ಮನೆ ರಾಜ್ಯ ರೈತ ದಸರಾ: ಗಮನ ಸೆಳೆಯಲಿರುವ ಚಾರ್ಲಿ 777 ಖ್ಯಾತಿಯ ಶ್ವಾನ

ರೈತ ದಸರಾ: ಗಮನ ಸೆಳೆಯಲಿರುವ ಚಾರ್ಲಿ 777 ಖ್ಯಾತಿಯ ಶ್ವಾನ

0

ಮೈಸೂರು(Mysuru): ಸೆ.30ರಿಂದ ನಡೆಯುವ ರೈತ ದಸರೆಯಲ್ಲಿ ಇದೇ ಮೊದಲ ಬಾರಿಗೆ ಸಾಕುಪ್ರಾಣಿಗಳು ಆಗಮಿಸಲಿದ್ದು, ‘ಚಾರ್ಲಿ 777’ ಸಿನಿಮಾ ಖ್ಯಾತಿಯ ಶ್ವಾನ ಪ್ರಮುಖ ಆಕರ್ಷಣೆಯಾಗಿರಲಿದೆ.

ಇಂದು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ರೈತ ದಸರಾ ಉಪಸಮಿತಿಯ ಕಾರ್ಯದರ್ಶಿ ಷಡಕ್ಷರಿ, ಮೈಸೂರು ವಿಶ್ವವಿದ್ಯಾಲಯದ ಸ್ಫೋಟ್ಸ್‌ ಪೆವಿಲಿಯನ್‌ ಹಾಕಿ ಮೈದಾನದಲ್ಲಿ ಸೆ.2ರಂದು ಬೆಳಿಗ್ಗೆ 10.30ಕ್ಕೆ ‘ಸಾಕು ಪ್ರಾಣಿಗಳ ಪ್ರದರ್ಶನ’ಕ್ಕೆ ಸಚಿವ ಎಸ್‌.ಟಿ.ಸೋಮಶೇಖರ್ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

 ‘ಚಾರ್ಲಿ 777’ ಜೊತೆ ತರಬೇತುದಾರ ಪ್ರಮೋದ್ ತಾರಾ ಮೆರಗು ನೀಡಲಿದ್ದಾರೆ. ‘ಸಂಜೆ 5.30ಕ್ಕೆ ವಿಜೇತ ಪ್ರಾಣಿಗಳ ಮಾಲೀಕರಿಗೆ ಬಹುಮಾನವನ್ನು ಪಶುಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ವಿತರಿಸಲಿದ್ದಾರೆ ಎಂದರು.

ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ: ಜೆ.ಕೆ. ಮೈದಾನದಲ್ಲಿ ಅ.1ರಂದು ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ. ಸೆ.29ಕ್ಕೆ ರಾಜ್ಯದ ವಿವಿಧೆಡೆಯಿಂದ ಗೋವಿನ ಪಾಲಕರು ಹಸುಗಳೊಂದಿಗೆ ಆಗಮಿಸಲಿದ್ದಾರೆ. ಸೆ.30 ರಂದು ಹಸುಗಳಿಗೆ ವಿಶ್ರಾಂತಿ‌ ಇದ್ದು, 1ರಂದು ಸ್ಪರ್ಧೆ ನಡೆಯಲಿದೆ ಎಂದು ಷಡಕ್ಷರಿ ಮಾಹಿತಿ ನೀಡಿದರು.

ಗೆದ್ದ ನಾಲ್ವರಿಗೆ ಕ್ರಮವಾಗಿ ₹50 ಸಾವಿರ, ₹40 ಸಾವಿರ, ₹30 ಸಾವಿರ ಹಾಗೂ ₹20 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.

ರೈತ ದಸರೆಯ ಉಪವಿಶೇಷಾಧಿಕಾರಿ ಡಾ.ಎಂ.ಕೃಷ್ಣರಾಜು, ಕಾರ್ಯಾಧ್ಯಕ್ಷ ಡಾ.ಬಿ.ಎಸ್.ಚಂದ್ರಶೇಖರ ಇದ್ದರು.

ಹಿಂದಿನ ಲೇಖನತನ್ನ ತೀರ್ಪುಗಳನ್ನು ಪರೋಕ್ಷವಾಗಿ ಪರಿಶೀಲನೆಗೆ ಒಡ್ಡುವ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೆಂಡಾಮಂಡಲ; 20 ಲಕ್ಷ ರೂ.ದಂಡ
ಮುಂದಿನ ಲೇಖನಕಾಂಗ್ರೆಸ್‌ನವರು ಭಯ ಮತ್ತು ಭ್ರಮೆಯಲ್ಲಿ ಬದುಕುತ್ತಿದ್ದಾರೆ: ಪ್ರಲ್ಹಾದ ಜೋಶಿ