ರಾಯಚೂರು: ದೇವದುರ್ಗ ತಾಲೂಕಿನ ಜಾಗಟಗಲ್ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಎಂಟು ಗುಡಿಸಲುಗಳು ಮತ್ತು ಕೋಟ್ಯಾಂತರ ರೂ ಮೌಲ್ಯದ ಹತ್ತಿ ಭಸ್ಮವಾದ ಘಟನೆ ನಡೆದಿದೆ.
ಆಂಧ್ರ ಪ್ರದೇಶ ಮೂಲದ ನಾಗೇಶ್ವರರಾವ್, ರಾಮಕೃಷ್ಣ, ಶೇಷಯ್ಯ ಎಂಬುವವರಿಗೆ ಸೇರಿದ ಗುಡಿಸಲುಗಳು ಬೆಂಕಿಗಾಹುತಿಯಾಗಿವೆ.
ಒಂದು ಸಾವಿರ ಕ್ವಿಂಟಲ್ ಹತ್ತಿ, 30 ಲಕ್ಷ ನಗದು, ಚಿನ್ನಾಭರಣ ಜತೆಗೆ ಗುಡಿಸಲುಗಳಲ್ಲಿದ್ದ ದವಸ ಧಾನ್ಯ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮೆಣಸಿನಕಾಯಿ ಬೆಳೆ ಮಾರಾಟ ಮಾಡಿದ್ದ ಲಕ್ಷಾಂತರ ರೂ. ನಗದು ಕೂಡ ಬೆಂಕಿಗಾಹುತಿಯಾಗಿದೆ. ವಿದ್ಯುತ್ ತಂತಿ ತುಂಡಾಗಿ ಗುಡಿಸಲುಗಳ ಮೇಲೆ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ.
ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆ ಭಾಗಶಃ ಹಾನಿ ಸಂಭವಿಸಿತ್ತು. ಬೆಂಕಿಯ ನಂದಿಸಲು ಹರಸಾಹಸ ಪಡಬೇಕಾಯಿತು. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Saval TV on YouTube