ಮನೆ ಕಾನೂನು ಮನೆಗಳ್ಳತನ ಆರೋಪಿಗಳಿಗೆ ಶಿಕ್ಷೆ ಹಾಗೂ ದಂಡ ಪ್ರಕಟ

ಮನೆಗಳ್ಳತನ ಆರೋಪಿಗಳಿಗೆ ಶಿಕ್ಷೆ ಹಾಗೂ ದಂಡ ಪ್ರಕಟ

0

ಶ್ರೀರಂಗಪಟ್ಟಣ: ಕೆಆರ್‌ಎಸ್  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚಿಕ್ಕಾಯರಹಳ್ಳಿ ಗ್ರಾಮದಲ್ಲಿ ಗ್ರಾಮದ ರಾಜೇಶ್ ಎಂಬುವರ ಮನೆಗಳ್ಳತನ ಮಾಡಿದ ನಾಲ್ಕು ಆರೋಪಿಗಳಿಗೆ ಪಾಂಡವಪುರ ಜೆ.ಎಂ.ಎಫ್ ಸಿ ನ್ಯಾಯಾಧೀಶರಾದ ಆರ್.ಮಹೇಶ್ ಅವರು ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 8 ಸಾವಿರ ದಂಡ ವಿಧಿಸಿ ಆದೇಶ ಪ್ರಕಟಿಸಿದ್ದಾರೆ.

Join Our Whatsapp Group

ಮನೆಗಳ್ಳತನದ ಆರೋಪಿಗಳಾದ  ಕೆ.ಆರ್.ನಗರ ಟೌನ್ ನಿವಾಸಿಗಳಾದ ಬಾಲರಾಜು(ಎ1) ಸೋಮಶೇಖರ್(ಎ2), ಶ್ರೀಕಂಠ(ಎ3) ಹಾಗೂರಾಜು(ಎ4) 2018 ರ ಫೆಬ್ರವರಿ 18 ರಂದು ಚಿಕ್ಕಾಯರಹಳ್ಳಿ ಗ್ರಾಮ ರಾಜೇಶ ಅವರ ಮನೆಯಲ್ಲಿ 6 ಸಾವಿರ ನಗದು, 49 ಗ್ರಾಂ ಚಿನ್ನಾಭರಣ, 700 ಗ್ರಾಂ ಬೆಳ್ಳಿವಸ್ತುಗಳು ಸೇರಿದಂತೆ ಕಳ್ಳತನ ಮಾಡಿದ್ದರು.  ಕೆಲವು ದಿನಗಳ ನಂತರ ಅಂದಿನ ಸಿಪಿಐ ರವೀಂದ್ರ ಸಿ.ಎಂ.ಹಾಗೂ ಪಿ.ಎಸೈ ಬ್ಯಾಟರಾಯಗೌಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದರು.   ನಂತರ ಪ್ರಕರಣದ ವಾದ ವಿವಾದಗಳು ಮುಕ್ತಾಯಗೊಂಡು ಆರೋಪಿಗಳ ವಿರುದ್ದ ಆರೋಪ ಸಾಭಿತಾಗಿರುವ ಕಾರಣ ನಾಲ್ವರು ಆರೋಪಿಗಳಿಗೆ  ನ್ಯಾಯಾಲಯ ಶಿಕ್ಷೆ ಪ್ರಮಾಣ ಹಾಗೂ ದಂಡ ವಿಧಿಸಿದೆ.

ಆರೋಪಿಗಳಿಗೆ ಶಿಕ್ಷೆಕೊಡಿಸಲು ಸಹಾಯಕ ಸರ್ಕಾರಿ ಅಭಿಯೋಜಕಿ ಸುದಾಮಣಿ .ಜೆ.ಪಿ ವಾದ ಮಂಡಿಸಿದರು.

ಕಳ್ಳತನ ಪ್ರಕರಣದ  ಆರೋಪಿಗಳನ್ನು ಬಂಧಿಸಿ ಅರೋಪ ಸಾಬಿತು ಪಡಿಸಿದ ಅಂದಿನ ಸಿಪಿಐ ರವೀಂದ್ರ, ಪಿ.ಎಸೈ ಬ್ಯಾಟರಾಯಗೌಡ, ಪ್ರಕರಣದ ಈಗಿನ ತನಿಖೆ ಮೇಲುಸ್ತುವಾರಿ ವಹಿಸಿಕೊಂಡಿದ್ದ ಸಿಪಿಐ ಪುನೀತ್, ಪಿ.ಎಸೈ ರಮೇಶ್ ಕರ್ಕಿಕಟ್ಟೆ ರವರನ್ನು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಡಿ.ವೈ.ಎಸ್.ಪಿ ಮುರಳಿ  ಅವರುಗಳು ಪ್ರಶಂಸಿದ್ದಾರೆ.