ಮನೆ ಸುದ್ದಿ ಜಾಲ ಮಲೇರಿಯಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ :  ಡಾ. ಟಿ. ಎನ್ ಧನಂಜಯ

ಮಲೇರಿಯಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ :  ಡಾ. ಟಿ. ಎನ್ ಧನಂಜಯ

0

ಮಂಡ್ಯ: ಮಲೇರಿಯಾ ಮತ್ತು ಡೆಂಗ್ಯೂ ನಂತಹ  ಸಾಂಕ್ರಮಿಕ ಖಾಯಿಲೆಗಳನ್ನು ಆರೋಗ್ಯ ಇಲಾಖೆ ನಿಯಂತ್ರಿಸುತ್ತಿದ್ದು, ಸಾರ್ವಜನಿಕರ ಸಹಕಾರವು  ಅತ್ಯ ಗತ್ಯ ಎಂದು  ಜಿಲ್ಲಾ ಆರೋಗ್ಯ ಅಧಿಕಾರಿ ಡಾ. . ಟಿ. ಎನ್ ಧನಂಜಯ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಪ್ರಯುಕ್ತ ಮಲೇರಿಯಾ ನಿಯಂತ್ರಣಕ್ಕೆ ಸಹಕಾರ ಕೋರಿ ಮಾಧ್ಯಮ  ಸಹಕಾರ ಕೋರಿ
ಪ್ರತಿನಿಧಿಗಳಿಗೆ ಅಡ್ವೋಕೆಸಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಾರ್ವಜನಿಕರಿಗೆ  ಆರೋಗ್ಯ ಇಲಾಖೆಯ ಮಾಹಿತಿ ನೀಡಲು ಮಾಧ್ಯಮಗಳು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವ ಸುತ್ತಿವೆ  ಎಂದರು.

 2022ನೇ ಸಾಲಿನ ಮಲೇರಿಯಾ ದಿನಾಚರಣೆಯನ್ನು  “ನವೀನ ವಿಧಾನಗಳನ್ನು ಬಳಸೋಣ ಮಲೇರಿಯಾ  ಕಡಿಮೆ ಮಾಡಿ ಜೀವ ಉಳಿಸೋಣ ಎಂಬ ಘೋಷವಾಕ್ಯ   ಮೂಲಕ ಮಲೇರಿಯಾ” ದಿನಾಚರಣೆಯನ್ನು  ಆಚರಿಸಲಾಗುತ್ತಿದೆ ಎಂದರು.

ಜಿಲ್ಲಾದ್ಯಾಂತ ಸಾರ್ವಜನಿಕರಿಗೆ  ಮಲೇರಿಯಾ ಮತ್ತು ಡೆಂಗ್ಯೂ  ಖಾಯಿಲೆ  ಬಗ್ಗೆ  ಅರಿವು ಮೂಡಿಸಬೇಕು.
ಗ್ರಾಮಗಳಲ್ಲಿ  ಕೊಳಚೆ  ಪ್ರದೇಶಗಳಲ್ಲಿ ಜ್ವರ ಪ್ರಕರಣಗಳ ತೀವ್ರ ಸಮೀಕ್ಷೆ  ಮತ್ತು  ಲಾರ್ವ  ಸಮೀಕ್ಷೆ ಕಾರ್ಯಗಾರವನ್ನು ಗುಣಾತ್ಮಕವಾಗಿ ನಡೆಸುತ್ತಾ ಸೊಳ್ಳೆಗಳ  ಉತ್ಪತ್ತಿಯನ್ನು  ನಿಯಂತ್ರಿಸುವುದು ಅಗತ್ಯ ಎಂದರು.

ಜೈವಿಕ ನಿಯಂತ್ರಣದ ಬಗ್ಗೆ  ಸಾರ್ವಜನಿಕರಿಗೆ  ಪರಿಣಾಮವಾಗಿ ಆರೋಗ್ಯದ  ಬಗ್ಗೆ  ಅರಿವು ಮೂಡಿಸುವುದರ  ಜೊತೆಗೆ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ  ನೀಡುವಂತೆ ಮನವೊಲಿಸುವ ಕಾರ್ಯಕ್ರಮಗಳನ್ನು  ನಡೆಸಲಾಗುತ್ತಿದೆ  ಎಂದರು.

