ಮನೆ ಅಪರಾಧ ಪುಣೆ: ಜಲಪಾತದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ ಐವರು

ಪುಣೆ: ಜಲಪಾತದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ ಐವರು

0

ಪುಣೆ: ಮಹಾರಾಷ್ಟ್ರದ ನಿಸರ್ಗ ಸ್ವರ್ಗ ಅಂತ ಕರೆಯುವ ಲೋನಾವಾಲಾ ಜಲಪಾತ ನೋಡಲು ಬಂದಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

Join Our Whatsapp Group

ಪುಣೆಯ ವನ್ವಾಡಿ ಸಯ್ಯದ್ ನಗರದ ನಿವಾಸಿ ಅನ್ಸಾರಿ ಕುಟುಂಬ ಲೋನಾವಾಲಾ ಫಾಲ್ಸ್‌ ವೀಕ್ಷಣೆಗೆಂದು ತೆರಳಿತ್ತು. ರವಿವಾರ (ಜೂ.30) ರಂದು ಮಧ್ಯಾಹ್ನ ಭೂಷಿ ಅಣೆಕಟ್ಟಿನ ಸಮೀಪವಿರುವ ಜಲಪಾತದ ಬಳಿ ಆಟವಾಡುತ್ತಿದ್ದರು. ಅದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಜಲಪಾತ ಮಧ್ಯದಲ್ಲಿ ಕುಳಿತ್ತಿದ್ದರು.

ಪುಣೆಯ ಲೋನಾವಾಲಾ ಪ್ರದೇಶದ ಸುತ್ತಮುತ್ತ ಭಾರಿ ಮಳೆಯಾಗಿದೆ. ಇದರಿಂದ ಭೂಷಿ ಡ್ಯಾಂನಿಂದ ಏಕಾಏಕಿ ಹೆಚ್ಚಿನ ನೀರು ಧುಮ್ಮಿಕ್ಕುತ್ತಾ ಹರಿದು ಬಂದಿದೆ. ಅಷ್ಟೋತ್ತಿಗೆ 9 ಮಂದಿ ಪೈಕಿ ನಾಲ್ವರು ದಡ ಸೇರಿದ್ದರು. ಆದರೆ, ಜಲಪಾತದ ಮಧ್ಯದಲ್ಲಿದ್ದ ಐವರು ದಡಕ್ಕೆ ಬರಲಾಗದೆ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಎಲ್ಲರ ಕಣ್ಣೆದುರೇ ಕೊಚ್ಚಿ ಹೋಗಿದ್ದು, ದಡದಲ್ಲಿದ್ದ ಹೆತ್ತವರು ರಕ್ಷಿಸಿ ರಕ್ಷಿಸಿ ಎಂದು ಚೀರಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಜಲಪಾತದಲ್ಲಿ ಕೊಚ್ಚಿಹೋದ ಶಾಹಿಸ್ತಾ ಅನ್ಸಾರಿ, ಅಮಿಮಾ ಅನ್ಸಾರಿ ಮತ್ತು ಉಮೇರಾ ಅನ್ಸಾರಿ ಈ ಮೂವರ ಮೃತದೇಹಗಳು ಸಿಕ್ಕಿವೆ. ಇನ್ನೂ 9 ವರ್ಷದ ಮರಿಯಾ ಸೈಯದ್ ಹಾಗೂ 4 ವರ್ಷದ ಅದ್ನಾನ್ ಅನ್ಸಾರಿ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.

ಹಿಂದಿನ ಲೇಖನಕೌಟುಂಬಿಕ ಕಲಹ: ದೂರು ನೀಡಲು ಬಂದ ಪತ್ನಿಯನ್ನು ಕೊಂದ ಕಾನ್ಸ್ ಟೇಬಲ್ ಪತಿ
ಮುಂದಿನ ಲೇಖನ75ನೇ ವಸಂತಕ್ಕೆ ಕಾಲಿಟ್ಟ ವೆಂಕಯ್ಯ ನಾಯ್ಡು: ಶುಭ ಕೋರಿದ ಪ್ರಧಾನಿ ಮೋದಿ