ಕ್ಷೇತ್ರ – ಸಿಂಹ ರಾಶಿಯಲ್ಲಿ 13 ಡಿಗ್ರಿ 20 ಕಲೆಯಿಂದ 26 ಡಿಗ್ರಿ ೪೦ ಕಲೆಯವರೆಗೆ. ರಾಶಿಸ್ವಾಮಿ – ಸೂರ್ಯ, ನಕ್ಷತ್ರಸ್ವಾಮಿ – ಶುಕ್ರ, ನಾಡಿ –ಮಧ್ಯ, ಗಣ – ಮನುಷ್ಯ, ಯೋನಿ – ಮೂಷಕ, ನಾಮಾಕ್ಷರಗಳು – ಮೋ,ಟಾ,ಟೀ,ಟೂ. ಶರೀರಭಾಗಗಳು – ಹೃದಯ, ಸುಷುಮ್ನಾನಾಡಿ, ಬೆನ್ನುಹುರಿ,ಬೆನ್ನು.
ರೋಗಗಳು :- ಹೃದಯ ರೋಗ, ರಕ್ತ ದೋಷ, ಸಂತಾನಕ್ಕೆ ತೊಂದರೆ, ವಿಪರೀತ ಲಿಂಗದವರಿಂದ ತೊಂದರೆ, ಗರ್ಭಪಾತ, ದ್ವೇಷ ಸಂಭವ, ರಕ್ತಕ್ಷೀಣತೆ, ಕಾಲುನೋವು, ರಕ್ತದೊತ್ತಡ ಮತ್ತು ಅತಿಸಾರ.
ಸಂರಚನೆ :- ಸಂಗೀತ ಪ್ರೇಮಿ, ಕವಿ, ಉದಾರ, ಪ್ರಿಯದರ್ಶಿ, ಮನರಂಜನಾ ಪ್ರಿಯ, ಹಸನ್ಮುಖಿ, ಪ್ರಾಮಾಣಿಕ, ಸತ್ಯಪ್ರಿಯ, ಸಮಾಧಾನಿ, ನೃತ್ಯ, ಕ್ರೀಡಾಪಟು, ಚಿತ್ರಕಾರ, ಶಿಲ್ಪಕಾರ, ನಟ, ಮೂರ್ತಿ ಕಾರ, ಸಿಪಾಯಿ, ವಿಶ್ವಾಸ ಪಾತ್ರ ,ಹತ್ತಿ ಉಪ್ಪು, ಜೇನು ವ್ಯಾಪಾರಗಳಲ್ಲಿ ಆಸಕ್ತನು, ವಿನಯಶೀಲ, ಉತ್ತಮ ಮಾತುಗಾರ, ಸಂಶಯಿ, ದಕ್ಷ ಯತ್ರಾಪ್ರಿಯ, ವೈಭವ ಪ್ರಿಯ, ಉಚ್ಚಧಿಕಾರಿ, ಸ್ತ್ರೀ ಭಕ್ತನಾಗಬಹುದು.
ಉದ್ಯೋಗ ಮತ್ತು ವಿಶೇಷ :- ಸರಕಾರಿ ಸೇವೆ, ಸಂಚಾರ ಸೇವೆ, ರೇಡಿಯೋ ಕಲಾವಿದ, ವಸ್ತು ಸಂಗ್ರಹಿಸಿ, ಪ್ರದರ್ಶಕ, ಸಿನೇಮಾ ಪೋಟೋ ಗ್ರಾಫಿಯಲ್ಲಿ ಆಸಕ್ತ, ಪಶುಪಾಲಕ, ಪಶುಚಿಕಿತ್ಸಕ, ಕಟುಕ, ಜೈಲಿನಾಧಿಕಾರಿ, ಹೋಟೆಲ್ ನಡೆಸುವವ, ಮನೆ, ವಸ್ತು ಸಂಗ್ರಹಾಲಯದ ನಿರ್ಮಾಣಕಾರ ಪಂಡಿತ, ಅಧ್ಯಾಪಕ, ಸಂಪಾದಕ, ಸಲಹೆಗಾರ, ಕಂಚಿನ ವ್ಯಾಪಾರಿಗಳಾಗಬಹುದು.
ಈ ನಕ್ಷತ್ರದಲ್ಲಿ ಜನಿಸಿದವರು ಕರುಣಾಮಯಿ, ಪಶು ಪ್ರೇಮಿ, ವ್ಯಾಪಾರಿ, ಧಾರ್ಮಿಕ ಕಾರ್ಯಪ್ರಿಯ, ಅಹಂಕಾರಿ, ಸಾಂಸಾರಿಕ ಸುಖ ಪಡೆಯುವವನು, ಸಾಹಿತ್ಯ, ರಾಜನೀತಿ ಕ್ಷೇತ್ರಗಳಲ್ಲಿ ಆಸಕ್ತರಾಗಿರುವವನು, ಸೂರ್ಯನು ಈ ನಕ್ಷತ್ರದಲ್ಲಿ ಭಾದ್ರಪದ ಮಾಸದಲ್ಲಿ 13 ದಿನವಿರುವವನು ಸೂರ್ಯ ಅಥವಾ ಶುಕ್ರ ಈ ನಕ್ಷತ್ರದ ಮೂಲಕ ಹಾದು ಹೋದಾಗ ವಿಶೇಷ ಫಲ ನೀಡುವನು.