ಮನೆ ಜ್ಯೋತಿಷ್ಯ ಪುಷ್ಯ ನಕ್ಷತ್ರ ಮತ್ತು ಜಾತಕ

ಪುಷ್ಯ ನಕ್ಷತ್ರ ಮತ್ತು ಜಾತಕ

0

 ಪುಷ್ಯ  ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :

      ಈ ನಕ್ಷತ್ರ ವಿವಾಹಕ್ಕೆ ಉತ್ತಮವಲ್ಲ ವೈಶಾಖದಲ್ಲಿ ಇದು ಶೂನ್ಯ ನಕ್ಷತ್ರ.ಇದರಲ್ಲಿ ಉತ್ಪಾತ ಉಂಟಾದರೆ ಮಳೆ ಸುರಿಯುತ್ತದೆ. ಸಂಕ್ರಮಣವಾದರೆ ಧಾರಣೆ ಸಮನಾಗಿರುತ್ತದೆ.

     ಈ ನಕ್ಷತ್ರದಲ್ಲಿ ಋತುಮತಿಯಾದ ಕನ್ಯೆಯು ಪುತ್ರವತಿ ಮತ್ತು  ಪತಿವ್ರತೆಯಾಗುತ್ತಾಳೆ. ಗರ್ಭಿಣಿಗೆ ಬಳೆ ತೊಡಿಸುವುದು, ಮೂಡಿಸುವುದು, ಶೋಭನ ಪ್ರಸ್ತ. ನಾಮಕರಣ, ಮಗುವಿಗೆ ಅನ್ನಮಹೂರ್ತ, ಕಿವಿ ಚುಚ್ಚುವುದು, ಚಂಡಿಗೆ ಬಿಡಿಸುವುದು, ಚೌಲ, ಮುಂಜಿ ಕ್ಷೌರ, ಅಕ್ಷರಾಭ್ಯಾಸ, ವಿದ್ಯಾರಂಭ, ತೈಲಾಭ್ಯಂಜನ, ನವೀನ ವಸ್ತ್ರಧಾರಣ, ಆಭರಣ ಮಾಡಿಸುವುದು, ಆಭರಣ ಧರಿಸುವುದು, ಹೊಸಮನೆಯ ನಿರ್ಮಾಣ, ಗೃಹಪ್ರವೇಶ, ವಾಹನ ಖರೀದಿ,ದೀಕ್ಷೆ ಮಂತ್ರೋಪದೇಶ,ಶಾಂತಿ ಪೌಷ್ಟಿಕ ಕಾರ್ಮಗಳು,ಭೂಮಿಯನ್ನು ಉತ್ತಿ ಬಿತ್ತುವುದು, ಪಿತೃಶ್ರಾದ್ಧ, ನವೀನ ಒಲೆಯ ನಿರ್ಮಾಣ,ಯಂತ್ರ ತಂತ್ರ ಚಿಕಿತ್ಸೆ ಮುಂತಾದ ಕಾರ್ಯಗಳನ್ನು ಮಾಡಿದರೆ ಶುಭವಾಗುತ್ತದೆ.

    ಈ ನಕ್ಷತ್ರದಲ್ಲಿ ಜನಿಸಿದ ಜಾತಕನು ಪುಣ್ಯವಂತನಾಗಿ ಜೀವನ ನಡೆಸುತ್ತಾನೆ. ಈ ನಕ್ಷತ್ರದ ಒಂದನೇ ಚರಣ ಉತ್ತಮವಲ್ಲ ಮೂರನೇ ಚರಣವೂ ಉತ್ತಮವಲ್ಲ ಎರಡು ನಾಲ್ಕನೇ ಚರಣಗಳು ಉತ್ತಮವಾದಂಥವು.  ಸರ್ವಪ್ರಥಮ ಶನಿಯ ದೆಶೆ 5, 16, 37, 64ನೇ ವರ್ಷಗಳು ಗಂಡಕಾಲಗಳು ಮತ್ತು 90 ವರ್ಷ ಪರಮಾಯುಷ್ಯವಾಗಿರುತ್ತದೆ.

 ಪುಷ್ಯ  ನಕ್ಷತ್ರದ ಜಾತಕದ ವಿವಾಹಕ್ಕೆ ಹೊಂದುವ ನಕ್ಷತ್ರಗಳು:

 ಪುಷ್ಯ ನಕ್ಷತ್ರದ ಕನ್ಯೆಗೆ :

 ಅಶ್ವಿನಿ, ಭರಣಿ,ಕೃತಿಕಾ ಒಂದನೇ ಚರಣ, ರೋಹಿಣಿ,ಮೃಗಶಿರಾ, ಆರ್ದ್ರಾ, ಪುನರ್ವಸು,ಪುಷ್ಯ, ಮಘಾ, ಉತ್ತರಾಪಾಲ್ಗುಣಿ,ಉತ್ತರಾ ಒಂದನೇ ಚರಣ, ಹಸ್ತಾ, ಚಿತ್ತಾ, ಸ್ವಾತಿ,ವಿಶಾಖಾ, ನಾಲ್ಕನೇ ಚರಣ, ಅನುರಾಧಾ, ಜೇಷ್ಠಾ, ಮೂಲಾ, ಉತ್ತರಾಷಾಢಾ, ಒಂದನೇ ಚರಣ ಪೂರ್ವ ಭಾದ್ರಪದಾ ರೇವತಿ.

