ಮನೆ ಮನರಂಜನೆ ನಾಟ್‌ ಔಟ್‌ ಮೇಲೆ ರಚನಾ ಇಂದರ್‌ ನಿರೀಕ್ಷೆ

ನಾಟ್‌ ಔಟ್‌ ಮೇಲೆ ರಚನಾ ಇಂದರ್‌ ನಿರೀಕ್ಷೆ

0

“ಲವ್‌ ಮಾಕ್ಟೇಲ್‌’ ಚಿತ್ರದಲ್ಲಿ ಸಖತ್‌ ಎನರ್ಜಿಟಿಕ್‌ ಆಗಿ ಪಟ್‌ ಪಟ್‌ ಅಂತಾ ಮಾತನಾಡುತ್ತಾ, ಪ್ರತಿ ಮಾತಿಗೂ “ಹೆಂಗೆ ನಾವೂ’ ಅಂತಾ ಹೇಳುತ್ತಲೇ ಕೋಟಿ ಕನ್ನಡಿಗರ ಹೃದಯ ಗೆದ್ದೆ ಚೆಲುವೆ ರಚನಾ ಇಂದರ್‌.

Join Our Whatsapp Group

ಲವ್‌ ಮಾಕ್ಟೇಲ್‌ ಚಿತ್ರದಲ್ಲಿನ ತಮ್ಮ ಅಭಿನಯಕ್ಕೆ ಸಾಕಷ್ಟು ಪ್ರಶಂಸೆಯನ್ನು ಪಡೆದ ರಚನಾ, ಈಗ ಸಖತ್‌ ಬ್ಯುಸಿಯಾಗಿದ್ದಾರೆ. ಒಂದರ ಮೇಲೊಂದು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರಚನಾ ಸದ್ಯ “ನಾಟ್‌ ಔಟ್‌’ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಹೀಗೊಂದು ಸಿನಿಮಾದಲ್ಲಿ ರಚನಾ ನಟಿಸಿದ್ದು, ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಜುಲೈನಲ್ಲಿ ತೆರೆಗೆ ಬರುತ್ತಿರುವುದರಿಂದ ಸಾಕಷ್ಟು ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ಇತ್ತೀಚೆಗಷ್ಟೇ ರಚನಾ ನಟನೆಯ “4ಎನ್‌6′ ತೆರೆಕಂಡು ಮೆಚ್ಚುಗೆ ಪಡೆದಿತ್ತು.

ಈಗ “ನಾಟ್‌ ಔಟ್‌’ ಸರದಿ. ರಾಷ್ಟ್ರಕೂಟ ಪಿಕ್ಚರ್ಸ್‌ ಲಾಂಛನದಲ್ಲಿ ವಿ.ರವಿಕುಮಾರ್‌ ಹಾಗೂ ಶಮ್ದು ದ್ದೀನ್‌ ಎ ಈ ಚಿತ್ರ ವನ್ನು ನಿರ್ಮಿಸಿದ್ದಾರೆ. ಅಜಯ್‌ ಪೃಥ್ವಿ ಚಿತ್ರದ ನಾಯಕ. ಅಂಬರೀಶ್‌ ನಿರ್ದೇಶನ ಚಿತ್ರಕ್ಕಿದೆ.

“ಕಣ್ಣಿಗೆ ಕಾಣದೆ ಇರುವ ವ್ಯಕ್ತಿ ಕೊಡುವ ತೀರ್ಪು ನಾಟ್‌ಔಟ್ ಪ್ರತಿ ಆಟದಲ್ಲಿ ಒಬ್ಬ ಅಂಪೈರ್‌ ಇರ್ತಾನೆ. ಜೀವನದ ಆಟಕ್ಕೂ ಒಬ್ಬ ಅಂಪೈರ್‌ ಇರ್ತಾನೆ.. ಈ ಚಿತ್ರದಲ್ಲಿ ಹುಲಿ – ಕುರಿ ಎಂಬ ಹಳ್ಳಿ ಸೊಗಡಿನ ಆಟವನ್ನ ಹೇಗೆ ಆಡುತ್ತಾರೋ, ಅದೇ ರೀತಿ ಚಿತ್ರದ ಕಥೆ ಸಾಗುತ್ತೆ. ಆಟದಲ್ಲಿ ಬೆಟ್ಟದ ತುದಿಯಲ್ಲಿರುವ ಹುಲಿಗಳು ಮತ್ತು ಬೆಟ್ಟದ ತಳದಲ್ಲಿರುವ ಕುರಿಗಳು ಬೆಟ್ಟವನ್ನು ಹತ್ತುವಾಗ ಹುಲಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮಾಡುವ ಪ್ರಯತ್ನಗಳು ಆಟದಲ್ಲಿ ಇದ್ದಂತೆ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಅದನ್ನ ನೋಡಬಹುದು’ ಎನ್ನುವುದು ತಂಡದ ಮಾತು.

ಹಿಂದಿನ ಲೇಖನತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: 6 ಜನರ ಬಂಧನ
ಮುಂದಿನ ಲೇಖನಬಂಟ್ವಾಳ: ಕಿಟಕಿ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