ಮನೆ ಮನರಂಜನೆ ರಾಗಿಣಿ ದ್ವಿವೇದಿ 3ನೇ ಮಲೆಯಾಳಂ ಚಿತ್ರದ ಫಸ್ಟ್ ಲುಕ್ ರಿಲೀಸ್

ರಾಗಿಣಿ ದ್ವಿವೇದಿ 3ನೇ ಮಲೆಯಾಳಂ ಚಿತ್ರದ ಫಸ್ಟ್ ಲುಕ್ ರಿಲೀಸ್

0

ರಾಗಿಣಿ ದ್ವಿವೇದಿ ತಮ್ಮ ಮೂರನೇ ಮಲೆಯಾಳಂ ಸಿನಿಮಾದ ಫಸ್ಟ್ ಲುಕ್ ಶೇರ್ ಮಾಡಿದ್ದಾರೆ. ಮಲೆಯಾಳಂ ಸೇರಿದಂತೆ ಕನ್ನಡ ಭಾಷೆಯಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದೆ.

Join Our Whatsapp Group

ರಾಗಿಣಿ ಅಭಿನಯದ ಈ ಚಿತ್ರಕ್ಕೆ “ಶೀಲಾ” ಅನ್ನೋ ಶೀರ್ಷಿಕೆಯನ್ನ ಇಡಲಾಗಿದೆ. ಆದರೆ ಚಿತ್ರದ ಫಸ್ಟ್ ಲುಕ್ ಭಯಾನಕವಾಗಿಯೇ ಇದೆ. ಚಿತ್ರದ ನಾಯಕಿ ಶೀಲಾ ಇಲ್ಲಿ ರಕ್ತಸಿಕ್ತ ರೂಪದಲ್ಲಿಯೇ ಕಾಣಿಸುತ್ತಿದ್ದಾರೆ. ಯಾವುದೋ ತೊಂದರೆಗೆ ಸಿಲುಕಿರೋ ಲುಕ್ ಇಲ್ಲಿ ಕಂಡು ಬರುತ್ತದೆ.

ರಾಗಿಣಿ ದ್ವಿವೇದಿ ಇಲ್ಲಿವರೆಗೂ ಈ ರೀತಿಯ ಲುಕ್ ಅಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಆದರೆ ಈ ಹಿಂದೆನೆ ಎರಡು ಮಲೆಯಾಳಂ ಸಿನಿಮಾ ಮಾಡಿದ ಅನುಭವ ರಾಗಿಣಿ ದ್ವಿವೇದಿಗೆ ಇದ್ದೇ ಇದೆ.

ರಾಗಿಣಿ ಈ ಮೊದಲು ಕಂದಹಾರ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದಾದ್ಮೇಲೆ ಫೇಸ್ 2 ಫೇಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಶೀಲಾ ಅನ್ನೋ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹೊಸ ರೀತಿಯ ಅನುಭವ ಕೊಡಲು ಬರ್ತಿದ್ದಾರೆ.

ರಾಗಿಣಿ ದ್ವಿವೇದಿ ನಟನೆಯ ಈ ಚಿತ್ರವನ್ನ ಬಾಲು ನಾರಾಯಣನ್ ನಿರ್ದೇಶನ ಮಾಡಿದ್ದಾರೆ. ಅರುಣ್ ಕೂತದುತ್ ಈ ಚಿತ್ರಕ್ಕೆ ಕ್ಯಾಮೆರಾವರ್ಕ್ ಮಾಡಿದ್ದಾರೆ.

ರಾಗಿಣಿ ದ್ವಿವೇದಿಯ ಈ ಚಿತ್ರದ ಫಸ್ಟ್ ಲುಕ್ ಸದ್ಯ ರಿಲೀಸ್ ಆಗಿದೆ. ಅತಿ ಶೀಘ್ರದಲ್ಲಿಯೇ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗುತ್ತಿದೆ.

ಶೀಲಾ ಸಿನಿಮಾ ನನ್ನ ಮೂರನೇ ಸಿನಿಮಾ ಆಗಿದೆ. ಈ ಚಿತ್ರದ ಫಸ್ಟ್ ಲುಕ್ ಈಗ ರಿಲೀಸ್ ಆಗಿದೆ. ಶೀಘ್ರದಲ್ಲಿಯೇ ಟ್ರೈಲರ್ ರಿಲೀಸ್ ಆಗುತ್ತದೆ ಎಂದು ರಾಗಿಣಿ ತಿಳಿಸಿದ್ದಾರೆ.

ಹಿಂದಿನ ಲೇಖನ15 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ
ಮುಂದಿನ ಲೇಖನಸಮಾಜವು ನೈತಿಕವಾಗಿ ಕೆಟ್ಟವರೆಂದು ಪರಿಗಣಿಸಿದ ಮಾತ್ರಕ್ಕೆ ತಾಯಿಯನ್ನು ಮಗುವಿನ ಯೋಗಕ್ಷೇಮಕ್ಕೆ ಕೆಟ್ಟವರು ಎಂದು ಪರಿಗಣಿಸಲಾಗುವುದಿಲ್ಲ: ಕೇರಳ ಹೈಕೋರ್ಟ್