ಮನೆ ರಾಜ್ಯ ಶೌಚಾಲಯದಲ್ಲಿದ್ದ, ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು

ಶೌಚಾಲಯದಲ್ಲಿದ್ದ, ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು

0

ಬೆಂಗಳೂರು : ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ನಟ ಸುದೀಪ್ ಸಿನಿಮಾದ ಹಾಡು ಹಾಕಿ ಡಾಗ್ ಸತೀಶ್ ಅವಮಾನಿಸಿದ್ದಾರೆ ಎಂದು ಆರೋಪಿಸಿ ರಜತ್ ಕಿಶನ್ ದೂರು ನೀಡಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸುದೀಪ್ ಅಭಿಮಾನಿಗಳ ಸಂಘದ ಜೊತೆ ಬಂದು ರಜತ್ ಕಿಶನ್, ಧನರಾಜ್ ಸೇರಿ ಡಾಗ್ ಸತೀಶ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಚೆನ್ನಮ್ಮನ ಅಚ್ಚುಕಟ್ಟು ಠಾಣೆಗೆ ದೂರು ಕೊಡುವಂತೆ ಸೂಚಿಸಿದ್ದಾರೆ.

ಕಿಚ್ಚ ಸುದೀಪ್ ಹಾಡನ್ನು ಬೇಕಾಬಿಟ್ಟಿ ಎಡಿಟ್ ಮಾಡಿ, ಶೌಚಾಲಯದ ವಿಡಿಯೋಗೆ ಹಾಕಿದ್ದಾರೆ. ಕೆಲ ಸಂದರ್ಶನದಲ್ಲಿ ಇವರಿಗೆಲ್ಲ ನನ್ನ ನೋಡಿ ಹೊಟ್ಟೆ ಉರಿ, ನನ್ನ ಪಬ್ಲಿಸಿಟಿ ನೋಡಿ ತಡೆಯೋಕೆ ಆಗ್ತಿಲ್ಲ ಅಂತಾ ಹೇಳಿಕೆ ಕೊಟ್ಟಿದ್ದಾರೆ. ರಜತ್‌ನ ನಾನು ಚೆನ್ನಾಗಿ ರೋಸ್ಟ್ ಮಾಡಿದ್ದೇನೆ ಅಂತಾ ಡಾಗ್ ಸತೀಶ್ ಹೇಳಿದ್ದಾರೆ ಎಂದು ಆರೋಪಿಸಿ ವಿಡಿಯೋ ಸಮೇತ ತೋರಿಸಿ, ವೈಯಕ್ತಿಕ ತೇಜೋವಧೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಸಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ರಜತ್ ಕಿಶನ್, ಸುದೀಪ್ ಸರ್ ಬಗ್ಗೆ ಏಕವಚನದಲ್ಲಿ ಮಾತನಾಡೋದು ಸರಿಯಲ್ಲ. ಅಲ್ಲದೇ ಅವರ ಹಾಡನ್ನು ಟಾಯ್ಲೆಟ್‌ನಲ್ಲಿನ ವಿಡಿಯೋಗೆ ಹಾಕಿ ಅವಮಾನ ಮಾಡಿದ್ದಾನೆ. ಮೇರು ನಟನಿಗೆ ಅವಮಾನ ಮಾಡೋದು ಸರಿಯಲ್ಲ. ಒಬ್ಬ ಕನ್ನಡದ ಸೂಪರ್ ಸ್ಟಾರ್ ಬಗ್ಗೆ ಹೀಗೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಹಾಕೋದು ತಪ್ಪು. ಸುದೀಪ್ ಅಭಿಮಾನಿಗಳ ಸಂಘದ ಜೊತೆ ಬಂದು ಇವತ್ತು ದೂರು ಕೊಟ್ಟಿದ್ದೇನೆ. ಇಲ್ಲಿಗೆ ಸುಮ್ಮನಾಗದಿದ್ದರೆ ಮುಂದೆ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತೆ. ಫೋನ್ ಮಾಡಿದ್ರೂ ಫೋನ್ ರಿಸೀವ್ ಮಾಡಲ್ಲ. ನೇರವಾಗಿ ಎದುರಿಸೋಕೆ ಅವನಿಗೆ ಧೈರ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.