ಪೂರ್ವವೆಂದರೆ ಪೂರ್ವದಿಕ್ಕು ಅಲ್ಲದೆ, ‘ಪೂರ್ವಕಾಯ’ ಅಂದರೆ ದೇಹವು ಪೂರ್ವ ಭಾಗ. ಇಲ್ಲವೆ ಹಣೆಯಿಂದ ಕಾಲ್ಬೆರಳುಗಳವರೆಗಿನ ಇಡೀ ದೇಹದ ಮುಂಭಾಗ ಉತ್ತಾನ ಹಿಗ್ಗಿಸುವುದು.ಈ ಭಂಗಿಯಲ್ಲಿ ದೇಹದ ಮುಂಭಾಗವನ್ನೆಲ್ಲ ಹೆಚ್ಚು ಹಿಗ್ಗಿಸಬೇಕಾಗಿರುವುದರಿಂದ ಆಸನಕ್ಕೆ ಈ ಹೆಸರು.
ಅಭ್ಯಾಸ ಕ್ರಮ
1. ಮೊದಲು ನೆಲದ ಮೇಲೆ ಕುಳಿತು,ಕಾಲುಗಳನ್ನು ಮುಂಗಡೆಗೆ ನೀಳವಾಗಿ ಚಾಚಿಡಬೇಕು.
2. ಬಳಿಕ ಅಂಗೈಗಳನ್ನು ಟೊಂಕಗಳ ಪಕ್ಕಕ್ಕೆ ನೆಲದ ಮೇಲೂರಿ, ಕೈ ಬೆರಳುಗಳನ್ನು ಪಾದಗಳಿರುವ ಕಡೆಗೆ ತುದಿ ಮಾಡಿಡಬೇಕು.
3. ಶರೀರದ ಒತ್ತಡವನ್ನೆಲ್ಲವನ್ನು ಕೈಗಳಿಗೆ ಮತ್ತು ಪಾದಗಳಿಗೆ ವಹಿಸಿ,ಉಸಿರನ್ನು ಹೊರ ಹೋಗಿಸಿ ದೇಹವನ್ನು ನೆಲದಿಂದ ಮೇಲೆ ಕೆಬ್ಬಿಸಬೇಕು ತೋಳುಗಳನ್ನು ಕಾಲುಗಳನ್ನು ನೀಳಮಾಡಿ,ಮೊಣ ಕೈ ಮಂಡಿಗಳನ್ನು ಬಿಗಿ ಮಾಡಬೇಕು.
4. ತೋಳುಗಳನ್ನು ಹೆಗಲಿನಿಂದ ಹಿಡಿದು ಮಣಿಕಟ್ಟಿನವರೆಗೂ ನೀಳಮಾಡಿ,ನೆಲಕ್ಕೆ ಲಂಬವಾಗಿರುವಂತೆ ಅಳವಡಿಸಬೇಕು ಮುಂಡವು ಹೆಗಲುಗಳಿಂದ ವಸ್ತುಕುಹರದವರೆಗೂ ನೆಲಕ್ಕೆ ಸಮಾಂತರವಾಗಿರುವಂತೆ ಮಾಡಬೇಕು.
5. ಬಳಿಕ ಕತ್ತನ್ನು ಹಿಗ್ಗಿಸಿ ತಲೆಯನ್ನು ಸಾಧ್ಯವಾದಷ್ಟು ಬಿಸಿಟ್ಟು ಹಿಂದೂಡಬೇಕು.
6. ಈ ಭಂಗಿಯಲ್ಲಿ,ಸುಮಾರು ಒಂದು ನಿಮಿಷಕಾಲ ನೆಲೆಸಿ,ಸಾಮಾನ್ಯವಾದ ಉಸಿರಾಟ ನಡೆಸಬೇಕು.
7. ಅನಂತರ ಉಸಿರನ್ನು ಹೊರ ಬಿಟ್ಟು ಮೊಣಕೈ ಮಂಡಿಗಳನ್ನು ಭಾಗಿಸಿ, ದೇಹವನ್ನು ನೆಲಕ್ಕಿಳಿಸಿ ವಿಶ್ರಮಿಸಿಕೊಳ್ಳಬೇಕು.
ಪರಿಣಾಮಗಳು
ಈ ಭಂಗಿಯು, ಕೈ ಮಣಿಕಟ್ಟು ಮತ್ತು ಕಾಲಹರಡುಗಳನ್ನು ಬಲಗೊಳಿಸುತ್ತದೆ ಹೆಗಲಿನ ಕೀಲುಗಳು ಸರಿಯಾಗಿ ಚಲಿಸುವಂತೆ ಮಾಡುತ್ತದೆ. ಅಲ್ಲದೆ ಮುಂಬಾಗುವ ಕಷ್ಟತರವಾದ ಆಸನಗಳ ಅಭ್ಯಾಸದಿಂದಾದ ವ್ಯಾಯಾಮದಲ್ಲಿ ಸಂಭವಿಸುವ ಆಯಾಸವನ್ನು ಆ ಆಸನದ ಭಂಗಿಯು ಕಳೆದುಬಿಡುತ್ತದೆ. ಕಳೆದುಬಿಡುತ್ತದೆ