ಮನೆ ಜ್ಯೋತಿಷ್ಯ ಪುತ್ಥಳಿ ದಾಹದ ಮುಹೂರ್ತ

ಪುತ್ಥಳಿ ದಾಹದ ಮುಹೂರ್ತ

0

 ಶುಕ್ರಾರಾಕ್ರಿಪು ದರ್ಶಭೂತಮದನೇ ನಂದಾಸು ತೀಕ್ಷ್ಣೋಗ್ರಭೇ

 ಪೌಷ್ಣೇವಾರುಣಭೇ ತ್ರಿಪುಷ್ಕರದಿನೇ ನ್ಯೂನಾಧಿಮಾಸೇಯನೇ|

 *ಯಾಮೇೖಬ್ದಾತ್ಯರತಶ್ಚಪಾತರಿಘೇದೇವೇಜ್ಯಶುಕ್ರಾಸ್ತಕೇ

 ಮ್ರದಾವೈಧೃತಯೋಃ ಶವಪ್ರತಿಕೃತೇರ್ದಾಹೋ ನ ಪಕ್ಷೇ ಸಿತೇ ||

Join Our Whatsapp Group

    ಶುಕ್ರ,ಮಂಗಳ ಮತ್ತು ಶನಿವಾರ ಅಮಾವಾಸ್ಯೆ, ಚತುರ್ದಶಿ,ತ್ರಯೋದಶಿ, ನಂದಾ 1/16/11 ಈ ತಿಥಿಯಲ್ಲಿ ಮತ್ತು ತೀಕ್ಷ್ಣ ಸಂಜ್ಞಕ,ಉಗ್ರಸಂಜ್ಞಕ,ರೇವತಿ, ಶತಭಿಷರರೋಗ ಕ್ಷಯಮಾಸ ಅಧಿಕಮಾಸ ದಲ್ಲಿ ಒಂದು ವರ್ಷದ ನಂತರ ದಕ್ಷಿಣಾಯಣದಲ್ಲಿ, ವೃತ್ತಿ ಪಾತಯೋಗ ಮತ್ತು ಪರಿಘಯೋಗದಲ್ಲಿ ಗುರು ಮತ್ತು ಶುಕ್ರನ ಆಸ್ತದಲ್ಲಿ,ಭದ್ರಾದಲ್ಲಿ ಮತ್ತು ವೈಧೃತಿ ಮಹಾಪಾತದಲ್ಲಿ ಮತ್ತು ಶುಕ್ಲಪಕ್ಷದಲ್ಲಿ ಮೃತನಿಗಾಗಿ ನಿರ್ಮಿಸಿದ ಮೃತನಾ ಪುತ್ಥಳಿ  ಆಕೃತಿಯ ದಾಹ ದಹನ ಮಾಡುವುದು ಶುಭವಾಗುವುದಿಲ್ಲ.

 ಪ್ರೇತಕ್ರಿಯಾ ಮುಹೂರ್ತ :

 ಜನ್ಮಪ್ರತ್ಯರಿತಾರಯೋಮೃತಸುಖಾಂತ್ಯೇಬ್ಜೇ ಚ ಕರ್ತ್ತುರ್ನ ಸನ್

 ಮದ್ಯೋಮೈತ್ರಭಗಾದಿತಿಧ್ರುವವಿಶಾಖಾದ್ವ್ಯಾಂಘ್ರಿಮೇ* ಜ್ಞೇಪಿಚ|

 ಶ್ರೇಷೋರ್ಕೇಜ್ಯವಿಧೋರ್ದಿನೇ ಶ್ರುತಿಕರಸ್ವಾತ್ಯಶ್ಚಿಪುಣ್ಯೇತಥಾ

 ತ್ವಾಶೌಚಾತ್ ಪರತೋ ವಿಚಾರ್ಯ್ಯಮಖಿಲಂ ಮಧ್ಯೇ ಯಥಾಸಂಭವಮ್ ||

      | ಜನ್ಮ ನಕ್ಷತ್ರ ಮತ್ತು ಪ್ರತ್ಯರಿ  ನಕ್ಷತ್ರದಲ್ಲಿ ಹಾಗೂ 8 /4 /12ನೇ ಭಾವದಲ್ಲಿ ಚಂದ್ರನಿದ್ದರೆ, ಕರ್ತನು ಪ್ರೇತದ ಕ್ರಿಯೆಯನ್ನು ಮಾಡಬಾರದು. ಅನುರಾಧಾ, ಪೂರ್ವಫಾಲ್ಗುಣಿ, ಪುನರ್ವಸು,ಧ್ರುವ ಸರ್ಜ್ಞಕ, ವಿಶಾಖಾ, ಮೃಗಶಿರಾ, ಚಿತ್ತಾ,ದನಿಷ್ಠ ಈ ನಕ್ಷತ್ರಗಳಲ್ಲಿ ಮತ್ತು ಬುಧವಾರ ಪೇತಕರ್ಮದಲ್ಲಿ ಮಧ್ಯಮ ವಾದಂಥವು. ರವಿವಾರ, ಗುರುವಾರ ಮತ್ತು ಸೋಮವಾರದಲ್ಲಿ,ಶ್ರವಣ,ಹಸ್ತಾ, ಸ್ವಾತಿ,ಅಶ್ವಿನಿ, ಪುಷ್ಯ ಈ ನಕ್ಷತ್ರಗಳಲ್ಲಿ ಪ್ರೇತಕ್ರಿಯೆ ಶ್ರೇಷ್ಠವಾದುದು.ಈ ವಿಚಾರವನ್ನು ಅಶೌಚದನಂತರ ನಂತರ ಮಾಡಬೇಕು. ಅಶೌಚದ ಮಧ್ಯದಲ್ಲಿ ಹೇಗೆ ಸಂಭವವಾಗುತ್ತದೋ, ಹಾಗೆಯೇ ಮಾಡಬೇಕು.