ಮನೆ ಜ್ಯೋತಿಷ್ಯ ಪೂರ್ವ ಪಾಲ್ಗುಣಿ ನಕ್ಷತ್ರ ಮತ್ತು ಜಾತಕ

ಪೂರ್ವ ಪಾಲ್ಗುಣಿ ನಕ್ಷತ್ರ ಮತ್ತು ಜಾತಕ

0

ಪೂರ್ವ ಪಾಲ್ಗುಣಿ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :

Join Our Whatsapp Group

ಇದು ಉಗ್ರ ನಕ್ಷತ್ರ.ಇದರಿರಲ್ಲಿ ಕಳೆದ ಅಥವಾ ಕೈತಪ್ಪಿಹೋದ ಒಡವೆ ಪುನಃ ಪ್ರಾಪ್ತಿಯಾಸಗುವುದಿಲ್ಲ. ಜ್ವರ ಬಂದರೆ ಒಂದು ತಿಂಗಳ ಅವಧಿಯವರೆಗೆ ಕ್ರೂರ.ಭೃಗುದೇವತೆಗೆ ಶಾಂತಿ ಮಾಡಿದರೆ ಪುನಃ ಆರೋಗ್ಯ ಪ್ರಾಪ್ತಿಯಾಗುತ್ತದೆ. ಕನ್ಯೆ ಋತುಮತಿಯಾದರೆ ಪತಿಗೆ ಕ್ರೂರ, ಸಂತಾನ ವಾಗುವುದಿಲ್ಲ. ಆರು ತಿಂಗಳು ಬಿಟ್ಟು ಅಥವಾ 16 ದಿನಗಳೊಳಗೆ ಅಥವಾ ಶಾಂತಿ ಮಾಡಿ ಗರ್ಭದಾನ ಮಾಡಿದರೆ ದೋಷವಾಗುವುದಿಲ್ಲ. ಈ ನಕ್ಷತ್ರದಲ್ಲಿ ಕ್ಷೌರ, ಪ್ರಯಾಣ,ಮುಂಜಿ, ಮದುವೆ ಮುಂತಾದ ಶುಭ ಕ ರ್ಮಗಳನ್ನು ಮಾಡಬಾರದು.ಕಪಟ, ಮೋಸ, ಅಸತ್ಯ ನುಡಿಯುವುದು, ವಿರೋಧ, ಆಗಿಯುವುದು ಮುರಿಯುವುದು ತಿಳಿಯುವುದು ಹೊಡೆಯುವುದು, ಸುಡುವುದು, ಜೂಜು, ಮಾಟ, ಚೌರ್ಯ,ನಿಧಿ ಕ್ಷೇಪ, ಪಿಶಾಚ ಕೃತ್ಯ ಇಂಥ ಕ್ರಮಗಳಿಗೆ ಈ ನಕ್ಷತ್ರ ಬಲಿಷ್ಠ ವಾದುದ್ದು. ಈ ನಕ್ಷತ್ರದಲ್ಲಿ ಜನಿಸಿದ ಜಾತಕನಿಗೆ ಕಲಿಸುಖದಲ್ಲಿ ವೃದ್ಧಿಯಾಗುತ್ತದೆ. ಹಾಗೂ ಗಂಡಕಾಲಗಳು ಕಳೆದರೆ 89 ವರ್ಷ ಪೂರ್ಣಯಸ್ಸು ಇರುತ್ತದೆ.

ಪೂರ್ವ ಪಾಲ್ಗುಣಿ ನಕ್ಷತ್ರದ ಜಾತಕರ ವಿವಾಹಕ್ಕೆ ಹೊಂದುವ ನಕ್ಷತ್ರಗಳು :

ಪೂರ್ವ ಪದ ನಕ್ಷತ್ರದ ಕನ್ಯೆಗೆ :

ಅಶ್ವಿನಿ, ಭರಣಿ ಕೃತಿಕಾ ಒಂದನೇ ಚರಣ, ಮೃಗಶಿರಾ 3 4ನೇ ಚರಣ, ಆರ್ದ್ರಾ, ಪುನರ್ವಸು,ಪುಷ್ಯ, ಆಶ್ಲೇಷಾ, ಮಘಾ, ಪೂರ್ವಾ ಫಾಲ್ಗುಣಿ,ಹಸ್ತಾ, ಚಿತ್ತಾ, ಒಂದು ಎರಡನೇ ಚರಣ, ಸ್ವಾತಿ,ವಿಶಾಖಾ, ನಾಲ್ಕನೇ ಚರಣ ಅನುರಾಧ, ಜೇಷ್ಠಾ, ಮೂಲಾ, ಪೂರ್ವಾಷಾಢಾ,ಉತ್ತರಾಷಾಢಾ, ಶ್ರಾವಣ, ಧನಿಷ್ಠಾ, ಒಂದನೇ ಎರಡನೇ ಚರಣ,ಶತಭಿಷಾ,ಪೂರ್ವ ಭಾದ್ರಪದ, ರೇವತಿ.

