ಕ್ಷೇತ್ರ – 6 ಡಿಗ್ರಿಯಿಂದ 3 ಡಿಗ್ರಿ. 20 ಕಲೆಯವರೆಗೆ ಕರ್ಕರಾಶಿಯಲ್ಲಿ. ರಾಶಿಅಧಿಪತಿ – ಚಂದ್ರ, ನಕ್ಷತ್ರಸ್ವಾಮಿ – ಗುರು, ಯೋನಿ – ಮಾರ್ಜಾಲ, ನಾಡಿ – ಆದ್ಯ, ಗಣ – ದೇವ, ನಾಮಾಕ್ಷರ – ಹೀ, ಶರೀರಭಾಗ – ಪುಪ್ಪಸ, ಎದೆಯ ಮೇಲ್ಬಾಗ, ಅನ್ನನಾಳ, ಜಠರ, ಎದೆಯ ಮುಂಭಾಗ, ಹೊಟ್ಟೆಯ ಮೇಲಿನ ಭಾಗ, ಎದೆ.
ರೋಗಗಳು :-
ಅಜೀರ್ಣ, ಜಲೋದರ, ಬೆರಿ ಬೆರಿ, ರಕ್ತವಿಕಾರ, ಕ್ಷಯ, ಶ್ವಾಸನಾಳದ ಉಬ್ಬುವಿಕೆ, ಪಿತ್ತಕೋಸ ವೃದ್ಧಿ, ಕಾಮಾಲೆ, ಹಳದಿ ರೋಗ, ಅಜೀರ್ಣ, ಮಂದಾಗ್ನಿ, ಅಪಚನ.
ಸಂರಚನೆ :-
ಕಲ್ಪನಾಶಕ್ತಿಯಿರುವ ಪ್ರಾಮಾಣಿಕ ಸತ್ಯಪ್ರಿಯರಾದ ವ್ಯಕ್ತಿಗಳು ಈ ರಾಶಿಯಲ್ಲಿನ ಪುನರ್ವಸು ನಕ್ಷತ್ರದ ನಾಲ್ಕನೆಯ ಚರಣದಲ್ಲಿ ಹುಟ್ಟಿದವರಾಗುವರು. ವಿಶ್ವಾಸಪಾತ್ರರಾದ ಕ್ಷಮಾಶಾಲಿ,
ಸರಿಯಾದ ನಿರ್ಣಯ ಪ್ರಕಟಿಸುವ, ತಕ್ಕಬದ್ದವಾದ ವಿಚಾರವಿರುವ ವ್ಯಕ್ತಿಗಳು ಈ ರಾಶಿಯವರಾಗುವವರು. ಶಕ್ತಿಶಾಲಿ, ನ್ಯಾಯಪ್ರಿಯ, ದಾನಶೀಲ, ಪರೋಪಕಾರಿ, ಶ್ರೀಮಂತರನ್ನು ಈ ನಕ್ಷತ್ರದಲ್ಲಿ ಹುಟ್ಟಿದವರೆಂದು ತಿಳಿಯಲಾಗಿದೆ.
ಶಿಕ್ಷಣ ಪಡೆದು ಪ್ರಶಂಸೆ ಪಡೆದು ರಾಜಕುಲದಲ್ಲಿ ಸೇವೆ ಮಾಡುವಂತಹ ರಾಜಕಾರ್ಯಕಾರಿಗಳು, ಪ್ರಾಧ್ಯಾಪಕರು, ನಾಯಕರು, ಕವಿ, ದರ್ಶನಿಕರು, ಕಾನೂನು ತಜ್ಞರು ಎಂದು ಪುನರ್ವಸು ನಕ್ಷತ್ರದ ನಾಲ್ಕನೇ ಪಾದದಲ್ಲಿ ಜನಿಸಿದವರು ಪ್ರಸಿದ್ಧರಾಗುವರು. ಪ್ರವಾಸ ಪ್ರಿಯರು, ಜಲವಿಜ್ಞಾನ, ತತ್ವಜ್ಞಾನರು ಮತ್ತು ಸುಂದರವರು.
ಉದ್ಯೋಗ, ವಿಶೇಷಗಳು :- ಬ್ಯಾಂಕ್ ಕೆಲಸ ಮಾಡುವುದು ಹೃದಯ ರೋಗ ತಜ್ಞರಾಗುವುದು, ಚರ್ಚ್ ಕಾರ್ಯ ಮಾಡುವುದು, ಅರ್ಥಶಾಸ್ತ್ರ ತಿಳಿಯುವುದು, ವಕೀಲ, ಪ್ರವಾಚಕ ವ್ಯಾಪಾರಿ, ವಂಚಕ, ನಾವಿಕ, ಪ್ರವಾಸಿ, ಸಾರ್ವಜನಿಕ ಸೇವಕ, ಜಲ ಪದಾರ್ಥಗಳ ವ್ಯಾಪಾರಿ, ಅಣೆಕಟ್ಟು ಕಟ್ಟುವ, ಮಹಿಳಾ ಸಂಸ್ಥೆಗಳಲ್ಲಿ ಅಧಿಕಾರಿಗಳಾಗಬಹುದು.
ಈ ನಕ್ಷತ್ರ ಪಾದದಲ್ಲಿ ಜನಿಸಿದವರು. ಆಚಾರ ವಿಚಾರಗಳಲ್ಲಿ ಶುದ್ಧವಾದವರು, ಎಲ್ಲರ ಸ್ನೇಹ ಪಡೆಯುವರು, ಮಾನವೀಯ ಆಶಯಗಳನ್ನು ಈಡೇರಿಸುವವರು, ಆರ್ಥಿಕವಾಗಿ ಸಂಪನ್ನರು ಆಗಿರಬಹುದು. ಈ ನಕ್ಷತ್ರ ಪಾದದಲ್ಲಿ ಶ್ರಾವಣ ಮಾಸದ ಆರಂಭದಲ್ಲಿ ಮೊದಲ ಮೂರು ದಿನ ಇರುತ್ತಾರೆ. ಚಂದ್ರನು ಈ ನಕ್ಷತ್ರ ಪಾದದಲ್ಲಿ ಆರು ತಾಸು ಇರುತ್ತಾನೆ.