“ರಾಕ್ಷಸ ತಂತ್ರ’ ಎಂಬ ಸಿನಿಮಾವೊಂದು ತಯಾರಾಗಿದೆ. ಮೇಘಾ ಅಕ್ಷರಾ ಈ ಸಿನಿಮಾ ನಿರ್ದೇಶಕಿ. ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಇವರದ್ದೇ. ಐದು ಜನ ಸ್ನೇಹಿತರು ವಿಡಿಯೋ ಕಾನ್ಫರೆನ್ಸ್ ಕಾಲ್ ಮಾಡಿಕೊಂಡಿರುವಾಗ ಒಂದು ವಿಚಿತ್ರವನ್ನು ನೋಡುತ್ತಾರೆ. ಅದರಿಂದ ಮುಂದೆ ಏನೇನಾಗುತ್ತದೆ ಎಂಬುದು ಕಥಾಹಂದರ. ಇದನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಾರಂತೆ ಮೇಘಾ ಅಕ್ಷರಾ.
ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತೇನಿಲ್ಲ, ಐದು ಪಾತ್ರಗಳೂ ಅಷ್ಟೇ ಪ್ರಮುಖವಾಗಿವೆ. ಎಲ್ಲಾ ಪಾತ್ರಗಳೂ ಇಡೀ ಸಿನಿಮಾ ಕಾಣಿಸುತ್ತವೆ. ರಾತ್ರಿ ಆರಂಭವಾಗಿ ಬೆಳಗಿನ ಜಾವದ ವೇಳೆಗೆ ಮುಗಿಯುವ ಕಥೆಯಿದು.
ಈ ಚಿತ್ರದ ಬಹುತೇಕ ಚಿತ್ರೀಕರಣ ಒಳಾಂಗಣ ದಲ್ಲೇ ನಡೆದಿದೆ. ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ರಕ್ಷಿತಾ ನಾಗರಾಜು, ಸುಖೇಶ್ ಆನಂದ್, ರಕ್ಷಿತಾ ಮಲ್ಲಿಕ್, ತಿಲಕ್ ಕುಮಾರ್ ಹಾಗೂ ಮೇಘಾ ಅಕ್ಷರಾ ಕೂಡ ನಟಿಸಿದ್ದಾರೆ.
Saval TV on YouTube