ಮನೆ ರಾಜ್ಯ ನಂದಿನಿ ತುಪ್ಪ ಹೊರತುಪಡಿಸಿ ಮಿಕ್ಕೆಲ್ಲಾ ತುಪ್ಪದ ಸ್ಯಾಂಪಲ್ ಗುಣಮಟ್ಟ ಪರಿಶೀಲನೆ : ಆರೋಗ್ಯ ಸಚಿವ 

ನಂದಿನಿ ತುಪ್ಪ ಹೊರತುಪಡಿಸಿ ಮಿಕ್ಕೆಲ್ಲಾ ತುಪ್ಪದ ಸ್ಯಾಂಪಲ್ ಗುಣಮಟ್ಟ ಪರಿಶೀಲನೆ : ಆರೋಗ್ಯ ಸಚಿವ 

0

ಬೆಂಗಳೂರು, ಸೆ, 23; ನಂದಿನಿ ತುಪ್ಪ ಹೊರತುಪಡಿಸಿ, ರಾಜ್ಯದಲ್ಲಿ ಮಾರಾಟವಾಗುತ್ತಿರುವ ಎಲ್ಲಾ ತುಪ್ಪದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅದರ ಗುಣಮಟ್ಟ ಕಾಪಾಡಲು ಪರಿಶೀಲನೆ ನಡೆಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Join Our Whatsapp Group


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಾದಗಳ ಸ್ಯಾಂಪಲ್ ಬದಲು ತುಪ್ಪದ ಪರಿಶೀಲನೆ ನಡೆಸಬೇಕು ಎಂದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ತುಪ್ಪ ಬರುತ್ತಿದ್ದು ಎಲ್ಲಾ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರಿಶೀಲಿಸಲು ಸೂಚಿಸಲಾಗಿದೆ. ಇದೇ ವೇಳೆ ತಿರುಪತಿ ಲಡ್ಡು ವಿಚಾರದಲ್ಲಿ ಜನರಿಗೆ ಬಹಳ ಗೊಂದಲ ಶುರುವಾಗಿದ್ದು, ಇದು ಅಘಾತಕಾರಿ ಎಂದು ಅವರು ತಿಳಿಸಿದರು.
ಬಳ್ಳಾರಿಯಲ್ಲಿ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಕಳೆದ  ೧೫ ದಿನಗಳಲ್ಲಿ ೩೫೦ ಟನ್ ನಂದಿನಿ ತುಪ್ಪವನ್ನು ತಿರುಪತಿಗೆ ಕಳಿಸಲಾಗಿದೆ ಎಂದು   ಸ್ಪಷ್ಟಪಡಿಸಿದ್ದಾರೆ. ಎರಡು ಸಾವಿರ ಟನ್ ತುಪ್ಪಕ್ಕೆ ಬೇಡಿಕೆ ಬಂದಿದ್ದು. ಪೂರೈಕೆಗೆ ನಾವು ಸನ್ನದ್ದರಿದ್ದೇವೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ  ಪ್ರಾಣಿಗಳ ಕೊಬ್ಬು ಬಳಕೆ ವಿಚಾರದಿಂದಾಗಿ ಮತ್ತೆ ಕರ್ನಾಟಕದ ನಂದಿನಿ ತುಪ್ಪಕ್ಕೆ ಟಿಡಿಯಿಂದ  ಬೇಡಿಕೆ ಬಂದಿದೆ ಎಂದು ಹೇಳಿದರು.
ತುಪ್ಪ  ತುಂಬಿದ  ಟ್ಯಾಂಕರ್‌ಗೆ ಜಿಪಿಎಸ್ ಅಳವಡಿಕೆ ಮಾಡಿ ಕಳುಹಿಸಿಲು ನಿರ್ಧರಿಸಿದ್ದು,  ತುಪ್ಪ ತುಂಬಿ ಹೊರಟಾಗ ಯಾವುದೇ ರೀತಿಯ ಕಲಬರಕೆಯಾಗದಂತೆ ಜಾಗ್ರತೆ ವಹಿಸಲಾಗಿದೆ. ತಿರುಪತಿ ಮುಟ್ಟಿದ ಕೂಡಲೇ ಒಟಿಪಿ ನೀಡಿದ ಬಳಿಕ ಟ್ಯಾಂಕರ್ ಓಪನ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ವಿಜಯಪುರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್, ತಿರುಪತಿ ಲಡ್ಡು ವಿಚಾರ ಜನರ ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದಾಗಿದ್ದು  ದನದ ಕೊಬ್ಬು ಬೆರಸುವುದು ಘೋರ ಅಪರಾಧ ಎಂದು ತಿಳಿಸಿದ್ದಾರೆ. ವರು ದನದ ಕೊಬ್ಬನ್ನು ಬೆರಸಿದ್ದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಭಕ್ತರ ಭಾವನೆಗಳ ಜೊತೆ ಆಟವಾಡುವುದು ಸರಿಯಲ್ಲ. ಆಗಾಗ ಆಡಳಿತ ಮಂಡಳಿ ಪ್ರಸಾದದ ತಪಾಸಣೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಶಾಸಕ ಮುನಿರತ್ನ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ  ಸ್ವಾಭಾವಿಕವಾಗಿ ಯಾರೂ ಊಹಿಸದ ಆಪಾದನೆಗಳು ಅವರ ಮೇಲೆ ಬರುತ್ತಿವೆ. ಎಲ್ಲದರ ಕುರಿತು ತನಿಖೆ ಆಗಲಿ ಎಂದು ತಿಳಿಸಿದ್ದಾರೆ.