ಮನೆ ಮನೆ ಮದ್ದು ಪುಂಡಿ ಸೊಪ್ಪು

ಪುಂಡಿ ಸೊಪ್ಪು

0

      ಪುಂಡಿಸೊಪ್ಪಿನ ತವರೂರು ಭಾರತ, ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಬಿಹಾರಗಳಿಂದ ಹಿಮಾಲಯದ 3000 ಅಡಿ ಎತ್ತರದವರೆಗೂ ಪುಂಡಿ ವ್ಯಾಪಿಸಿದೆ. ಅಲ್ಲದೇ ರಷ್ಯಾ, ದಕ್ಷಿಣ ಆಫ್ರಿಕಾ, ಮಧ್ಯ ಮತ್ತು ಉತ್ತರ ಅಮೆರಿಕಾ, ಜಾವಾ, ಫಿಲಿಪೈನ್ಸ್, ಕೊರಿಯಾ, ಚೀನಾ ಮತ್ತು ಫಾರ್ಮೋಸಾಗಳಲ್ಲಿಯೂ ಪುಂಡಿಯನ್ನು ಬೆಳೆಯಲಾಗುತ್ತದೆ. ಪುಂಡಿಯ ಮೃದುವಾದ ಪುಷ್ಪದಳಗಳು, ಎಲೆಗಳನ್ನು, ಕಾಂಡ, ಕಾಯಿ, ಬೀಜ ಮತ್ತು ಬೀಜದ ಎಣ್ಣೆಯನ್ನು ವಿವಿಧ ರೀತಿಯ ಆಹಾರ ತಯಾರಿಕೆಯಲ್ಲಿ ಮತ್ತು ಪಾನೀಯಗಳಲ್ಲಿ ಉಪಯೋಗಿಸುವರು.

Join Our Whatsapp Group

     ಪುಂಡಿ ಸೊಪ್ಪು ಉತ್ತರ ಕರ್ನಾಟಕದವರಿಗೆ ಹೆಚ್ಚು ಪರಿಚಿತ ಜೋಳದ ರೊಟ್ಟಿಯ ಜೊತೆಗೆ ಪುಂಡಿಪಲ್ಯ, ಚಟ್ಟಿಯ ರುಚಿ ಸವಿದವರಿಗೇ ಗೊತ್ತು ಅದರ ರುಚಿ. ಪುಂಡಿಸೊಪ್ಪು ಕಡಿಮೆ ಬೆಲೆಯಲ್ಲಿ ದೊರೆಯುವ ಅತ್ಯಧಿಕ ಪೋಷಕಾಂಶಗಳುಳ್ಳ ಸೊಪ್ಪು ಎಂಬುದು ಅನೇಕ ಜನರಿಗೆ ತಿಳಿದಿಲ್ಲ. ಪುಂಡಿ ಬೀಜದಲ್ಲಿ ಕೊಬ್ಬಿನ ಅಂಶ. ಪ್ರೋಟೀನ್, ಶರ್ಕರಪಿಷ್ಟಗಳಿವೆ. ಪುಂಡಿ ಸೊಪ್ಪನ್ನು ಆಹಾರದಲ್ಲಿ ಬಳಸುವುದರಿಂದ ಆಹಾರಕ್ಕೆ ರುಚಿ ಉಂಟಾಗುವುದಲ್ಲದೇ ಆಹಾರ ಜೀರ್ಣಿಸಲು ಸಹಾಯವಾಗುತ್ತದೆ.

 ಸಸ್ಯವರ್ಣನೆ

      ಹೈಬಿಸ್ಕಸ್ ಸಬ್ದರೀಫ ಎಂಬ ವೈಜ್ಞಾನಿಕ ಹೆಸರುಳ್ಳ ಪುಂಡಿಯು ಮಾಲ್ವೇಸಿಯ ಕುಟುಂಬಕ್ಕೆ ಸೇರಿದೆ. ಇದು ನೇರವಾಗಿ 0.5ರಿಂದ 3 ಮೀ. ಎತ್ತರ ಬೆಳೆಯಬಲ್ಲ ಹೆಚ್ಚು ಕೊಂಬೆಗಳನ್ನು ಹೊಂದಿದೆ. ಕಾಂಡವು ಕೆಂಪು ಅಥವಾ ಹಳದಿ ಬಣ್ಣವನ್ನು ಹೊಂದಿದ್ದು ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿರುತ್ತವೆ. ಹೂಗಳು ಒಂಟೊಂಟಿಯಾಗಿ, ಎಲೆಗಳ ಕಕ್ಷದಲ್ಲಿ ಅರಳುತ್ತವೆ. ಪ್ರತಿಹೂವಿನಲ್ಲಿ 5 ಪುಷ್ಪ ಪಾತ್ರಗಳು ದಪ್ಪಗೆ ರಸಭರಿತವಾಗಿ ಇರುತ್ತವೆ. ಫಲ ಸಂಪುಟ ಮಾದರಿಯಾಗಿದ್ದು, ಗುಂಡಗಿದ್ದು ಬೀಜಗಳು ಮೂತ್ರಪಿಂಡಾಕಾರವಾಗಿದ್ದು ಕಂದುಬಣ್ಣವನ್ನು ಹೊಂದಿರುತ್ತವೆ. ಕೆಲವೊಮ್ಮೆ, ಈ ಬೆಳೆಯಿಂದ ಗಡುತರವಾದ ನಾರನ್ನು ಪಡೆಯಬಹುದು.

