ಮನೆ ಕ್ರೀಡೆ ಭಾರತ – ಐರ್ಲೆಂಡ್ ಟಿ20 ಪಂದ್ಯಕ್ಕೆ ಮಳೆ ಅಡ್ಡಿ: ಭಾರತ ತಂಡಕ್ಕೆ 2 ರನ್ ನಿಂದ...

ಭಾರತ – ಐರ್ಲೆಂಡ್ ಟಿ20 ಪಂದ್ಯಕ್ಕೆ ಮಳೆ ಅಡ್ಡಿ: ಭಾರತ ತಂಡಕ್ಕೆ 2 ರನ್ ನಿಂದ ಗೆಲುವು

0

ಡಬ್ಲಿನ್, ಐರ್ಲೆಂಡ್: ವಿಲೇಜ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ ತಂಡ 2 ರನ್ ಗಳ ರೋಚಕ ಜಯ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತ್ತು. ಐರ್ಲೆಂಡ್ ಪರ ಬ್ಯಾರಿ ಮೆಕಾರ್ಥಿ ಅರ್ಧಶತಕ ಗಳಿಸಿ ಗರಿಷ್ಠ ಸ್ಕೋರರ್ ಆದರು. ಭಾರತದ ಪರ ಬುಮ್ರಾ, ಪ್ರಸಿದ್ಧ ಕೃಷ್ಣ ಮತ್ತು ರವಿ ಬಿಷ್ನೋಯಿ ತಲಾ 2 ವಿಕೆಟ್ ಪಡೆದು ಮಿಂಚಿದರು.

140 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 47/2 ಎಂಬ ಹಂತದಲ್ಲಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದಡಿ ಎರಡು ರನ್ ಗಳ ಲೀಡ್ ಪಡೆದಿತ್ತು. ಮಳೆ ಕಡಿಮೆಯಾಗುತ್ತಿದ್ದಂತೆ ಅಂಪೈರ್ ಗಳು ಡಕ್ವರ್ತ್ ಲೂಯಿಸ್ ವಿಧಾನದಲ್ಲಿ ಭಾರತವನ್ನು ಜಯ ಕಂಡಿತು.

ಹಿಂದಿನ ಲೇಖನಮೈ-ಬೆಂ ರಾಷ್ಟ್ರೀಯ ಹೆದ್ದಾರಿಯಲ್ಲಿ  ಓಡಾಡುವ ವಾಹನ ಸವಾರರೇ ಎಚ್ಚರ: ಹೆಚ್ಚುತ್ತಿವೆ ದರೋಡೆ ಪ್ರಕರಣಗಳು
ಮುಂದಿನ ಲೇಖನ2 ಲಕ್ಷ ರೂ.ಗೆ ಬಾಲಕಿ ಖರೀದಿಸಿ ವೇಶ್ಯಾವೃತ್ತಿಗೆ ಬಳಕೆ: ಅಪ್ರಾಪ್ತೆಯನ್ನು ರಕ್ಷಿಸಿದ ಒಡನಾಡಿ ಸೇವಾ ಸಂಸ್ಥೆ