ರಾಯಚೂರು: ಲಂಚ ಸ್ವೀಕರಿಸುವ ವೇಳೆ ರಾಯಚೂರು ಜಿಲ್ಲೆಯ ಗಬ್ಬೂರು ಠಾಣೆ ಪಿಎಸ್ಐ ಮಂಜುನಾಥ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಿನ್ನೆ ಐಪಿಎಲ್ ಬೆಟ್ಟಿಂಗ್ ಆಡುತ್ತಿದ್ದ ಎನ್ನಲಾದ ಯುವಕನ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ (ಶುಕ್ರವಾರ) ಗಬ್ಬೂರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಲಂಚ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ.
ಪಿಎಸ್ಐ ಮಂಜುನಾಥ ಕೆ. ಅವರು ಯುವಕ ಫಾರೂಕ್ ಎಂಬಾತನಿಗೆ ಒಟ್ಟು ಎರಡು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿದೆ. ಪಿಎಸ್ಐ ಬೇಡಿಕೆಯಂತೆ 70 ಸಾವಿರ ರೂಪಾಯಿ ಹಣವನ್ನು ನೀಡಿದ್ದ ಫಾರೂಕ್, 30 ಸಾವಿರ ರೂಪಾಯಿಯನ್ನು ಫೋನ್ ಪೇ ಮೂಲಕ ಕಳಿಸಿದ್ದ. ಇನ್ನುಳಿದ ಒಂದು ಲಕ್ಷ ರೂಪಾಯಿ ಕೊಡುವಂತೆ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಯುವಕ ಲೋಕಾಯುಕ್ತರಿಗೆ ದೂರು ನೀಡಿದ್ದ.
ಯುವಕ ನೀಡಿದ ದೂರು ಹಾಗೂ ಫೋನ್ ಪೇ ಮೂಲಕ ಹಣ ಕಳಿಸಿರುವ ದಾಖಲೆ ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಗಬ್ಬೂರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಸದ್ಯ ಪಿಎಸ್ಐ ಮಂಜುನಾಥ ಹಾಗೂ ಠಾಣೆಯ ಓರ್ವ ಕಾನ್ಸ್ಟೇಬಲ್ನನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಓರ್ವ ಪೊಲೀಸ್ ಕಾನಸ್ಟೇಬಲ್ ಸಹ ಸಿಕ್ಕಿಬಿದ್ದಿದ್ದಾರೆ.