ಮನೆ ರಾಜಕೀಯ ರಾಹುಲ್ ಗಾಂಧಿಯನ್ನು ಅನರ್ಹ ಮಾಡಿರುವುದು ಉದ್ದೇಶಪೂರ್ವಕ: ಎಚ್.ವಿಶ್ವನಾಥ್

ರಾಹುಲ್ ಗಾಂಧಿಯನ್ನು ಅನರ್ಹ ಮಾಡಿರುವುದು ಉದ್ದೇಶಪೂರ್ವಕ: ಎಚ್.ವಿಶ್ವನಾಥ್

0

ಮೈಸೂರು: ಉದ್ದೇಶ ಪೂರ್ವಕವಾಗಿಯೇ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಲಾಗಿದೆ ಎಂದು ಬಿಜೆಪಿ ಎಂಎಲ್ಸಿ ಅಡಗೂರು ಎಚ್.ವಿಶ್ವನಾಥ್ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, . ಅನರ್ಹಗೊಳಿಸುವ ಉದ್ದೇಶದಿಂದಲೇ ಶಿಕ್ಷೆಯ ಅವಧಿ ವಿಸ್ತರಿಸಲಾಗಿದೆ ಎಂದು ಹರಿಹಾಯ್ದರು.

ಬಿಜೆಪಿ, ಸಾಮಾಜಿಕ ಜಾಲತಾಣಗಳು ಪಪ್ಪು, ಬುದ್ದಿಗೇಡಿ ಅಂತೆಲ್ಲ ಗೇಲಿ ಮಾಡಿದ್ದರು. ಇದಕ್ಕೆ ಭಾರತ್ ಜೋಡೋ ಯಾತ್ರೆ ಮೂಲಕ ಪ್ರತ್ಯುತ್ತರ ನೀಡಿದರು. ಲಂಡನ್ ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದರು.  ಅಲ್ಲಿಂದ ಬಂದ ಬಳಿಕ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ.  ಸ್ಪೀಕರ್ ಕೂಡ ಅವರಿಗೆ ಸಹಕಾರ ನೀಡಲಿಲ್ಲ. ವಿರೋಧ ಪಕ್ಷ, ನಾಯಕರನ್ನು ದಮನ ಮಾಡಲಾಗುತ್ತಿದೆ.  ತಮಗೆ ಬೇಕಾದ ನ್ಯಾಯಾಧೀಶರು ಇರುವ ಕಡೆ ಕೇಸ್ ಹಾಕಿದ್ದರು.  ಜನತಂತ್ರವನ್ನು ಮುಗಿಸಲಾಗುತ್ತಿದೆ ಎಂದು ಕಿಡಿಕಾರಿದರು.

ನಿಮ್ಮವರು ತಪ್ಪು ಮಾಡಿದರೆ ತಪ್ಪಲ್ಲ. ಅದೇ ವಿರೋಧಿಗಳು ಮಾಡಿದರೆ ಐಟಿ, ಇಡಿ ಮೂಲಕ ಕಿರುಕುಳ ನೀಡಲಾಗುತ್ತದೆ. ಪ್ರಧಾನಿಗಳೇ ಕಾಂಗ್ರೆಸ್ ವಿರುದ್ಧ ಯಾವ ರೀತಿ ಮಾಡಿದ್ದಾರೆ ಅನ್ನೋದನ್ನು ನೋಡಿದ್ದೇವೆ.  ಯಾರನ್ನೂ ದಮನ ಮಾಡಲು ಯಾರಿಂದಲೂ ಸಾಧ್ಯವಿಲ್ಲ.  ರಾಹುಲ್ ಗಾಂಧಿ ಸ್ಪರ್ಧೆ ಮಾಡದಂತೆ ತಡೆಯುವ ಪ್ರಯತ್ನ ನಡೆದಿದೆ.  ಬಿಜೆಪಿಯವರು ಆತಂಕದಿಂದ ರಾಹುಲ್ ಗಾಂಧಿ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಸಂಸತ್ತಿನ ಶೇ.54ರಷ್ಟು ಸದಸ್ಯರಿಗೆ ಕ್ರಿಮಿನಲ್ ಹಿನ್ನೆಲೆ ಇದೆ. ಸಂಸದೀಯ ಮಂಡಳಿ ಅವರನ್ನೂ ಅನರ್ಹಗೊಳಿಸಬೇಕು. ರಾಹುಲ್ ಗಾಂಧಿ ಅನರ್ಹತೆಗೆ ತೋರಿದ ಆಸಕ್ತಿಯನ್ನು ಶೇ.54ರಷ್ಟು ಸದಸ್ಯರಿಗೂ ಅನ್ವಯಿಸಿ. ಸಂಸತ್ತಿನಲ್ಲಿ ರೇಪ್ ಮಾಡಿದವರು, ಕಳ್ಳತನ ಮಾಡಿಸಿದವರು, ದುಡ್ಡು ಮಾಡಿದವರು, ಜೈಲು ಶಿಕ್ಷೆ ಅನುಭವಿಸಿದವರು ಸಂಸತ್ತಿನಲ್ಲಿ ಇದ್ದಾರೆ. ಈ ಇಬ್ಬಂದಿತನ ಯಾಕೆ? ಎಂದು ಪ್ರಶ್ನಿಸಿದರು.

ಹಿಂದಿನ ಲೇಖನಸನಾತನ ಸಂಸ್ಥೆ ನಿಷೇಧಿತ, ಭಯೋತ್ಪಾದಕ ಸಂಘಟನೆ ಅಲ್ಲ: ಬಾಂಬೆ ಹೈಕೋರ್ಟ್
ಮುಂದಿನ ಲೇಖನವೈಟ್‌ ಫೀಲ್ಡ್ ಮೆಟ್ರೊ ರೈಲು ಮಾರ್ಗಕ್ಕೆ ಪ್ರಧಾನಿ ಚಾಲನೆ