ಹಾಸನ(Hassan): ರಾಜ್ಯಸಭೆ ಚುನಾವಣೆಯಲ್ಲಿ ಎರಡನೇ ಅಭ್ಯರ್ಥಿ ಹಾಕಿರುವ ಕಾಂಗ್ರೆಸ್ ನವರು, ನಮ್ಮ ವೋಟು ಕೇಳಲ್ಲ ಎಂದರೇ ಬಹುಶಃ ಬಿಜೆಪಿ ವೋಟ್ ಕೇಳ್ತಾರೊ ಗೊತ್ತಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ಲೇವಡಿ ಮಾಡಿದರು.
ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಒಂದು ಕಡೆ ಕೋಮುವಾದಿಗಳನ್ನು ದೂರವಿಡಿ ಎಂದು ಹೇಳ್ತಾರೆ. ಇನ್ನೊಂದು ಕಡೆ ಜಾತ್ಯತೀತ ಪಕ್ಷಗಳ ಮತ ಬೇಡ ಎನ್ನುತ್ತಾರೆ ಎಂದ ಅವರು, ನಾವು ಸೋನಿಯಾ ಗಾಂಧಿ ಅವರನ್ನು ಕೇಳಿದ್ವಿ. ಆದರೆ, ರಾಜ್ಯದ ಕಾಂಗ್ರೆಸ್ ನಲ್ಲಿ ಮೇಡಂ ಮಾತಿಗೂ ಬೆಲೆ ಇಲ್ಲ ಎಂದರೆ ನಾವೇನು ಮಾಡುವುದು ಎಂದು ಪ್ರಶ್ನಿಸಿದರು.
ರಾಜ್ಯಸಭೆ ಚುನಾವಣೆ ಬಗ್ಗೆ ದೇವೇಗೌಡ್ರು, ಕುಮಾರಸ್ವಾಮಿ ನೋಡಿಕೊಳ್ತಾರೆ. ಬಿಜೆಪಿ, ಜೆಡಿಎಸ್‌ಗೆ ತಲಾ 32 ಮತಗಳಿವೆ. ನಮಗೆ ಇನ್ನೂ ಒಂದು ಮತ ಬೇಕು. ಜೂ.10 ಕ್ಕೆ ಏನಾಗುತ್ತೆ ನೋಡೋಣ ಎಂದರು.