ಮೈಸೂರು: ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮೈಸೂರು ತಾಲ್ಲೂಕು ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ವಸಂತನಗರದಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಕಾಲ್ನಡಿಗೆ ಜಾಥಾ ನಡೆಸಿ ದೇವೇಗೌಡ ವೃತ್ತದಲ್ಲಿ ಮೇಣಬತ್ತಿ ಹಿಡಿದು ಮಾನವ ಸರಪಳಿ ರಚಿಸುವ ಮೂಲಕ ಮತದಾನ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ (ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು ಅವರು, ಸಹಾಯಕ ನಿರ್ದೇಶಕರಾದ ಎಂ.ಎಲ್.ವಿಶ್ವನಾಥ್ ಅವರು, ತಾಲ್ಲೂಕು ಕಲ್ಯಾಣಾಧಿಕಾರಿ ಎಂ.ಕೆ.ಮೇಘ, ವಿಸ್ತರಣಾಧಿಕಾರಿ ಸತೀಶ್, ಪಿಡಿಒ ರವಿ, ನಿಲಯಪಾಲಕರಾದ ನಾಗರತ್ನ, ರಮ್ಯಾ, ಮಂಜುಳ, ಜಯಂತಿ, ತೇಜಸ್ವಿನಿ, ಯಂಶವಂತ್, ಮಂಜುನಾಥ್, ನಾಗರಾಜು, ಶಿವಕುಮಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.