ಮನೆ ಕಾನೂನು ವಿಕಿರಣ ಈಗ ನಿಮ್ಮ ದೇಹದಲ್ಲೇ ಇದೆ: ಸೆಲ್ ಫೋನ್ ಗೋಪುರ ತೆರವಿಗೆ ಕೋರಿದ್ದ ವಕೀಲರಿಗೆ ಮದ್ರಾಸ್...

ವಿಕಿರಣ ಈಗ ನಿಮ್ಮ ದೇಹದಲ್ಲೇ ಇದೆ: ಸೆಲ್ ಫೋನ್ ಗೋಪುರ ತೆರವಿಗೆ ಕೋರಿದ್ದ ವಕೀಲರಿಗೆ ಮದ್ರಾಸ್ ಹೈಕೋರ್ಟ್ ಬುದ್ಧಿಮಾತು

0

ವ್ಯಕ್ತಿಗಳ ಆಯಸ್ಸನ್ನು ಕುಂಠಿತಗೊಳಿಸುವುದರಿಂದ ಸೆಲ್ ಫೋನ್ ಗೋಪುರಗಳನ್ನು ತೆಗೆದುಹಾಕುವಂತೆ ಅರ್ಜಿದಾರರೊಬ್ಬರು ಮದ್ರಾಸ್ ಹೈಕೋರ್ಟ್ ನಲ್ಲಿ ಶುಕ್ರವಾರ ನಡೆದ ವಿಚಾರಣೆ ವೇಳೆ ಮಂಡಿಸಿದ ವಾದ ನ್ಯಾಯಾಲಯದ ಸ್ವಾರಸ್ಯಕರ ಅವಲೋಕನಕ್ಕೆ ಇಂಬು ನೀಡಿತು.

ಈ ವಾದಕ್ಕೆ ಪ್ರತ್ಯುತ್ತರ ನೀಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ಟಿ ರಾಜಾ ಅವರು ವಕೀಲರ ಬಳಿ ಫೋನ್ ಗಳು ಇರುವುದರಿಂದ ಈಗಾಗಲೇ ಅವರ ದೇಹದಲ್ಲಿ ವಿಕಿರಣಗಳಿವೆ ಎಂದರು.

“ನಿಮ್ಮ ಬಳಿ ಇದೀಗ ಎಷ್ಟು ಸೆಲ್ ಫೋನ್ ಇವೆ? ಮೇಲಿನ ಜೇಬಿನಲ್ಲೊಂದು ಕೆಳಗಿನ ಜೇಬಿನಲ್ಲೊಂದು. ವಿಕಿರಣ ಈಗ ನಿಮ್ಮ ದೇಹದಲ್ಲೇ ಇದೆ” ಎಂದು ಅರ್ಜಿದಾರರಿಗೆ ನ್ಯಾಯಾಲಯ ಹೇಳಿತು.

ಆಫ್ರಿಕಾ, ಉತ್ತರ ಅಮೆರಿಕಾ, ದಕ್ಷಿಣ ಅಮೇರಿಕಾ ಹಾಗೂ ಏಷ್ಯಾ ಸೇರಿದಂತೆ ಪ್ರತಿಯೊಂದು ದೇಶ ಮತ್ತು ಖಂಡಗಳಲ್ಲಿ ಅಸ್ತಿತ್ವದಲ್ಲಿವೆ ಎಂದು ನ್ಯಾ ರಾಜಾ ಹೇಳಿದರು.

ಗಮನಾರ್ಹವಾಗಿ, ಸೆಲ್ ಫೋನ್ ಗೋಪುರಗಳು ವಿಕಿರಣ ಸೂಸುತ್ತವೆ ಎಂಬ ಆತಂಕಕ್ಕೆ ವೈಜ್ಞಾನಿಕ ಬೆಂಬಲ ಇಲ್ಲ ಎಂದು ಜೂನ್ 2019ರಲ್ಲಿ, ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಎನ್ ಆನಂದ್ ವೆಂಕಟೇಶ್ ಅವರು ಹೇಳಿದ್ದರು.

“ಸೆಲ್ ಫೋನ್ ಗೋಪುರಗಳು ಸೂಸುವ ವಿಕಿರಣದ ಪರಿಣಾಮದ ಬಗ್ಗೆ ಕೇವಲ ಆತಂಕ ಆಧರಿಸಿ ಗೋಪುರಗಳನ್ನು ನಿರ್ಮಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಈ ನ್ಯಾಯಾಲಯ ಸತತವಾಗಿ ಅಭಿಪ್ರಾಯಪಟ್ಟಿದೆ. ಆತಂಕಕ್ಕೆ ವೈಜ್ಞಾನಿಕ ಬೆಂಬಲ ಇಲ್ಲ. ಸಕಾರಾತ್ಮಕ ಫಲಿತಾಂಶ ದೊರೆಯುವವರೆಗೆ  ಕೇವಲ ಆತಂಕದ ನೆಲೆಯಲ್ಲಿ ಗೋಪುರ ಸ್ಥಾಪಿಸುವುದನ್ನು ತಡೆಯುವಂತಿಲ್ಲ” ಎಂದು ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ರಿಲಯನ್ಸ್ ಜಿಯೋ ಸೆಲ್ ಫೋನ್ ಗೋಪುರಗಳನ್ನು ಸ್ಥಾಪಿಸುವವರಿಗೆ ಪೊಲೀಸ್ ರಕ್ಷಣೆ ನೀಡುವಂತೆ ಅದು ಸೂಚಿಸಿತ್ತು.

ಹಿಂದಿನ ಲೇಖನದ್ವಿಚಕ್ರ ವಾಹನದ ಟೈರ್ ಸ್ಫೋಟಗೊಂಡು ಅಪಾತ: ಗಾಯಗೊಂಡಿದ್ದ ಯುವತಿ ಸಾವು
ಮುಂದಿನ ಲೇಖನಶಿಕಾರಿಪುರದಲ್ಲಿ ಬಿ.ವೈ ವಿಜಯೇಂದ್ರ ಸ್ಪರ್ಧೆ: ಬಿ.ಎಸ್ ಯಡಿಯೂರಪ್ಪ