ಪೂರ್ವ ಭದ್ರಪದಾ ನಕ್ಷತ್ರದ ವರನಿಗೆ :

ಅಶ್ವಿನಿ,ಭರಣಿ,ಕೃತಿಕಾ ಒಂದನೇ ಚರಣ, ರೋಹಿಣಿ, ಮೃಗಶಿರಾ, ಆರ್ದಾರಾ ಪುನರ್ವಸು, ಪುಷ್ಯ, ಆಶ್ಲೇಷಾ,ಪೂರ್ವಾ ಪಾಲ್ಗುಣಿ, ಉತ್ತರಾ, ಹಸ್ತಾ,ಚಿತ್ತಾ, ಒಂದನೇ ಎರಡು ಎರಡನೇ ಚರಣ, ಸ್ವಾತಿ,ವಿಶಾಖ ನಾಲ್ಕನೇ ಚರಣ, ಅನುರಾಧ ಜೇಷ್ಠಾ ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರಾವಣ,ಪೂರ್ವಭಾದ್ರಪದ ನಾಲ್ಕನೇ ಚರಣ ರೇವತಿ.

ಪೂರ್ವಾಷಾಢಾ ನಕ್ಷತ್ರದವರ ಜನನಕ್ಕೆ ಶಾಂತಿ :

ಭಗಪ್ರಣೀತರ್ಭಗ ಸತ್ಯರಾಧೋ ಭಗೇ ಮಾಂಧಿಯ ಮುದವಾದದಹ್ನಃ |

ಈ ನಕ್ಷತ್ರದಲ್ಲಿ ಸಂತಾನ ಜನವಾದರೆ ತಾಯಿ ತಂದೆಯರು ಈ ಮೇಲಿನ ಮಂತ್ರವನ್ನು ಒಂದು ಮಾಲೆಯಷ್ಟು ಪಠಿಸಿ, ಯಥಾ ಸಾಮರ್ಥ್ಯ ಅಕ್ಕಿ,ಬೆಲ್ಲ, ಗೋಧಿ,ಯನ್ನು ದಾನ ನೀಡಬೇಕು., ಇದರಿಂದ ನಕ್ಷತ್ರ ದೋಷಗಳು ಶಾಂತವಾಗುತ್ತವೆ.

ಸರ್ವ ಪ್ರಥಮ ಈ ಯಂತ್ರವನ್ನು ಸರ್ವಪತ್ರದ ಮೇಲೆ ಉತ್ಕೀರ್ಣಗೊಳಿಸಿ. ಈ ಕೆಳಗಿನ ಮಂತ್ರವನ್ನು ಒಂದು ಸಹಸ್ರ ಸಲ ಜಪಿಸಿ,ಧೂಪವನ್ನು ಅರ್ಪಿಸಬೇಕು.

ಭಗಏವ ಭಗವಾನ್ ಅಸ್ತುದೇವಾ ಸ್ತೇನವಯಂ ಭಗವಂತಸ್ಯಾಮ|
ತಂ ತ್ವಾಭಗ ಸರ್ವ ಇಜ್ಞೋಹಮೀತಿ ಸನೋ ಭಗ ಪುರೇಏತಾ ಭವೇಹ||

 ಸಕ್ಕರೆ ಅನ್ನ, ಅಪೂಪ, ಲಾಡು ನೈವೇದ್ಯ ಮಾಡಿ,ತುಪ್ಪದ ಅನ್ನದಲ್ಲಿ ಹೋಮಮಾಡಿ ಪಾಯಸಾನ್ನ ಬಲಿ ನೀಡಬೇಕು.ನಂತರ ಯಂತ್ರವನ್ನು ಶರೀರದಲ್ಲಿ ಧಾರಣೆ ಮಾಡಬೇಕು. ಇದರಿಂದ ಈ ನಕ್ಷತ್ರದ ಸರ್ವದೋಷಗಳು ಶಾಂತವಾಗುತ್ತವೆ.

ಯಂತ್ರ :

ಓಂ ಅಹಂ ಸಃ
ಭಗಾಯ ನಮಃ