ಮನೆ ಅಪರಾಧ ಆರ್.ಜಿ ಕರ್ ಪ್ರಕರಣ: ಸಂಜಯ್ ರಾಯ್‌ ಗೆ ಗಲ್ಲು ಶಿಕ್ಷೆ ಕೋರಿ ಹೈಕೋರ್ಟ್‌ ಗೆ ಸಿಬಿಐ...

ಆರ್.ಜಿ ಕರ್ ಪ್ರಕರಣ: ಸಂಜಯ್ ರಾಯ್‌ ಗೆ ಗಲ್ಲು ಶಿಕ್ಷೆ ಕೋರಿ ಹೈಕೋರ್ಟ್‌ ಗೆ ಸಿಬಿಐ ಮೊರೆ

0

ಕೋಲ್ಕತ್ತ: ಇಲ್ಲಿನ ಆರ್.ಜಿ ಕರ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಂಜಯ್ ರಾಯ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕೋರಿ ಸಿಬಿಐ ಕಲ್ಕತ್ತ ಹೈಕೋರ್ಟ್‌ ಮೆಟ್ಟಿಲೇರಿದೆ.

Join Our Whatsapp Group

ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ದೇಬಾಂಗ್ಶು ಬಸಕ್‌ ಹಾಗೂ ಮೊಹಮ್ಮದ್ ಶಬ್ಬರ್ ರಶಿದಿ ಅವರಿದ್ದ ಪೀಠದ ಅರ್ಜಿಯ ವಿಚಾರಣೆಯನ್ನು ಜ. 27ಕ್ಕೆ ನಿಗದಿಪಡಿಸಿತ್ತು. ಪಶ್ಚಿಮ ಬಂಗಾಳ ಸರ್ಕಾರವೂ ಇಂಥಹದ್ದೇ ಮನವಿ ಸಲ್ಲಿಸಿದ್ದು, ಒಟ್ಟಿಗೆ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.

ಸಿಬಿಐ ಪರವಾಗಿ ಹಾಜರಿದ್ದ ಡೆಪ್ಯುಟಿ ಸಾಲಿಸಿಟರ್ ಜನರಲ್ ರಾಜ್‌ದೀಪ್ ಮಜುಂದಾರ್, ಪ್ರಕರಣದ ತನಿಖೆ ನಡೆಸಿದ ‌ನಮಗೆ, ವಿಧಿಸಿದ ಶಿಕ್ಷೆಯ ಅಸಮರ್ಪಕತೆಯ ಆಧಾರದ ಮೇಲೆ ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಹಕ್ಕಿದೆ ಎಂದು ಪ್ರತಿಪಾದಿಸಿದರು.

ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್‌ಗೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿ ಸಿಯಾಲ್ದಾ ನ್ಯಾಯಾಲಯ ಜನವರಿ 20 ರಂದು ತೀರ್ಪು ನೀಡಿತ್ತು.