 ಮಣ್ಣು

     ಇದು ಎಲ್ಲಾ ತರಹದ ಮಣ್ಣಿನಲ್ಲೂ ಬೆಳೆಯಬಹುದಾದ ಬೆಳೆ. ಆದರೆ ಈ ಬೆಳೆ ಸಾರವತ್ತಾದ ನೀರು ಬಸಿದು ಹೋಗುವಂತಹ ಮತ್ತು ಸಡಿಲ ಗೋಡುಮಣ್ಣಿನಲ್ಲಿ ಉತ್ತಮವಾಗಿ ಬೆಳೆದು ಇಳುವರಿ ನೀಡುತ್ತದೆ.

 ಹವಾಗುಣ

     ಸಾಮಾನ್ಯವಾಗಿ ಒಣ ಹವೆ ಅಥವಾ ಸಾಧಾರಣ ಹವಾಗುಣದಲ್ಲಿ ಬೆಳೆಯಬಲ್ಲದು. ಹೆಚ್ಚು ಸಮಯ ಮಳೆ ಬೀಳುವ ಮತ್ತು ತೇವಾಂಶದಿಂದ ಕೂಡಿದ ಹಾಗೂ ಹಿಮ ಬೀಳುವ ಪ್ರದೇಶಗಳು ಬೆಳವಣಿಗೆಗೆ ಒಳ್ಳೆಯದಲ್ಲ.

 ಬೇಸಾಯ ಕ್ರಮಗಳು

     ಪುಂಡಿಯನ್ನು ಬೀಜ ಬಿತ್ತಿ ವೃದ್ಧಿ ಮಾಡಲಾಗುತ್ತದೆ. ಚಿತ್ರನೆಗೆ ಹೊಸದಾಗಿ ಕ್ಯೂಯ್ಲು  ಮಾಡಿದ ಬೀಜಗಳನ್ನು ಮಾತ್ರ ಉಪಯೋಗಿಸಬೇಕು.

     ಬಿತ್ತನೆ ಮಾಡಬೇಕೆಂದಿರುವ ಒಂದು ಚ.ಮೀಟರ್ ಭೂಮಿಯನ್ನು ಚೆನ್ನಾಗಿ ಹದ ಮಾಡಿ 5 ಕೆ.ಜಿ.ಯಷ್ಟು ಕೊಟ್ಟಿಗೆ ಗೊಬ್ಬರವನ್ನು ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಬೀಜಗಳನ್ನು 7.5 ಸೆಂ.ಮೀ. ಅಂತರದಲ್ಲಿ ತಲಾ 2-3 ಬೀಜಗಳಂತೆ ಮತ್ತಬೇಕು.

 ನೀರಾವರಿ

     ಬಿತ್ತನೆಯಾದ ಮೊದಲ ದಿನಗಳಲ್ಲಿ ಹವಾಮಾನಕ್ಕನುಗುಣವಾಗಿ 3-4 ದಿನಗಳಿಗೊಮ್ಮೆ ನೀರು ಹಾಯಿಸಬೇಕು.

 ಕಳೆ ಹತೋಟ

ಬೆಳೆ ಇರುವ ಮೊದಲ ದಿನಗಳಲ್ಲಿ ಆಗಾಗ್ಗೆ ಕಳೆ ಕೀಳುತ್ತಿರಬೇಕು.

 ಕೀಟ ಮತ್ತು ರೋಗಗಳು

     ಕಾಯಿ ಕೊರೆಯುವ ಹುಳುಗಳ ಹಾವಳಿ ಜಾಸ್ತಿ ಹಾಗೂ ಕಾಂಡ ಮತ್ತು ಬೇರು ಉಳಿವಿಕೆಯು ಹೆಚ್ಚಾಗಿ ಕಂಡುಬರುತ್ತದೆ .

