ಪುನರ್ವಸು ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :
ಈ ನಕ್ಷತ್ರದಲ್ಲಿ ಕನ್ಯೆ ಋತುಮತಿಯಾದರೆ ಅಶುಭ. ಇದರಲ್ಲಿ ವಿವಾಹ ವರ್ಜಿತ.ಪ್ರಮಾಣ, ಮುಂಜಿ, ಕ್ಷೌರ, ವಿದ್ಯಾಧ್ಯಯನಕ್ಕೆ ಇದು ಉತ್ತಮ ನಕ್ಷತ್ರ. ಇದರಲ್ಲಿ ಆರಂಭಿಸಿದ ಕಾರ್ಯಗಳು ಶೀಘ್ರವಾಗಿ ನೆರವೇರಿರುತ್ತವೆ. ಜ್ವರ ಬಂದರೆ ಏಳು ದಿನಗಳವರೆಗೆ ಕ್ರೂರ, ಶಾಂತಿಯಿಂದ ಆರೋಗ್ಯ ಪ್ರಾಪ್ತಿಯಾಗುತ್ತದೆ.
ಜೇಷ್ಠ ಮಾಸದಲ್ಲಿ ಇದು ಶೂನ್ಯ ನಕ್ಷತ್ರ ಇದರಲ್ಲಿ ಉತ್ಪಾತ ಕಾಣಿಸಿದರೆ ಸುಭಿಕ್ಷೆ ಇಂದ್ರಚಾಪ ಪರಿವೇಷಾದಿಗಳು ಕಾಣಿಸಿದರೆ ತಕ್ಷಣ ಮಳೆಯಾಗುತ್ತದೆ. ಈ ನಕ್ಷತ್ರದ ಒಂದನೇ ಚರಣದಲ್ಲಿ ಜನಿಸಿದವನು ಚೋರ ಎರಡನೇ ಚರಣದಲ್ಲಿ ಭೋಜನಪ್ರಿಯ ಮೂರನೇ ಚರಣದಲ್ಲಿ ಬುದ್ದಿವಂತ ಮತ್ತು ನಾಲ್ಕನೇ ಚರಣದಲ್ಲಿ ಜನಿಸಿದವನು ಧನವಂತನಾಗುತ್ತಾನೆ.
ಜನನ ಕಾಲದಲ್ಲಿ ಗುರು ಮಾಹಾದೆಶೆ 16 ವರ್ಷ, ಅಂತರ್ದೆಶೆ 25 ಮಾಸ 28 ದಿನ, ಈ ನಕ್ಷತ್ರದ ಜತಕನಿಗೆ 15, 16,17,33 52ನೇ ವರ್ಷಗಳು ಗಂಡ ಕಾಲಗಳು.35ನೇ ವರ್ಷ ಯೋಗಕಾಲ, 80ನೇ ವರ್ಷದಲ್ಲಿ ಮಹಾಗಂಡ. ಬಾಲ್ಯದಲ್ಲಿ ತಂದೆಗೆ ಕ್ರೂರನಾಗುತ್ತಾನೆ ತಾರುಣ್ಯ ಬಂದಾಗ ದೇಶಾಟನೆ ಮಾಡುತ್ತಾನೆ. ತಾರುಣ್ಯ ಬಂದಾಗ ದೇಶಾಟನೆ ಮಾಡುತ್ತಾನೆ. ವೃದ್ಯಾಪ್ಯದ ಆರಂಭದಲ್ಲಿ ಪತ್ನಿಯ ಆಗಲಿಕೆಯಾಗುತ್ತದೆ. ಈ ಜಾತಕವನ್ನು ಮತಾಪಿತೃ ಭಕ್ತನಾಗುತ್ತಾನೆ.
ಪುನರ್ವಶಿ ನಕ್ಷತ್ರದವರ ಜನನಕ್ಕೆ ಶಾಂತಿ :
ಆದಿರ್ದ್ಯೌರದಿತಿರಂತ ರಿಕ್ಷಮದತಿ ಮಾತಸಪಿತಾ ಸುಪುತ್ರಃ|
ವಿಶ್ವೇದೇವ್ಯಾ ಆದಿತಿಃ ಪಂಚಜನಾ ಆದಿತಿರ್ಜ್ಜಾತ ಮದಿತಿರ್ಜನಿತ್ಯಂ||
ಈ ನಕ್ಷತ್ರದಲ್ಲಿ ಸಂತಾನದ ಜನನವಾದಾಗ ಈ ಮಂತ್ರವನ್ನು ತಾಯಿಯ ತಂದೆಗಳು ಒಂದು ಮಾಲೆ ಎಷ್ಟು ಜಪ ಮಾಡಿ ಹ** ಬೆಲ್ಲದೊಡನೆ ನಕ್ಷತ್ರದ ಮೊದಲ ಮೂರು ಪದಗಳಿಗೆ ಹೆಸರುಕಾಳು ನಾಲ್ಕನೇ ಚರಣಕ್ಕೆ ಹಾಲನ್ನು ದಾನ ನೀಡಿದರೆ ನಕ್ಷತ್ರ ದೋಷಾದಿಗಳು ಶಾಂತವಾಗುತ್ತವೆ.
ಈ ಯಂತ್ರವನ್ನು ಸುವರ್ಣ ಪತ್ರದ ಮೇಲೆ ಉತ್ಕೀರ್ಣಗೊಳಿಸಿ, ಅದಕ್ಕೆ ಪುಷ್ಹ ಧೂಪಾದಿಗಳನ್ನು ನೀಡಿ, ಈ ಮೇಲೆ ನೀಡಿದ ಮಂತ್ರವನ್ನೇ ಒಂದು ಸಹಸ್ರ ಸಲ ಜಪ ಮಾಡಬೇಕು.ಸಕ್ತು ಅರಳಿ ಕಾಷ್ಟದಿಂದ ಹೋಮ ಮಾಡಿ, ತುಪ್ಪಾನ್ನದ ನೈವೇದ್ಯ ಅರ್ಪಿಸಬೇಕು. ನೀಲಿ ಅನ್ನದ ಬಲಿ ಅರ್ಪಿಸಬೇಕು.ನಂತರ ಯಂತ್ರವನ್ನು ಶರೀರದಲ್ಲಿ ಧಾರಣ ಮಾಡಬೇಕು.ಇದರಿಂದ ಪುನರ್ವಸು ನಕ್ಷತ್ರ ಜನಿತ ಸರ್ವ ದೋಷಗಳೂ ಶಾಂತವಾಗುತ್ತದೆ.