ರಾಯಚೂರು: ಜೆಸಿಬಿ ಹರಿದು ಜಮೀನಿನಲ್ಲಿ ಮಲಗಿದ್ದ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಜಲ್ಲೆಯ ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದ ಬಳಿ ನಡೆದಿದೆ.
ಛತ್ತೀಸ್ಗಢ ಮೂಲದವರಾದ ವಿಷ್ಣು(26), ಶಿವರಾಮ್(28), ಬಲರಾಮ್(30) ಮೃತ ದುರ್ದೈವಿಗಳು.
ಜಮೀನಿನಲ್ಲಿ ಬೋರ್ ವೆಲ್ ಕೊರೆದು ಕಾಲುದಾರಿಯಲ್ಲಿಯೇ ರಾತ್ರಿ ಮೂವರು ಮಲಗಿದ್ದರು. ಈ ವೇಳೆ ಕಾಲುದಾರಿಯಲ್ಲಿ ಬಂದ ಜೆಸಿಬಿ, ಮೂವರು ಮೇಲೂ ಹರಿದು ಸ್ಥಳದಲ್ಲೇ ಧಾರುಣ ಅಂತ್ಯ ಕಂಡಿದ್ದಾರೆ.
ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.