎಂದು ನೊಯ್ಡಾ ಡಿಸಿಪಿ ಸಾದ್ ಮಿಯಾ ಖಾನ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.