ರಾಯಚೂರು(Raichur): ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಹೊರವಲಯದ ಹೆದ್ದಾರಿ ರಸ್ತೆ ಬಳಿ ಗ್ರಾಮ ಪಂಚಾಯತ್ ಪಿಡಿಒ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ದೇವರಭೂಪುರ ಗ್ರಾಮದ ನಿವಾಸಿ ಹಾಗೂ ಪಿಡಿಒ ಗಜದಂಡಯ್ಯ ಸ್ವಾಮಿ (51) ಮೃತರು.
ಬನ್ನಿ ಕೊಡುವ ನೆಪದಲ್ಲಿ ಮನೆಗೆ ಬಂದು ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೇ, ಕೊಲೆ ನಡೆದ ಸ್ಥಳದ ಬಳಿ ಇರೋ ರಸ್ತೆ ಮೇಲೆ ಬೈಕ್, ಚಪ್ಪಲಿ ಹಾಗೂ ಹೆಲ್ಮೆಟ್ ಇಟ್ಟಿರುವುದು ಕಂಡುಬಂದಿದೆ.
ಲಿಂಗಸೂಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Saval TV on YouTube