 ಕೊಯ್ಲು ಮತ್ತು ಇಳುವರಿ

       ಪುಂಡಿಯು 5ರಿಂದ 6 ತಿಂಗಳ ಬೆಳೆ. ಬಿತ್ತನೆಯಾದ 45-40 ದಿನಗಳಲ್ಲಿ ಗಿಡಗಳು ಹೂ ಬಿಡಲು ಆರಂಭಿಸಿ ಸುಮಾರು 4 ತಿಂಗಳವರೆಗೆ ಹೂಗಳು ದೊರಕುತ್ತಿರುತ್ತವೆ. ಗಿಡ ಬೆಳೆದಂತೆ ಕಾಯಿಗಳು ಬಲಿಯುತ್ತಾ ಹೋಗುತ್ತವೆ. ಹೂಗಳು ಕಾಯಾಗಲು 15ರಿಂದ 20 ದಿನಗಳು ಸಾಕು. ಆದುದರಿಂದ ಕಾಯಿಗಳನ್ನು ತುಂಬಾ ಬಲಿಯಲಿಕ್ಕೆ ಬಿಟ್ಟರೆ ಅದರ ಅಂಗಾಂಶಗಳು ಗಟ್ಟಿಯಾಗಿ ಕೊಯ್ದು ಮಾಡಲಿಕ್ಕೆ ಬಹಳ ಕಷ್ಟವಾಗುತ್ತದೆ. ಬಿಗಿಯಾದ ಹಾಗೂ ಮೃದುವಾಗಿರುವ ನೀಳವಾದ ಕಾಯಿಗಳನ್ನು ಕೆಂಪುಬಣ್ಣಕ್ಕೆ ತಿರುಗಿದ ಕೂಡಲೇ ಕೇಳಬೇಕು. ನಂತರ ಕಾಯಿಯಿಂದ ಪುಷ್ಪದಳಗಳನ್ನು ಕೈಯಿಂದ ಬೇರ್ಪಡಿಸಬೇಕು.

 ಪುಷ್ಪ ಪಾತ್ರೆಯ ದಳಗಳನ್ನು ಹಸಿಯಾಸದ ಅಥವಾ ಒಣಗಿಸದ ರೂಪದಲ್ಲಿ ಉಪಯೋಗಿಸಬಹುದು. 2-3 ತಿಂಗಳವರೆಗೆ ಕೊಯ್ದನ್ನು ಮಾಡಬಹುದು. ಪುಷ್ಪ ಪಾತ್ರೆಯ ದಳಗಳನ್ನು ಹಸಿಯಾದ ಅಥವಾ ಒಣಗಿದ ರೂಪದಲ್ಲಿ

ಬೀಜಗಳ ಉತ್ಪಾದನೆಗಾಗಿ ಕಾಯಿಗಳಲ್ಲಿನ ಪುಷ್ಪ ಪಾತ್ರೆಯು ಬಲಿತು ಒಡೆಯಲು ಪ್ರಾರಂಭಿಸಿದ ನಂತರ ಗಿಡಗಳನ್ನು ಕೊಯ್ದು ಮಾಡಬಹುದು. ನಂತರ ಬೀಜಗಳನ್ನು ಗಿಡದಿಂದ ಬೇರ್ಪಡಿಸಿ, ಗಾಳಿಯಾಡದ ಸ್ಥಳದಲ್ಲಿ ಶೇಖರಣೆ ಮಾಡಬೇಕು.

ಉಪಯುಕ್ತ ಭಾಗಗಳು

ಸೊಪ್ಪು, ಹೂ ಮತ್ತು ಬೀಜ.

 ಪೋಷಕಾಂಶಗಳು

( 100 ಗ್ರಾಂ ಪುಂಡಿಸೊಪ್ಪಿನಲ್ಲಿ)

ಸಸಾರಜನಕ    1.7 ло

ಕೊಬ್ಬು             1.1 о

ಖನಿಜಗಳು         0.2 0

ಶಕ್ತಿ                   56 ಕ್ಯಾಲೊರಿ

ಕ್ಯಾರೊಟಿನ್        4830 2.

ಸುಣ್ಣಾಂಶ            172 ಮಿ. ಗ್ರಾಂ

ಕಬ್ಬಿಣ                 5 మి.గ్రాం

ರೈಬೊಫ್ಲಾವಿನ್     0.21 ಮಿ. ಗ್ರಾಂ

ಥೈಯಮೈನ್       0.07  ಮಿ. ಗ್ರಾಂ

‘ಸಿ’ ಜೀವಸತ್ವ     20  ಮಿ. ಗ್ರಾಂ