ಮನೆ ಅಪರಾಧ ಪುತ್ತೂರು : ಏಳು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಪುತ್ತೂರು : ಏಳು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

0


ಪುತ್ತೂರು: 28 ವರ್ಷದ ಗರ್ಭಿಣಿ ರೇಷ್ಮಾ, ಭಾನುವಾರ ತಡರಾತ್ರಿ ತಮ್ಮ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರ್ಘಟನೆ ಪುತ್ತೂರು ನಗರದ ಹೊರವಲಯದಲ್ಲಿರುವ ಚಿಕ್ಕಪುತ್ತೂರಿನಲ್ಲಿ ನಡೆದಿದೆ.

ಮೃತಗೊಂಡಿರುವವರು ರೇಷ್ಮಾ (28), ಸುರತ್ಕಲ್ ಮೂಲದವಳಾಗಿದ್ದು, ನಾಲ್ಕು ವರ್ಷಗಳ ಹಿಂದೆ ಚಿಕ್ಕಪುತ್ತೂರಿನ ನಿವಾಸಿ ಹಾಗೂ ಪುತ್ತಿಲ ಪರಿವಾರದ ಮುಖಂಡ ಚಿಂತನ್ ಅವರೊಂದಿಗೆ ವಿವಾಹವಾದಳು. ದಂಪತಿಗೆ ಈಗಾಗಲೇ ಓರ್ವ ಮಗಳು ಇದ್ದಾಳೆ. ಆತ್ಮಹತ್ಯೆ ಮಾಡಿಕೊಂಡಾಗ ರೇಷ್ಮಾ ಏಳು ತಿಂಗಳ ಗರ್ಭಿಣಿಯಾಗಿದ್ದಳು ಎಂಬುದೇ ಈ ಘಟನೆಗೆ ಮತ್ತಷ್ಟು ವಿಸ್ಮಯ ಮತ್ತು ದುಃಖವನ್ನುಂಟು ಮಾಡುತ್ತಿದೆ.

ಚಿಂತನ್, ರೇಷ್ಮಾ ಹಾಗೂ ಅವರ ಮಗಳು ಚಿಕ್ಕಪುತ್ತೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕುಟುಂಬದಲ್ಲಿ ಯಾವುದೇ ರೀತಿಯ ಕಲಹದ ಬಗ್ಗೆ ಪ್ರಸ್ತುತವಾಗಿ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ರೇಷ್ಮಾ ಆತ್ಮಹತ್ಯೆಗೆ ಯಾಕೆ ತೀರ್ಮಾನಿಸಿದರೆಂಬುದರ ಬಗ್ಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಪುತ್ತೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.