ಮನೆ ಹವಮಾನ ಮುಂದಿನ ಒಂದು ವಾರ ರಾಜ್ಯದ ಹಲವೆಡೆ ಮಳೆ

ಮುಂದಿನ ಒಂದು ವಾರ ರಾಜ್ಯದ ಹಲವೆಡೆ ಮಳೆ

0

ಬೆಂಗಳೂರು: ಮುಂದಿನ ಒಂದು ವಾರಗಳವರೆಗೆ ಬೆಂಗಳೂರು ಸೇರಿ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Join Our Whatsapp Group

ಬೆಂಗಳೂರಿನಲ್ಲಿ ಬುಧವಾರ ರಾತ್ರಿಯಿಂದಲೇ ಮಳೆ ಶುರುವಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ವಿಜಯನಗರ, ಮಂಡ್ಯ, ಮೈಸೂರು, ಹಾಸನ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್​ನಲ್ಲಿ ಸಾಧಾರಣ ಮಳೆಯಾಗಲಿದೆ. ಕಿರವತ್ತಿ, ಕೊಲ್ಲೂರು, ಹುಂಚದಕಟ್ಟೆ, ಮುಂಡಗೋಡು, ಕದ್ರಾ, ಸಿದ್ದಾಪುರ, ತ್ಯಾಗರ್ತಿ, ಜಯಪುರ, ಎನ್​ಆರ್​ಪುರ, ಬನವಾಸಿ, ಕಾರವಾರ, ಲೋಂಡಾ, ಆಗುಂಬೆ, ಹಿರೇಕೆರೂರು, ಕೊಟ್ಟಿಗೆಹಾರ, ಹಳಿಯಾಳ, ಯಲ್ಲಾಪುರ, ಕುಂದಗೋಳ, ಹಾವೇರಿ, ಶೃಂಗೇರಿ, ಕೊಪ್ಪ, ಮೂಡಿಗೆರೆ, ಕುಮಟಾ, ಬೆಳಗಾವಿ, ಕಳಸ, ಬಾಳೆಹೊನ್ನೂರು, ದಾವಣಗೆರೆಯಲ್ಲಿ ಮಳೆಯಾಗಿದೆ.

ಗೋಕರ್ಣ, ಗೇರುಸೊಪ್ಪ, ಧಾರವಾಡ, ಲಕ್ಷ್ಮೇಶ್ವರ, ಧಾರವಾಡ, ನಾಯಕನಹಟ್ಟಿ, ಕಮ್ಮರಡಿ, ಕುಂದಾಪುರ, ಮಂಕಿ, ಹೊನ್ನಾವರ, ಧರ್ಮಸ್ಥಳ, ಕೋಟ, ಉಡುಪಿ, ಬೈಲಹೊಂಗಲ, ನಾಪೋಕ್ಲು, ಚನ್ನಗಿರಿ, ನರಗುಂದ, ದಾವಣಗೆರೆ, ಬೇಲೂರು, ಸೋಮವಾರಪೇಟೆಯಲ್ಲಿ ಮಳೆಯಾಗಿದೆ.