ಕ್ಷೇತ್ರ -0 ಡಿಗ್ರಿ ಯಿಂದ 3 ಡಿಗ್ರಿ 30 ಕಲೆ ಮೀನ ರಾಶಿಯಲ್ಲಿ. ರಾಶಿ ಸ್ವಾಮಿ -ಗುರು, ನಕ್ಷತ್ರ ಸ್ವಾಮಿ- ಗುರು ಗಣ- ಮನುಷ್ಯ ನಾಡಿ- ಆದ್ಯ, ಯೂನಿ-ಸಿಂಹ, ನಾಮಾಕ್ಷರ -ದಿ ಶರೀರಭಾಗ- ಪಾದ ಅಂಗುಷ್ಠದ ಭಾಗಗಳು,
ರೋಗಗಳು :ಪಾದದ ಬಾವು, ಹರ್ನಿಯಾ, ಹಳದಿರೋಗ,ಕಾಮಲೆ ಕಾಲುನೋವು, ಕ್ಯಾನ್ಸರ, ಕಾಲುಗಳಲ್ಲಿ ಸಿಡಿತ, ಕರುಳಿನ ಮೇಲೆ ಪ್ರಭಾವ.
ಸಂರಚನೆ: ಉದಾರಿ ಬುದ್ಧಿವಂತ, ದಾಯಾಳು,ಕರುಣಾಳು, ಸಂಗೀತ ಕಲಾವಿದ, ಕಾನೂನು ತಿಳಿದವ, ಶಿಕ್ಷಣ ತಜ್ಞ, ವಿನಮ್ರ ವ್ಯವಹಾರ ಕುಶಲ, ಸತ್ಯವಾದಿ, ಪ್ರಿಯದರ್ಶಿ, ಆಕರ್ಷಕ ಪ್ರಭಾವಶಾಲಿ, ದಾನಿ, ದರ್ಶನ ಸಾಹಿತ್ಯ ಪ್ರಿಯನಾಗುವನು.
ಉದ್ಯೋಗ, ವಿಶೇಷಗಳು : ರಾಜ್ಯನೀತಿಜ್ಞ, ಪ್ರೊಫೆಸರ,ಮಂತ್ರಿ ರಾಷ್ಟ್ರಪತಿ,ರಾಜ್ಯಪಾಲ, ಕಾನೂನು ತಜ್ಞ,ವಿದ್ವಾನ್, ಧಾರ್ಮಿಕ ನ್ಯಾಯಾಧೀಶ, ಸಂಸ್ಥೆಯ ಮುಖ್ಯಸ್ಥ, ಅದ್ದಿಕ್ಷಕ, ಆಡಳಿತಗಾರ,ಯೋಜನಾ ಮುಖ್ಯಸ್ಥ,ಮೆಯರ, ಪ್ರಕಾಶಕ, ಯಾತ್ರಿಕ,ಪುಸ್ತಕ ವ್ಯಾಪಾರಿ, ವಿಶ್ಲೇಷಕ ಕಥಾವಾಚಕ,ವೈದ್ಯ, ಯುದ್ಧ ಪ್ರಿಯನಾಗಬಹುದು.
ಗುರು ರಾಶಿಯಧಿಪತಿ ಮತ್ತು ಗುರು ನಕ್ಷತ್ರದ ಅಧಿಪತಿಯಾಗಿದ್ದರೆ, ಜನರು ಮಹಾತಾಕಾಂಕ್ಷಿಯಾಗುವರು. ಶಿಕ್ಷತರು ಸಮ್ಮಾನಿತರು ಶುದ್ಧಾಚಾರ ಉಳ್ಳವರು, ಶಸ್ತ್ರ ಚರ್ಚೆ ಸಮರ್ಥರು, ಪುರಸ್ಕಾರ ಪಡೆಯುವವರು, ವಿಪರೀತ ಸಂಕೋಚ ಉಳ್ಳವರು ಆಗುವರು. ಎಲ್ಲರ ಪ್ರಸಂಶೆಗೆ ಪಾತ್ರರಾಗುವರು. ಸೂರೄನು ಈ ನಕ್ಷತ್ರದ ಚೈತ್ರ ಮಾಸದಲ್ಲಿ 3.25 ದಿನವಿರುವನು. ಚಂದ್ರನು 6 ಗಂಟೆಯಿರುವನು.