ಮನೆ ಅಪರಾಧ ಅಕ್ರಮ ಗೋಮಾಂಸ ಮಾರಾಟ ಅಡ್ಡೆ ಮೇಲೆ ದಾಳಿ: ಟನ್ ಗಟ್ಟಲೇ ಗೋಮಾಂಸ ವಶ

ಅಕ್ರಮ ಗೋಮಾಂಸ ಮಾರಾಟ ಅಡ್ಡೆ ಮೇಲೆ ದಾಳಿ: ಟನ್ ಗಟ್ಟಲೇ ಗೋಮಾಂಸ ವಶ

0

ತುಮಕೂರು: ಅಕ್ರಮ ಗೋಮಾಂಸ ಮಾರಾಟ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಟನ್ ಗಟ್ಟಲೇ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ತುಮಕೂರಿನ ಮರಳೂರು ದಿಣ್ಣೆ 12ನೇ ಕ್ರಾಸಿನ ಸರ್ದಾರ್ ಎಂಬುವವರ ಮನೆಯಲ್ಲಿ‌ ಅಕ್ರಮ ಗೋಮಾಂಸ ಅಡ್ಡೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಯನಗರ ಪೊಲೀಸ್ ಠಾಣೆ ಪಿಎಸ್ ಐ ಮಹಾಲಕ್ಷಮ್ಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ದಾಳಿ ವೇಳೆ ಅಕ್ರಮ ಗೋಮಾಂಸ ಅಡ್ಡೆ ನಡೆಸುತ್ತಿದ್ದ ಆರೋಪಿ ಪರಾರಿಯಾಗಿದ್ದಾನೆ.