ಮನೆ ರಾಷ್ಟ್ರೀಯ ರಾಹುಲ್ ಬೌನ್ಸರ್ ರೀತಿ ವರ್ತಿಸುತ್ತಿದ್ದಾರೆ: ಪ್ರತಾಪ್ ಸಾರಂಗಿ ಆರೋಪ

ರಾಹುಲ್ ಬೌನ್ಸರ್ ರೀತಿ ವರ್ತಿಸುತ್ತಿದ್ದಾರೆ: ಪ್ರತಾಪ್ ಸಾರಂಗಿ ಆರೋಪ

0

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗಿಂತ ಹೆಚ್ಚು “ಬೌನ್ಸರ್” ನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದ್ದಾರೆ.

Join Our Whatsapp Group

ಕಳೆದ ವಾರ ಸಂಸತ್ ಆವರಣದ ಹೊರಗೆ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕರ ಜೊತೆ ಬಂದ ರಾಹುಲ್ ಗಾಂಧಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಸಂಸದ ಮುಖೇಶ್ ರಜಪೂತ್ ಅವರನ್ನು ತಳ್ಳಿದ್ದಾರೆ ಎನ್ನಲಾಗಿದೆ ಈ ವೇಳೆ ಮುಖೇಶ್ ಅಲ್ಲೇ ಇದ್ದ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರ ಮೇಲೆ ಬಿದ್ದಿದ್ದಾರೆ ಘಟನೆಯಿಂದ ಸಾರಂಗಿ ಅವರ ತಲೆಗೆ ಗಾಯವಾಗಿತ್ತು ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಸದ್ಯ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಸಾರಂಗಿ ಅವರು ರಾಹುಲ್ ವಿರುದ್ಧ ಕಿಡಿ ಕಾರಿದ್ದಾರೆ. ರಾಹು ವಿರೋಧ ಪಕ್ಷದ ನಾಯಕನಿಗಿಂತ ಹೆಚ್ಚಾಗಿ ಬೌನ್ಸರ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಕೇಂದ್ರ ಸಚಿವ ಅಮಿತ್ ಶಾ ರಾಜೀನಾಮೆ ನೀಡಿಬೇಕೆಂದು ಆಗ್ರಹಿಸಿ ಸಂಸತ್ ಹೊರಗೆ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದರು, ಈ ನಡುವೆ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಅವಮಾನಿಸುತ್ತಿದೆ ಅಂದು ಹೇಳಿ ಬಿಜೆಪಿ ನಾಯಕರು ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ, ಎರಡು ಪಕ್ಷದ ನಾಯಕರು ಸಂಸತ್ ಹೊರಗೆ ಪ್ರತಿಭಟನೆ ನಡೆಸುವ ವೇಳೆ ನೂಕಾಟ ತಳ್ಳಾಟ ನಡೆಸಿದೆ.