ಮನೆ ಸುದ್ದಿ ಜಾಲ ಮಾದಕವಸ್ತು ಜಾಲದ ಮೇಲೆ 500 ಪೊಲೀಸರಿಂದ ರೇಡ್..!

ಮಾದಕವಸ್ತು ಜಾಲದ ಮೇಲೆ 500 ಪೊಲೀಸರಿಂದ ರೇಡ್..!

0

ನವದೆಹಲಿ : ಮಾದಕವಸ್ತು ಜಾಲದ ಮೇಲೆ ದೆಹಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ, 63 ಜನರನ್ನು ಬಂಧಿಸಿದ್ದಾರೆ. ಈ ವೇಳೆ ವಿವಿಧ ಮಾದರಿಯ ಡ್ರಗ್ಸ್, 15 ಪಿಸ್ತೂಲ್ ಸೇರಿ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ 40 ವಿಶೇಷ ತಂಡಗಳು ಹಾಗೂ 500 ಪೊಲೀಸ್ ಸಿಬ್ಬಂದಿ ಒಳಗೊಂಡಿದ್ದರು. ದೆಹಲಿ ನಗರದಾದ್ಯಂತ ನಡೆಸಿದ ದಾಳಿಯಲ್ಲಿ 15 ಪಿಸ್ತೂಲ್‌ಗಳು, ಅಧಿಕ ಪ್ರಮಾಣದ ವಿವಿಧ ಮಾದರಿಯ ಡ್ರಗ್ಸ್‌ಗಳಾದ MBMA, ಕೊಕೇನ್, ಹೆರಾಯಿನ್ ಹಾಗೂ ನಗದು ಜಪ್ತಿ ಮಾಡಿದ್ದಾರೆ ಹಾಗೂ ದಾಳಿಯಲ್ಲಿ ಒಟ್ಟು 63 ಜನರನ್ನು ಬಂಧಿಸಿದ್ದಾರೆ.

ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಮಾದಕ ವಸ್ತುಗಳ ಕಳ್ಳಸಾಗಣೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ. ನಿಖರವಾದ ಮಾಹಿತಿ ಮೇರೆಗೆ ಆಗ್ನೇಯ ದೆಹಲಿಯಲ್ಲಿರುವ ಜಾಲಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.