ಪ್ರೇಮದಲ್ಲಿ ಅಸಫಲತೆಯ ಕಾರಣ ಹೃದಯರೋಗ ಅಥವಾ ಅನ್ಯ ಸೋಂಕುರೋಗ, ಘಟನೆಗಳಿಂದ ಪ್ರಭಾವಿತ ಹೃದಯ, ಸಂತಾನ ಕಷ್ಟದಿಂದ ಪೀಡಿತ, ಸ್ತ್ರೀ ಅಥವಾ ವಿರುದ್ಧ ಯೋನಿಯಿಂದ ಪೀಡಿತ, ಸಂತಾನಾನ ಅನೇಕಸಲ ನಷ್ಟವಾಗುವುದು ಅಥವಾ ಗರ್ಭಪಾತ ಪುನಃ ಭರೀಸಲು ಸಂಭವವಿಸುವಂಥ ಶಾರೀರಿಕ ಹಾನಿ, ನಾಡಿಗಳಲ್ಲಿ ವಕ್ರತೆ ಅಥವಾ ನಾಡಿರೋಗ ರಕ್ತಕ್ಷೀಣಕ್ಕೆ ಜಲರೇಚನ ಕಾಲುಗಳಲ್ಲಿ ಪೀಡೆ ವೃದ್ಧಾಪ್ಯಾವಸ್ಥೆಯಲ್ಲಿ ಮಂಡಿಗಳಲ್ಲಿ ಬಾವು ರಕ್ತ ಏರೊತ್ತಡ, ರಕ್ತಹೀನತೆ ಅಥವಾ ಅತಿಸಾರ ಹೃದಯ ಬಾವು ಪಾದಗಳಲ್ಲಿ ಪೀಡೆ.
ವಿಶೇಷ : ಸೂರ್ಯನ ರಾಶಿ ಮತ್ತು ಶುಕ್ರನ ನಕ್ಷತ್ರದಲ್ಲಿ ಜನಿಸಿದ ಅಧಿಕಾಂಶ ಜಾತಕರು ಕೋಮಲ ಮನಸ್ಸಿನವರು,ಅಪರಾಧಗಳಿಗೆ ಎದುರ ಹೆದುರುವವರು, ದಾರುಣತೆ ಅಥವಾ ದೀನತೆಯ ಕುರಿತು ಕರುಣೆ ವ್ಯಕ್ತಪಡಿಸುವ ಉದಾರ ಮನಸ್ಸಿನವರು, ಸರ್ವರೊಡನೆಯೂ ಸಹಾನುಭೂತಿಯಿಂದ ವ್ಯವಹರಿಸುವವರು,ಸಹಾಯಕ ಅಥವಾ ಪ್ರೇರಣದಾಯಕ ವಚನಗಳನ್ನು ನುಡಿಯುವವರು,ಶಸ್ತ್ರಪ್ರಯೋಗದಲ್ಲಿ ನಿಪುಣರು, ಗುರಿಯಲ್ಲಿ ಪ್ರವೀಣರು,ಪಶು ಪ್ರೇಮಿ, ವ್ಯಾಪಾರಿಕ ಕಾರ್ಯಗಳಲ್ಲಿ ಅಭಿರುಚಿ ಯುಳ್ಳವರು, ಧಾರ್ಮಿಕ ಸಂಸ್ಥೆಗಳ ಅಥವಾ ಸಹಕಾರಿ ಸಂಸ್ಥೆಗಳ ಸಂಸ್ಥಾಪಕರು, ಕ್ರಯ ವಿಕ್ರಯದಲ್ಲಿ ಹಾನಿ ಅನುಭವಿಸುವವರು, ಉನ್ನತಿ ಕಾರ್ಯಗಳಲ್ಲಿ ಬಾಧೆಗೆ ಅಥವಾ ಮಾನ ಸನ್ಮಾನಕ್ಕೆ ಮಹತ್ವ ನೀಡುವವರು,ಗರ್ವಿಷ್ಟರು, ಇಂದ್ರಿಯಗಳ ರೋಗ ಪೀಡಿತರು, ತಮ್ಮ ಧರ್ಮದಲ್ಲಿ ಅರುಚಿ ಅಥವಾ ಧರ್ಮದ ವಿಷಯದಲ್ಲಿ ಅಸ್ಥಿರವಾಗಿ ನಡೆದುಕೊಳ್ಳುವವರು,ಶಿರದ ಮೇಲೆ ಗಾಯದ ಗುರುತನ್ನು ಹೊಂದಿದವರು, ವ್ಯಾಕುಲರೂ ಮತ್ತು ಸಾಹಸಿಗಳೂ ಆಗುತ್ತಾರೆ, ಜೀವನ ಸಂಗಾತಿಯಿಂದ ಇಂಥ ಜಾತಕರಿಗೆ ಪೂರ್ಣ ಅಥವಾ ವಿಶೇಷ ಸುಖ ಪ್ರಾಪ್ತಿಯಾಗುವುದಿಲ್ಲ. ಆದರೆ, ವಿರುದ್ಧ ಲಿಂಗದ ವಿಶೇಷ ಪ್ರಶಂಸಕರಾಗುತ್ತಾರೆ ಮತ್ತು ಆಕರ್ಷಣೀಯ ವಿಶೇಷ ಅನುಭವದಿಂದ ಆವರಿಸಲ್ಪಟ್ಟಿರುತ್ತಾರೆ. ಇಂಥ ಜಾತಕರು ಕಲೆ,ಸಾಹಿತ್ಯ ಅಥವಾ ಶುದ್ಧ ರಾಜನೀತಿಯ ಕ್ಷೇತ್ರವನ್ನು ಆಯ್ಕೆ ಮಾಡುವುದು ಸೂಕ್ತ.
ಸೂರ್ಯನ ಈ ರಾಶಿಯ ಮೇಲೆ ಪ್ರತಿವರ್ಷ ಭಾದ್ರಪದ ಮಾಸದಲ್ಲಿ 13 ಕಾಲು ದಿನಗಳವರೆಗೆ ಇರುತ್ತಾನೆ. ಚಂದ್ರನ್ನು ಪ್ರತಿ 27ನೇ ದಿನದಲ್ಲೋಂದು ದಿನ ಈ ನಕ್ಷತ್ರದ ಮೇಲೆ ಭ್ರಮಣ ಮಾಡುತ್ತಾನೆ.ಸೂರ್ಯ ಅಥವಾ ಶುಕ್ರ ಈ ನಕ್ಷತ್ರದ ಕ್ಷೇತ್ರದಿಂದ ಭ್ರಮಣಿಸುವಾಗ ಜನ್ಮ ಕುಂಡಲಿಯಲ್ಲಿ ಇದೇ ಗ್ರಹಗಳ ಕಾರತತ್ವದ ಪ್ರಕಾರ, ತತ್ಸಂಬಂಧಿ ಫಲಗಳನ್ನು ಪ್ರಾಪ್ತಿಹೊಂದುತ್ತಾನೆ.
ಚರಣದ ಸ್ವಾಮಿ ಫಲ :
ಪ್ರಥಮ ಚರಣದ ಸ್ವಾಮಿ ಗುರು ಬುಧ ಜಾತಕನನ್ನು ಸ್ವಾಭಾವಿಕ ಪ್ರವೃತ್ತಿಯತ್ತ ಮುನ್ನಡೆಸುತ್ತಾರೆ.
ದ್ವಿತೀಯ ಚರಣದ ಸ್ವಾಮಿ ಶುಕ್ರ ಬುಧ ಜಾತಕನಲ್ಲಿ ಸೌಂದರ್ಯ ಬೋಧನವನ್ನುಂಟು ಮಾಡುತ್ತಾರೆ.
ತೃತಿಯ ಚರಣದ ಸ್ವಾಮಿ ಶುಕ್ರ ಶುಕ್ರ ಜಾತಕನನ್ನು ರೂಪ ಪಿಪಾಸು ಮತ್ತು ಕಾಮಿಯನ್ನಾಗಿ ಮಾಡುವನು.
ಚತುರ್ಥ ಚರಣದ ಸ್ವಾಮಿ ಶುಕ್ರ ಮಂಗಳ ಸಂಕಲ್ಪದಲ್ಲಿ ವೃದ್ಧಿ ಮಾಡುವುದರೊಡನೆ, ಜಾತಕದಲ್ಲಿ ತನ್ನ ಮಾತಿನ ರಹಸ್ಯವನ್ನು ಕಾಯ್ದಡುವಂಥ ಪ್ರವೃತ್ತಿಯನ್ನುಂಟು ಮಾಡುತ್ತಾರೆ.