ಮನೆ ಜ್ಯೋತಿಷ್ಯ ಪುಷ್ಯ

ಪುಷ್ಯ

0

ಕ್ಷೇತ್ರ – ಕರ್ಕ, ರಾಶಿಯಲ್ಲಿ 3 ಡಿಗ್ರಿ 20 ಕಲೆಯಿಂದ, 16ಡಿಗ್ರಿ 40 ಕಲೆ. ನಕ್ಷತ್ರಸ್ವಾಮಿ – ಶನಿ, ರಾಶಿಸ್ವಾಮೀ – ಚಂದ್ರ, ಗಣ – ದೇವಾ, ಯೋನಿ- ಮೇಷ, ನಾಡಿ – ಮಧ್ಯ, ನಾಮಾಕ್ಷರ – ಹೂ,ಹೆ, ಹೋ, ಹಾ. ಶರೀರ ಭಾಗ – ಪುಪ್ಪಸ, ಹೊಟ್ಟೆ – ಕರುಳುಗಳು, ರೋಗಗಳು – ಕ್ಷಯ, ಅಪಸ್ಮಾರ ಹುಣ್ಣು, ಗ್ಯಾಸ್ ಟ್ರಬಲ್, ಪಿತ್ತ, ವಾಕರಿಕೆ, ತೇಗುವುದು, ಬಿಕ್ಕುವುದು, ಕೊಬ್ಬು ಸಂಗ್ರಹವಾಗುವುದು. ರಾಜಯಕ್ಷ್ಮ, ಹಳದಿ ರೋಗ, ಒಣ ಕೆಮ್ಮು, ಅಜೀರ್ಣ.

ಸಂರಚನೆ :- ಬುದ್ಧಿವಂತ, ವಿವೇಕಿ, ಅಲ್ಪವ್ಯಯೀ, ಮಿತಹಾರಿ, ಚಿಂತನಶೀಲಾ, ಸಾವಧಾನ ಗತಿಯವ ಕ್ರಮಬದ್ಧ ಜೀವನ ಶೈಲಿ ಇರುವ ಸುರಕ್ಷಿತ ಕಾರ್ಯ ಮಾಡುವವನು. ರಾಜ, ಮಂತ್ರಿ, ಅಧಿಕಾರಿ, ಪಂಡಿತ, ಮೀನುಗಾರ, ತ್ಯಾಗಶೀಲ, ನಾವಿಕನಾಗಬಹುದಾಗಿದೆ. ಅಡವಿಯಲ್ಲಿ ಕೆಲಸ ಮಾಡುವ, ಕಬ್ಬು, ಗೋಧಿ, ಭತ್ತ, ಜೋಳ ಬೆಳೆಯುವ, ತಾಂತ್ರಿಕ ವಿಜ್ಞಾನ ತಿಳಿದವ, ಸ್ಪಷ್ಟವಾದಿ ಆಲೋಚಕ, ವ್ಯವಹಾರಿಕ ಕುಶಲನಾಗಬಹುದಾಗಿದೆ.

ಉದ್ಯೋಗ, ವಿಶೇಷತೆಗಳು :- ಗಣಿಕೈಗಾರಿಕೆ, ಉಣ್ಣೆವಸ್ತುಗಳ ಕೈಗಾರಿಕೆ, ಪೆಟ್ರೋಲ್, ಕಲ್ಲಿದ್ದಲು ಮುಂತಾದವುಗಳ ವ್ಯವಹಾರ, ಬಾವಿಗಳು, ಕೃಷಿ ನೀರಾವರಿ, ನ್ಯಾಯಾಲಯದಲ್ಲಿ ಕೆಲಸ ಮಾಡುವುದು, ಗುಪ್ತಚರ, ನಳಜೋಡಿಸುವವ, ಜೈಲು ರಕ್ಷಕ, ಸ್ಮಶಾನ ಪೂಜಾರಿ, ಇಂಜಿನಿಯರ್, ಪ್ರವಾಸ ನಿರೀಕ್ಷಕ, ರಸ್ತೆ ನಿರ್ಮಾಣ ಮಾಡುವ ಇಂಜಿನಿಯರ್, ಅಣೆಕಟ್ಟು, ಸುರಂಗ ನಿರ್ಮಿಸುವ, ಯಂತ್ರ ಚಾಲಕ, ಹಡಗು ವಿಮಾನ ಚಾಲಕ ಅಥವಾ ದಂಡ ವಸೂಲಿ ಮಾಡ ಮಾಡುವವನು ಆಗಬಹುದಾಗಿದೆ.       

ಈ ನಕ್ಷತ್ರದಲ್ಲಿ ಜನಿಸಿದವರು ಪರಿವಾರದೊಡನೆ ಹೊಂದಿಕೊಂಡಿರುವವರು, ಕಠಿಣ ಕಾರ್ಯಗಳನ್ನು ಮಾಡುವವರು, ಯಂತ್ರಗಳನ್ನು ಉಪಯೋಗಿಸುವವರು, ಶಿವಭಕ್ತರು ಆಗಬಹುದು. ಶನಿಯ ಪ್ರಭಾವಹೊಂದಿ ಮಿತ್ರರಿಂದ ಅನಾದರ ಪಡೆಯಬಹುದು. ಸದಾ ಚಿಂತಿತರಾಗಿದ್ದು, ದೀರ್ಘಾಯುಷ್ಯ ಪಡೆದ, ಇವರು ದಾರ್ಶನಿಕ, ಸಹಾಸ ಕಾರ್ಯ ಮಾಡುವವರು ಆಗಬಹುದಾಗಿದೆ. ಸೂರ್ಯನು ಈ ನಕ್ಷತ್ರದಲ್ಲಿ ಶ್ರಾವಣ ಮಾಸದಲ್ಲಿರುವವನು. ಶನಿಯು ಈ ನಕ್ಷತ್ರದಿಂದ ದಾಟಿ ಹೋಗುವಾಗ ವಿಶೇಷ ಫಲ ನೀಡುವನು.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಶಾಕ್ತೇಯ (ಕಾಳಿ – ಭಗವತಿ) ಕಾವ್ ಗಳು