 ಪುಷ್ಯ ನಕ್ಷತ್ರದ ವರನಿಗೆ :

 ಅಶ್ವಿನಿ, ಭರಣಿ, ಕೃತಿಕಾ ಒಂದನೇ ಚರಣ, ಮೃಗಶಿರಾ, ಮೃಗರಾಶಿ, ಪುಷ್ಯ, ಮಘಾ, ಪೂರ್ವಾ, ಪಾಲ್ಗುಣಿ,ಉತ್ತರಾ, ಹಸ್ತಾ, ಸ್ವಾತಿ,ವಿಶಾಖಾ 4ನೇ ಚರಣ, ಅನುರಾಧಾ, ಜೇಷ್ಠಾ, ಮೂಲಾ, ಉತ್ತರಾಷಾಢಾ,ಧನಿಷ್ಠ 3ನೇ ನಾಲ್ಕನೇ ಚರಣ, ಶತಭಿಷಾ,  ಪೂರ್ವಭಾದ್ರಪದಾ ಉತ್ತರಾ ಭಾದ್ರಪದಾ, ರೇವತಿ.

 ಪುಷ್ಯ ನಕ್ಷತ್ರದವರ ಜನನಕ್ಕೆ ಶಾಂತಿ :

 *ವಾಚಸ್ಪತಯೇ ಪವಸ್ವ ವೃಷ್ಣೋ ಅಗ್ಂ ಶುಭ್ಯಾಂಗ ಭಸ್ತಿಪೂತಃ |

 ದೇವೂ ದೇವೇಭ್ಯಃ ಪವಸ್ವಯೇಷಾಂ ಭಾಗೋಸಿ||

    ಈ ನಕ್ಷತ್ರದಲ್ಲಿ ಸಂತಾನ ಜನಿಸಿದಾಗ ಈ ಮಂತ್ರವನ್ನು ತಾಯಿ ತಂದೆಯರು,ಒಂದು ಮಾಲೆ ಯಷ್ಟು ಜಪಮಾಡಿ,ಯಥಾ ಸಾಮರ್ಥ್ಯ ಅಕ್ಕಿ, ಹಾಲು ಬೆಲ್ಲವನ್ನು ದಾನ ನೀಡಬೇಕು. ಇದರಿಂದ ಈ ನಕ್ಷತ್ರದ ದೋಷಗಳು ದೂರವಾಗುತ್ತವೆ.

      ಯಂತ್ರ:  ಸರ್ವ ಪ್ರಥಮ ಯಂತ್ರವನ್ನು ಸುವರ್ಣ ಪತ್ರದ ಮೇಲೆ ಉತ್ತೀರ್ಣಗೊಳಿಸಬೇಕು ನಂತರ ಗುಗ್ಗುಳದ ಧೂಪವನ್ನು ನೀಡಿ, ಕೆಳಗಿನ ಮಂತ್ರವನ್ನು ಒಂದು ಸಹಸ್ರ ಸಲ ಜಪ ಮಾಡಬೇಕು 

, ———————————

 ಓಂ ಓಂ ಗುರುವೇ ನಮಃ

————————————

ಪಂ ಪಾಂ ಪಿಂ ಪೀಂ

————————————

 ಬೃಹಸ್ಪತೇ ಅತಿಯದರ್ಯೋ ಅರ್ಹದ್ವಿಭಾತಿ ಕ್ರತುಮಜ್ಜನೇಷು |

 ಯದ್ವೀದಯಚವಸಕ್ತ ಪ್ರಜಾತ ತದಸ್ಮಾಸುದ್ರವಿಣಂ ಧೇಹಿ ಚೆತ್ರಮ್||

   ಈ ಯಂತ್ರವನ್ನು ಕಮಲ ಪುಷ್ಪದಲ್ಲಿಟ್ಟು ಪೂಜಿಸಿ,ಪಾಯಸ ನೈವೇದ್ಯ ಅರ್ಪಿಸಬೇಕು.ಮಂಡಿಗೆ, ಫೇಣೆ, ಗುಡಾನ್ನಗಳಿಂದ ಹೋಮ ಮಾಡಿ, ಮಂಡಿಗೆಯನ್ನು ತುಪ್ಪಾನ್ನ ಸಹಿತ ಬಲಿ ನೀಡಬೇಕು.ನಂತರ ಯಂತ್ರವನ್ನು ಶರೀರದಲ್ಲಿ ಧಾರಣ ಮಾಡಬೇಕು.ಇದರಿಂದ ಸರ್ವ ದೋಷಗಳು ಪರಿಹಾರವಾಗಿ ಸುಖ ಆರೋಗ್ಯ ತೇಜಸ್ಯಾದಿಗಳು ಪ್ರಾಪ್ತಿಯಾಗುತ್ತವೆ.