ಮನೆ ರಾಷ್ಟ್ರೀಯ ಪುಣೆ ಅಪಘಾತ ಪ್ರಕರಣ: 17 ವರ್ಷದ ಬಾಲಕನಿಗೆ ಮದ್ಯ ಪೂರೈಸಿದ್ದ 2 ರೆಸ್ಟೋರೆಂಟ್ ಗಳಿಗೆ ಬೀಗ

ಪುಣೆ ಅಪಘಾತ ಪ್ರಕರಣ: 17 ವರ್ಷದ ಬಾಲಕನಿಗೆ ಮದ್ಯ ಪೂರೈಸಿದ್ದ 2 ರೆಸ್ಟೋರೆಂಟ್ ಗಳಿಗೆ ಬೀಗ

0

ಪುಣೆ: 17 ವರ್ಷದ ಬಾಲಕನೊಬ್ಬ ಮದ್ಯದ ನಶೆಯಲ್ಲಿ ವಿಲಾಸಿ ಕಾರು ‘ಪೋಶೆ’ ಚಾಲನೆ ಮಾಡಿ ಇಬ್ಬರು ಟೆಕಿಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ, ಬಾಲಕನಿಗೆ ಮದ್ಯ ಪೂರೈಸಿದ್ದ ಎರಡು ರೆಸ್ಟೋರೆಂಟ್‌ಗಳಿಗೆ ಬೀಗ ಜಡಿಯಲಾಗಿದೆ. 

Join Our Whatsapp Group

ಪುಣೆ ಜಲ್ಲಾಧಿಕಾರಿಯ ಆದೇಶದ ಮೇರೆಗೆ ಮಹಾರಾಷ್ಟ್ರದ ಅಬಕಾರಿ ಇಲಾಖೆಯು ಕ್ರಮ ಕೈಗೊಂಡಿದೆ. ಕೋಸಿ ರೆಸ್ಟೋರೆಂಟ್ ಮತ್ತು ಹೋಟೆಲ್ ಬ್ಲಾಕ್ ಕ್ಲಬ್‌ಗೆ ಬೀಗ ಜಡಿಯಲಾಗಿದೆ.

ಬಾಲಕ ತಮ್ಮ ಗೆಳೆಯರೊಂದಿಗೆ ಶನಿವಾರ ರಾತ್ರಿ 9.30ರಿಂದ ಮಧ್ಯರಾತ್ರಿ 1ರ ನಡುವೆ ರೆಸ್ಟೋರೆಂಟ್‌ಗೆ ತೆರಳಿ ಮದ್ಯಪಾನ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ತಾಪ್ತರಿಗೆ ಮದ್ಯ ಪೂರೈಸುವುದನ್ನು ತಡೆಯಲು ಅಬಕಾರಿ ಇಲಾಖೆಯು ವಿಶೇಷ ತಪಾಸಣಾ ಅಭಿಯಾನವನ್ನು ಪ್ರಾರಂಭಿಸಿದೆ. ನಿಯಮ ಉಲ್ಲಂಘನೆಯಾದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಿದ್ದು, ಪರವಾನಗಿ ರದ್ದುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಪುಣೆ ನಗರದ ಕಲ್ಯಾಣಿನಗರ ಪ್ರದೇಶದಲ್ಲಿ ಭಾನುವಾರ ನಸುಕಿನಲ್ಲಿ ಪಾನಮತ್ತ 17ರ ಹರೆಯದ ಬಾಲಕ ಪೋಶೆ ಕಾರು ಚಲಾಯಿಸುತ್ತಿದ್ದಾಗ ಅದು ಬೈಕಿಗೆ ಡಿಕ್ಕಿ ಹೊಡೆದಿತ್ತು. ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶದ ಸಾಫ್ಟ್‌ವೇರ್‌ ತಂತ್ರಜ್ಞರಾದ 24 ವರ್ಷ ವಯಸ್ಸಿನ ಅನಿಸ್ ಅವಾಧಿಯ, ಅಶ್ವಿನಿ ಕಾಸ್ಟಾ ಮೃತಪಟ್ಟಿದ್ದರು.