ಮೈಸೂರು(Mysuru): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಅಭಿವೃದ್ಧಿ ಮಾಡುವಾಗ ಪಕ್ಕದಲ್ಲಿ 5 ಮೀಟರ್ ಗಿಡಗಳನ್ನು ನೆಡುವುದಕ್ಕೆ ಅವಕಾಶ ನೀಡಿ ನಕ್ಷೆಯನ್ನು ತಯಾರಿಸಿ ನೀಡಿದ ನಂತರ ಅರಣ್ಯ ಇಲಾಖೆ ಮರಗಳ ಹನನಕ್ಕೆ ಅನುಮತಿ ನೀಡಬೇಕು. ಇಲ್ಲವಾದರೆ ಅನುಮತಿ ನೀಡಬಾರದು ಎಂಬ ಅಭಿಪ್ರಾಯ ಪರಿಸರ ಸಂರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ವ್ಯಕ್ತವಾಯಿತು.
ಹೂಟಗಳ್ಳಿಯ ಸಂತೆ ಮೈದಾನದಲ್ಲಿ ಮರಗಳ ಹನನ ವಿಚಾರಕ್ಕೆ ಸಂಬಂಧಿಸಿದ ಸಾವ೯ಜನಿಕ ಸಭೆಯಲ್ಲಿ ಪಾಲ್ಗೊಂಡ ಪರಿಸರವಾದಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಅಭಿವೃದ್ಧಿ ಮಾಡುವಾಗ ಸಾವಿರಾರು ಮರಗಳ ಹನನ ಮಾಡುತ್ತಿದ್ದು, ರಸ್ತೆಯ ಬದಲಾಗಿ ಬೇರೆ ಎಲ್ಲಿಯೂ ಮರ ನೆಡಲು ಅವಕಾಶ ನೀಡುತ್ತಿಲ್ಲ. ಅರಣ್ಯ ಇಲಾಖೆಯವರು ರಾಷ್ಟ್ರೀಯ ಹೆದ್ದಾರಿ ಅವರಿಂದ ರಸ್ತೆಯ ನಕ್ಷೆ ಪಡೆದು ಮರಗಳ ಹನನಕ್ಕೆ ಅನುಮತಿ ನೀಡಬೇಕು ಆದರೆ ಅರಣ್ಯಾಧಿಕಾರಿಗಳು ಈ ನಿಯಮವನ್ನು ಪಾಲಿಸುತ್ತಿಲ್ಲ.
ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ವಿಚಾರಿಸಿದರೆ ಅರಣ್ಯ ಇಲಾಖೆಗೆ ಸಸಿಗಳನ್ನು ನೆಡುವುದಕ್ಕೆ ಹಣವನ್ನು ಪಾವತಿಸುತ್ತೇವೆ ಎಂದು ಹೇಳಿ ಜಾರಿಕೊಳ್ಳುತ್ತಾರೆ. ಅರಣ್ಯ ಇಲಾಖೆ ಮರ ಕಡಿದ ಸ್ಥಳದಲ್ಲಿ ಸಸಿಗಳನ್ನು ನೆಡದೆ ಬೇರೆ ಯಾವುದೋ ಸ್ಥಳದಲ್ಲಿ ನೆಟ್ಟರೆ ಆ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳು ವಾಸಿಸುವುದು ಬೇಡವೇ ಎಂದು ಪರಿಸರವಾದಿಗಳು ಪ್ರಶ್ನಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಅಭಿವೃದ್ಧಿ ಮಾಡುವಾಗ ಪಕ್ಕದಲ್ಲಿ 5 ಮೀಟರ್ ಗಿಡಗಳನ್ನು ನೆಡುವುದಕ್ಕೆ ಅವಕಾಶ ನೀಡಿ ನಕ್ಷೆಯನ್ನು ತಯಾರಿಸಿ ನೀಡಿದ ಅರಣ್ಯ ಇಲಾಖೆಗೆ ಮರಗಳ ಹನನಕ್ಕೆ ಅನುಮತಿ ನೀಡಬೇಕು. ಇಲ್ಲವಾದರೆ ಅನುಮತಿ ನೀಡಬಾರದು. ಪರಿಸರ ಕಾಳಜಿ ವಹಿಸಿ ಅಭಿವೃದ್ಧಿಗೆ ಅನುಮತಿ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪರಿಸರ ಸಂರಕ್ಷಣಾ ಸಮಿತಿ ಸಭೆಯ ಬಳಿಕ ಮನವಿ ಸಲ್ಲಿಸಿದೆ.
ಸಭೆಯಲ್ಲಿ ಸಹಾಯಕ ಅರಣ್ಯ ಅಧಿಕಾರಿ (ACF) ಲಕ್ಷಿಕಾಂತ, ವಲಯ ಅರಣ್ಯ ಅಧಿಕಾರಿ ಸುರೇ೦ದ್ರ, ಉಪ ವಲಯ ಅರಣ್ಯ ಅಧಿಕಾರಿಗಳು ವೆಂಕಟಚಲ, ಸುಂದರ್, ಅರಣ್ಯ ರಕ್ಷಕರಾದ ಜಗದೀಶ್, ಸ್ವಾಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇ ಗುರುಮೂತಿ೯, ಕೆಆರ್.ಎಸ್ ಪಕ್ಷದ ಸಹಕಾಯ೯ದಶಿ೯ ನಾಗರಾಜು .ಸೋಮಸುಂದರ್, ವಿಜಯಕುಮಾರ್, ಮಾ.ಸ.ಪ್ರವೀಣ್, ಸೆಲ್ವಿ ಸುಂದರ್, ಪರಿಸರವಾದಿ ಭಾನು ಮೋಹನ್, ಇಲವಾಲ ಮಂಜು, ಸಿದ್ದರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.