ಬೆಂಗಳೂರು: ಕೆಆರ್‌ಎಸ್ ಜಲಾಶಯದಲ್ಲಿ ಕಾವೇರಿ ಆರತಿ ನಡೆಸಲು ಕರ್ನಾಟಕ ಸರ್ಕಾರ ಕೈಗೊಂಡಿರುವ ತೀರ್ಮಾನವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ನೂರು ಕೋಟಿ ರೂ. ವೆಚ್ಚದಲ್ಲಿ ಸರ್ಕಾರ ಈ ವ್ಯರ್ಥ ಕ್ರಿಯೆ ನಡೆಸುತ್ತಿದ್ದು, ಇದರಿಂದ ಪಾರಂಪರಿಕ ಇತಿಹಾಸ ಹೊಂದಿರುವ ಕೆಆರ್‌ಎಸ್ ಜಲಾಶಯಕ್ಕೆ ಧಕ್ಕೆಯಾಗಲಿದೆ ಎಂದು ಮಂಡ್ಯದ ಸುನಂದಾ ಜಯರಾಂ ಎಂಬ ರೈತ ನಾಯಕಿ ಅರ್ಜಿ ಸಲ್ಲಿಸಿದ್ದರು.
ಜಲಾಶಯದಿಂದ 40 ಮೀ. ದೂರದಲ್ಲಿ 20-25 ಸಾವಿರ ಜನರು ಕುಳಿತುಕೊಳ್ಳುವ ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಐದು ಸಾವಿರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದು ಕನ್ನಂಬಾಡಿ ಜಲಾಶಯದ ಭದ್ರತೆಗೆ ಧಕ್ಕೆ ತರಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಅಲ್ಲದೇ, ಕಾವೇರಿ ಆರತಿ ಆಯೋಜಿಸಲು ಸರ್ಕಾರವು ಯಾವುದೇ ತಾಂತ್ರಿಕ ಸಲಹೆ ಪಡೆದಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.