ಇತ್ತೀಚಿನ  ವರದಿಯ  ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ ಮಲೇರಿಯಾ  ಹಾಗೂ  ಡೆಂಗ್ಯೂ  ಖಾಯಿಲೆಗೆ  ಸಂಬಂಧಿಸಿದ ಯಾವುದೇ ಪ್ರಕರಣಗಳು ದಖಾಲೆಯಾಗಿಲ್ಲ. ಹೊರ ರೌಜ್ಯದಿಂದ ವಲಸೆ ಬಂದವರಲ್ಲಿ  ಮಾತ್ರ  ಪ್ರಕರಣಗಳು  ದಾಖಲಾಗಿದೆ. ಇವರನ್ನು ಚಿಕಿತ್ಸೆಗೆ  ಒಳಪಡಿಸಲಾಗಿದೆ ಎಂದರು.

ಮಲೇರಿಯಾ , ಡೆಂಗ್ಯೂ, ಚಿಕೂನ್‍ಗುನ್ಯ, ಮೆದುಳುಜ್ವರ ಮತ್ತು ಆನೆಕಾಲು ರೋಗಗಳ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ,  ಮಳೆ ಪ್ರಾರಂಭವಾಗಿರುವುದರಿಂದ ಮತ್ತು ವಾತಾವರಣವು ಸೊಳ್ಳೆಗಳು ಸಂತಾನೋತ್ಪತ್ತಿಗೆ ಪೂರಕವಾಗಿರುವುದರಿಂದ ರೋಗವಾಹಕ ಆಶ್ರಿತ ರೋಗಗಳು ಹರಡುವ ಸಂಭವ ಹೆಚ್ಚಾಗಿರುತ್ತದೆ ನಿಯಂತ್ರಣ ಮಾಡಲು ಜಾಗೃತರಾಗಿ ಎಂದರು.

ಭಾರತ ಸರ್ಕಾರವು ಕರ್ನಾಟಕ ರಾಜ್ಯವನ್ನು 2025ಕ್ಕೆ ಮಲೇರಿಯಾ ಮುಕ್ತ ರಾಜ್ಯವನ್ನಾಗಿ ಘೋಷಿಸಲು ರಾಷ್ಟ್ರೀಯ ಮಲೇರಿಯಾ ನಿವಾರಣಾ ಚೌಕಟ್ಟು ಕಾರ್ಯಕ್ರಮದಡಿಯಲ್ಲಿ ಮಲೇರಿಯಾ ನಿಯಂತ್ರಣ
 ಕ್ರಮಗಳನ್ನು ತೀವ್ರಗೊಳಿಸಿ ರೋಗ ಬರದದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲಾದ್ಯಂತ ಮಲೇರಿಯಾ, ಡೆಂಗ್ಯೂ, ಚಿಕುನ್‍ಗುನ್ಯರೋಗ ಪ್ರಕರಣಗಳನ್ನು ತಡೆಗಟ್ಟಲು ಎಲ್ಲಾ ಆರೋಗ್ಯ ಕ್ಷೇತ್ರದ ಸಿಬ್ಬಂದಿ ವರ್ಗದವರು ಹಾಗೂ ಆಶಾ
ಕಾರ್ಯಕರ್ತೆಯರು ನಿರಂತರವಾಗಿ ಎಲ್ಲಾ ಗ್ರಾಮಗಳಲ್ಲಿ, ನಗರ ಪ್ರದೇಶದ ಎಲ್ಲಾ ಬಡಾವಣೆಗಳಲ್ಲಿ,  ಮಲೇರಿಯಾ ನಿಯಂತ್ರಣಕ್ಕೆ  ಮುಂದಾಗಿ  ಕಾರ್ಯನಿರ್ವಸುತ್ತಿದ್ದಾರೆ ಎಂದರು.

ಆರೋಗ್ಯ ಸಂಸ್ಥೆಗಳಲ್ಲಿ  ಜ್ವರ ಪ್ರಕರಣಗಳಿಗೂ ಉಚಿತವಾಗಿ ನಿಯಮಾನುಸಾರ ತ್ವರಿತ ಪರೀಕ್ಷೆ ಮತ್ತು
ಸಂಪೂರ್ಣ ಚಿಕಿತ್ಸೆಯನ್ನು  ನೀಡಲಾಗುವುದು ಎಂದರು.

ಹಿಂದಿನ ಲೇಖನKarnataka HC: Adopting non abandoned or non orphaned child is not an offence
ಮುಂದಿನ ಲೇಖನಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಸ್ವಾಮೀಜಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