ಮನೆ ಅಪರಾಧ ರಾಯಚೂರು: ಸರ್ಕಾರಿ ಆಸ್ಪತ್ರೆಯಿಂದ ಲಕ್ಷಾಂತರ ರೂ. ಮೌಲ್ಯದ ಉಪಕರಣ ಕಳವು

ರಾಯಚೂರು: ಸರ್ಕಾರಿ ಆಸ್ಪತ್ರೆಯಿಂದ ಲಕ್ಷಾಂತರ ರೂ. ಮೌಲ್ಯದ ಉಪಕರಣ ಕಳವು

0

ರಾಯಚೂರು, ಅಕ್ಟೋಬರ್ 18: ಜಿಲ್ಲೆಯ ದೇವದುರ್ಗ ತಾಲೂಕು ಆಸ್ಪತ್ರೆಯ ಪ್ರಯೋಗಾಲಯದ ಬೀಗ ಮುರಿದು ಸಿಸಿಟಿವಿಗಳ ಡಿವಿಆರ್ ಸಮೇತ ಲ್ಯಾಬ್ ​​ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

Join Our Whatsapp Group

ರಕ್ತ ಪರೀಕ್ಷೆ ಮಾಡುವ ಅತ್ಯಾಧುನಿಕ ಯಂತ್ರ, ಎಲೆಕ್ಟ್ರೋ‌ಲೈಟ್ ಸೇರಿದಂತೆ ಬೆಲೆ ಬಾಳುವ ವಸ್ತುಗಳು ಸೇರಿದಂತೆ ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಮೂರು ಯಂತ್ರೋಪಕರಣಗಳು ಕಳವಾಗಿವೆ.

ಐದು ಲಕ್ಷ ರೂಪಾಯಿ ಮೌಲ್ಯದ ಎಜಿಡಿ ಫುಲಿ ಆಟೋಮೇಟೆಡ್ ಅನಲೈಸರ್, ಐದು ಲಕ್ಷ ಮೌಲ್ಯದ ಹೆಮೆಟಲಜಿ (ರಕ್ತಶಾಸ್ತ್ರ) ಅನಲೈಸರ್, 59 ಸಾವಿರ ಮೌಲ್ಯದ ಎಲೆಕ್ಟ್ರೋಲೈಟ್ ಕಳವಾಗಿವೆ. ಒಟ್ಟಾರೆಯಾಗಿ 10.59 ಲಕ್ಷ ರೂ. ಮೌಲ್ಯದ ಯಂತ್ರೋಪಕರಣಗಳ ಕಳ್ಳತನವಾಗಿದೆ.

ಸದ್ಯ ತಾಲೂಕು ವೈದ್ಯಾಧಿಕಾರಿ ಡಾ. ಶಿವಾನಂದ್ ದೇವದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ, ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ದೇವದುರ್ಗ ಪೊಲೀಸರಿಂದ ಪ್ರಾಥಮಿಕ ಹಂತದ ತನಿಖೆ ಪ್ರಗತಿಯಲ್ಲಿದೆ.