ಮಂಡ್ಯ:- ಕೆ.ಆರ್.ಪೇಟೆ ತಾಲ್ಲೂಕು, ಸಂತೆಬಾಚನಹಳ್ಳಿ ಹೋಬಳಿ, ಕೈಗೋನಹಳ್ಳಿ ಗ್ರಾಮದ ಲೇಟ್ ಸುಬ್ಬೇಗೌಡ ಮಾರ್ಡನ್ ರೈಸ್ ಮಿಲ್ ನೇರದ ಕೆ.ಆರ್.ಪೇಟೆ ಕೈಗೊಂನಹಟ್ಟಿ ಮುಖ್ಯ ರಸ್ತೆಯಲ್ಲಿ ನೇ ಆರೋಪಿ ಮಂಜ @ ಮಂಜು ಮಂಜುನಾಥ ಜಿ.ಆರ್. ತನ್ನ ಹೀರೋ ಹೊಂಡಾ ಫ್ರೆಂಡರ್ ಪ್ಲಸ್ ಬೈಕ್‌ನಲ್ಲಿ ಕೆ.ಆರ್ ಪೇಟೆ ಕಡೆಗೆ ಬರುತ್ತಿದ್ದು, ೧೭ ವರ್ಷ ೦೮: ತಿಂಗಳ ಅಪ್ರಾಪ್ತ ಬಾಲಕಿಯ ಅದೇ ವೇಳೆಯಲ್ಲಿ ತನ್ನ ಅಣ್ಣ ಊರಾದ ವಳಗೆರೆಮೆಣಸ ಗ್ರಾಮಕ್ಕೆ ಹೋಗಲು ತಾನೊಬ್ಬನೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಕಂಡು ತಾನು ಚಾಲನೆ ಮಾಡುತ್ತಿದ್ದ ಬೈಕ್‌ನ್ನು ನಿಲ್ಲಿಸಿ, ಅಪ್ರಾಪ್ತ ಬಾಲಕಿಯನ್ನು ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಕೇಳಲಾಗಿ ಆಕೆಯೂ ತನ್ನ ಅಜ್ಜಿ ಊರಾದ ವಳಗೆರೆಮೆಣಸ ಗ್ರಾಮಕ್ಕೆ ಹೋಗುತ್ತಿರುವುದಾಗಿ ತಿಳಿಸಿದಾಗ ಆರೋಪಿ ಅಪ್ರಾಪ್ತ ಬಾಲಕಿಯನ್ನು ತನ್ನ ಬೈಕ್‌ನಲ್ಲಿ ನಿನ್ನನ್ನು ಬಿಟ್ಟುಕೊಡುತ್ತೇನೆಂದು ಪುಸಲಾಯಿಸಿ ಹಾಗೂ ಬಲವಂತದಿಂದ ಬೈಕ್ ಹಿಂಭಾಗದಲ್ಲಿ ಕೂರಿಸಿಕೊಂಡು ನಂತರ ತನ್ನ ಸ್ನೇಹಿತನನ್ನು ಮಾತನ್ನಾಡಿಸಿಕೊಂಡು ಬರೋಣವೆಂದು ಮೇಲುಕೋಟೆ ರಸ್ತೆಯಲ್ಲಿನ ವಸಂತಮರ ಫಾರೆಸ್ಟ್ ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರವೆಸಗಿ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿ ಭಾದಂಸಂ ೩೦೦, ೫೦೪, ೫೦೬, ೩೭೬ ರೆ/ವಿ ೩೪ ಐಪಿಸಿ ಕಾಲಂ ೬ ಪೊಕ್ಸೋ ಕಾಯಿದೆ ೨೦೧೨ ರ ಅಡಿ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶಯ್ಯ ಹೆಜ್.ಬಿ ರವರು ದೋಷಾರೋಪಣಾ ಪತ್ರವನ್ನು ಸಲ್ಲಿಸಲಾಗಿತ್ತು.
ಈ ಪ್ರಕರಣವು ಸ್ಪೆಷಲ್ ಕೇಸ್ ಸಂಖ್ಯೆ ೩೦೧/೨೦೧೮ ರಂತೆ (ಕೆ.ಆರ್.ಪೇಟೆ ಡೌನ್ ಠಾಣಾ ಮೊ.ನಂ.೩೦/೨೦೧೭) ಮಂಡ್ಯದ ಮಾನ್ಯ ಅಧಿಕ ಸತ್ಯ ಮತ್ತು ಸ್ವಲತಗತಿ ೨ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ನಾಗಜ್ಯೋತಿ.ಕೆ.ಎ.ರವರ ಮುಂದೆ ಏಚಾರಣೆ ನಡೆದು, ಆರೋಪಿ-೦೧ ಮಂಜ @ ಮಂಜು ಮಂಜುನಾಥ ಜಿ.ಆರ್. ಈತನಿಗೆ ಭಾದಂಸಂ ಕಲಂ ೩೭೬(೧) ಅಡಿಯಲ್ಲಿನ ಅಪರಾಧಕ್ಕೆ ೧೦ ವರ್ಷಗಳ ಶಿಕ್ಷೆ ಮತ್ತು ೫೦,೦೦೦/- ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ೩ ವರ್ಷಗಳ ಸಾದಾ ಶಿಕ್ಷೆಯನ್ನು ಹಾಗೂ ಭಾದಂಸಂ ಕಲಂ ೩೬೬ ಅಂಡಿಯಲ್ಲಿನ ಅಪರಾಧಕ್ಕೆ ೩ ವರ್ಷಗಳ ಶಿಕ್ಷೆ ಮತ್ತು ೧,೦೦೦/- ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ೯ ತಿಂಗಳು ಸಾದಾ ಶಿಕ್ಷೆಯನ್ನು ವಿಧಿಸಿ ತೀರ್ಮ ನೀಡಿರುತ್ತಾರೆ.
ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರಾದ ಹೆಬ್ಬಕವಾಡಿ ನಾಗರಾಜು ರವರು ವಾದ ಮಂಡಿಸಿದ್ದರು.